This page has not been fully proofread.

29
 
66
 
ಮಿಂಚಿನಬಳ್ಳಿ
 
ಜಗನ್ನಾಥನಾದ ರಾಮಚಂದ್ರನೆಲ್ಲಿದ್ದಾನೆ ? ಅತ್ತಿಗೆ ಸೀತೆಯಲ್ಲಿರು
 
ವಳು ??
 
ಭರತನಿಗೆ ಪ್ರಿಯವಾದ ವಾರ್ತೆಯನ್ನರಹುತ್ತಿರುವೆನೆಂಬ ಹೆಮ್ಮೆಯಿಂದ
ಕೈಕೇಯಿ ಕಣ್ಣರಳಿಸಿ ನುಡಿದಳು:
 
"ರಾಮ-ಸೀತೆಯರು ಚೀರಧಾರಿಗಳಾಗಿ ಕಾಡಿಗೆ ಹೊರಟು ಹೋದರು.
ಲಕ್ಷ್ಮಣನೂ ಅವರ ಜತೆಗೇ ಹೋದನು."
 
ಭರತನಿಗೆ ಒಂದೂ ಅರಿವಾಗಲಿಲ್ಲ. ಅವನು ಕಂಗಾಲಾಗಿ ಕೇಳಿದನು:
"ಯಾವ ಕಾರಣಕ್ಕಾಗಿ ?"
 
ಮಗನ ವ್ಯಾಕುಲತೆಯನ್ನು ಹೋಗಲಾಡಿಸುವ ಹುಮ್ಮಸಿನಿಂದ ಕೈಕೇಯಿ
ನುಡಿದಳು:
 
" ರಾಮನು ಪ್ರಜರ ಪ್ರೀತಿಯನ್ನು ಸಂಪಾದಿಸಿಕೊಂಡಿದ್ದಾನೆ. ಪ್ರಜೆಗಳೆಲ್ಲ
ಅವನು ಯುವರಾಜನಾಗಬೇಕೆಂದು ಬಯಸಿದರು. ಅವನ ಅಭಿಷೇಕದ
ಸಿದ್ಧತೆಯೂ ಮೊನ್ನೆ ಇಲ್ಲಿ ನಡೆಯಿತು. ಆದರೆ ನಾನು ನಿನಗಾಗಿ ಅದನ್ನು
ವಿರೋಧಿಸಿದೆ. ರಾಮನು ಕಾಡಿಗೆ ಹೋಗಬೇಕು; ನೀನೇ ಯುವರಾಜನಾಗ
ಬೇಕು ಎಂದು ಕೇಳಿಕೊಂಡೆ. ನನ್ನ ಮಾತಿನಂತೆಯೆ ರಾಮಚಂದ್ರ ಕಾಡಿಗೆ
ಹೋದ. ಪುತ್ರಶೋಕದಿಂದ ರಾಜನೂ ಮೃತನಾದ. ನಾನು ಮಾಡಿದ ಕೆಲಸ
ಕೆಟ್ಟದು ಎಂಬುದನ್ನು ಬಲ್ಲೆ. ಆದರೆ ನಿನ್ನ ಮೇಲಿನ ಮಮತೆಯಿಂದ ಹಾಗೆ
ಮಾಡಿದೆ. ರಾಷ್ಟ್ರದ ಅಧಿರಾಜನಾಗು ಭರತ, ನನ್ನ ಬಯಕೆಯನ್ನು ಪೂರೈಸಿ
 
ಕೊಡು."
 
ಶೋಕಾಗ್ನಿಯಿಂದ ಭರತನ ಮೈ ಸುಡುವಂತಾಯಿತು. ಅವನು ಕಿಡಿ
ಕಿಡಿಯಾಗಿಯೇ ನುಡಿದನು:
 
" ಯಾವ ಸೌಭಾಗ್ಯಕ್ಕಾಗಿ ನನ್ನ ತಂದೆಯನ್ನು ಕೊಂದೆ ? ನನ್ನ ಅಣ್ಣ
- ನನ್ನು ಕಾಡಿಗಟ್ಟಿದೆ ! ನಾಣ್‌ಗೇಡಿಯಾಗಿ ಈ ಅಮಾನುಷ ಕೃತ್ಯವನ್ನು
ಮಾಡಿ. ಅದು ನನ್ನ ಮೇಲಣ ಮಮತೆಯಿಂದ ಎಂದು ನನ್ನನ್ನೂ ಆ ಪಾಪ
ಕುಂಡಕ್ಕೆ ತಳ್ಳುತ್ತಿರುವೆಯಾ ? ತಂದೆಯನ್ನು ಕೊಂದು, ಅಣ್ಣನನ್ನು ಕಾಡಿಗಟ್ಟಿ
ನಾನು ರಾಜ್ಯವಾಳಲಾರೆ. ಇದಕ್ಕೆ ಎಲ್ಲ ದೇವತೆಗಳೂ ಸಾಕ್ಷಿಯಾಗಿರಲಿ. ನಿನ್ನ
ಮೈಯಿಂದ ಹುಟ್ಟಿದ ಈ ಕೊಳಕು ಮೈಯನ್ನು ನಾನು ಹೊತ್ತುಕೊಂಡಿರಲಾರೆ.