This page has not been fully proofread.

ಸಂಗ್ರಹರಾಮಾಯಣ
 
ಕಬ್ಬಿಣದ ಮಣೆಯಲ್ಲಿ ತಲೆಗೆದರಿ ಕುಳಿತುಕೊಂಡು ಎಣ್ಣೆ ಕುಡಿಯುವಂತೆ
ಕನಸುಗಳು ! ದುಃಸ್ವಪ್ನದಿಂದ ಬೆದರಿದ ಭರತ ಬೆಳಗ್ಗೆ ಎದ್ದವನೇ ದೂತರೊಡನೆ
ಎಲ್ಲರ ಕ್ಷೇಮವನ್ನು ವಿಚಾರಿಸಿದನು.
 
20
 
ಬಂದ ದೂತರು ವಿನೀತರಾಗಿ ಉತ್ತರಿಸಿದರು:
"ಅಯೋಧ್ಯೆಯಲ್ಲಿ ಎಲ್ಲರೂ ಕ್ಷೇಮದಿಂದಿದ್ದಾರೆ. ಏನೋ ಒಂದು ಮಹಾ
ಕಾರ್ಯಕ್ಕಾಗಿ ವಸಿಷ್ಠರು ನಿನ್ನನ್ನು ಬರಹೇಳಿದ್ದಾರೆ. ಅತ್ತೆ-ಮಾವಂದಿರನ್ನು
ಬೀಳ್ಕೊಟ್ಟು ಸೇನಾಸಮೇತನಾಗಿ ನೀನು ಬೇಗನೆ ಹೊರಟು ಬರಬೇಕೆಂದು
ಗುರುಗಳ ಅಪ್ಪಣೆಯಾಗಿದೆ."
 
ಮತ್ತೆ ಏಳು ದಿನಗಳ ಪ್ರಯಾಣದ ನಂತರ ಎಲ್ಲರೂ ಅಯೋಧ್ಯೆಯನ್ನು
ತಲುಪಿದರು, ಊರಲ್ಲಿ ಎಲ್ಲ ಗೆಲುವಿರಲಿಲ್ಲ. ಭರತನಿಗೆ ಏಕೋ ಭಯವಾಯಿತು.
ಸಂದೇಹದಿಂದಲೇ ತಾಯಿಯ ಅಂತಃಪುರವನ್ನು ಪ್ರವೇಶಿಸಿದನು. ಬಹುದಿನ
ಗಳ ನಂತರ ಬಂದ ಮಗನನ್ನು ಕೈಕೇಯಿ ಸಂತಸದಿಂದ ಆಲಿಂಗಿಸಿದಳು; ಬಂಧು
ಗಳ ಕುಶಲವನ್ನು ವಿಚಾರಿಸಿದಳು. ಭರತನು ಅವರ ಕ್ಷೇಮಸಮಾಚಾರವನ್ನು
ತಿಳಿಸಿ ತಂದೆಯಲ್ಲಿ' ಎಂದು ಕೇಳಿದನು. ಕೈಕೇಯಿ ಉತ್ತರಿಸಿದಳು:
 
(6
 
* ಹುಟ್ಟಿದವನು ಒಂದಿಲ್ಲ ಒಂದು ದಿನ ಹೊಂದಲೇಬೇಕಾದ ಗತಿಯನ್ನು
ನಿನ್ನ ತಂದೆಯೂ ಪಡೆದಿದ್ದಾನೆ.
 
22
 
ಭರತನಿಗೆ ದುಃಖ ತಡೆಯಲಾಗಲಿಲ್ಲ. ಮೋಹಗೊಂಡು ನೆಲದಮೇಲೆ
ಕುಸಿದುಬಿದ್ದ. ಕೈಕೇಯಿ ಎಬ್ಬಿಸಿ ಸಮಾಧಾದಪಡಿಸಿದಳು. ಮೂರ್ಛಯಿಂದ
ತಿಳಿದೆದ್ದ ಭರತ ಕಣ್ಣೀರು ಮಿಡಿಯುತ್ತ ನುಡಿದ:
 
* ಅಣ್ಣನ ಪಟ್ಟಾಭಿಷೇಕಕ್ಕಾಗಿ ನನಗೆ ಕರೆ ಬಂದಿರಬೇಕೆಂದು ಸಂತಸದಿಂದ
ಬಂದರೆ, ಇಂಥ ಆಪತ್ತು ಇಲ್ಲಿ ಕಾದಿರಬೇಕೆ ? ಎಲ್ಲಿ ? ನನ್ನ ಅಣ್ಣ ರಾಮಚಂದ್ರ
ನೆಲ್ಲಿ ? ಅವನ ಕಾಲಿಗೆರಗದೆ ನನಗೆ ಸಮಾಧಾನವಿಲ್ಲ....... ಹಾ ! ನನ್ನ
ತಂದೆಗೆ ಏನಾಯಿತು ? ಯಾವ ಕಾರಣದಿಂದ ಸಾವು ಬಂತು ? ಕೊನೆಯಗಳಿಗೆ
ಯಲ್ಲಿ ಅವನಾಡಿದ ಮಾತುಗಳಾವುವು ? ಅದನ್ನಾದರೂ ಹೇಳು ತಾಯಿ. "
 
"ಕೃತಕೃತ್ಯರಾಗಿ ಮರಳಿದ ರಾಮ-ಸೀತೆಯರನ್ನು ಕಾಣುವ ಕಣ್ಣು
ಪುಣ್ಯ ಮಾಡಿರಬೇಕು ಎಂದು ಹಲುಬಿ-ರಾಮನನ್ನು ನೆನೆದುಕೊಂಡೇ ಮಹಾ
''ರಾಜ' ಪ್ರಾಣವನ್ನು ತ್ಯಜಿಸಿದನು.
 
""