This page has been fully proofread once and needs a second look.

ಮಿಂಚಿನಬಳ್ಳಿ
 
ಮಾತು ಮಂದವಾಯಿತು. ರಾಜನು ಸಮಾಧಿ- ಸ್ಥನಂತೆ ಕುಳಿತುಬಿಟ್ಟನು.
ರಾಜನಿಗೆ ನಿದ್ದೆ ಬಂದಿರ ಬೇಕೆಂದು ತಿಳಿದು ಕೌಸಲ್ಯಯೂ ಬಳಿಯಲ್ಲಿಲೆ ಮಲಗಿ

ನಿದ್ರಿಸಿದಳು.
 
20
 

 
ಬೆಳಗಾಯಿತು. ಬಂದಿಗಳು 'ಮಹಾರಾಜನೆ ಎಚ್ಚರು' ಎಂದು ಹಾಡಿ
ದರು. ರಾಜಪತ್ನಿಯರು ಬಳಿಸಾರಿದರು. ರಾಜನ ಅಂಗಾಲು ಹಿಮದಂತಿತ್ತು !

ಓ ! ದಶರಥ ಮಹಾರಾಜನು ಇನ್ನಿಲ್ಲ !
 

 
ಅಂತಃಪುರದ ಹೆಂಗಸರೆಲ್ಲ ಹೆದರಿ ಚೀರಿದರು. ಸುಮಿತ್ರೆ, ಕೌಸಲ್ಯಯರು
ಯೆಯರು ಎದೆ ಬಡಿದುಕೊಂಡು ಬೊಬ್ಬಿಟ್ಟರು.
 

 
ಕಾಲಜ್ಞರಾದ ವಸಿಷ್ಠರೂ ಅಲ್ಲಿಗೆ ಚಿತ್ತೈಸಿದರು. ಅವರು ರಾಜಪತ್ನಿಯ
ರನ್ನೆಲ್ಲ ಅಲ್ಲಿಂದ ಕಳುಹಿಸಿ ರಾಜನ ಕಳೇಬರವನ್ನು ಎಣ್ಣೆಯ ದೋಣಿಯೊಂದ

ರಲ್ಲಿ ಇಡಿಸಿದರು.
 

 
ರಾಮನನ್ನು ನೆನೆದು ಕೌಸಲ್ಯೆ ಹೇಗೋ ದುಃಖ- ವನ್ನು ತಡೆದುಕೊಂಡಳು.
 

 
ಕನಸು ಕಣಿ ಹೇಳಿತು
 

 
ಮಹಾರಾಜ ಸ್ವರ್ಗವನ್ನೈದಿದ. ರಾಮಚಂದ್ರ ಕಾಡಿಗೆ ಹೊರಟುಹೋದ.
ಮುಂದೆ ಮಾಡಬೇಕಾದು ದೇನು ?
 

 
ಅರಾಜಕವಾದ ರಾಷ್ಟ್ರ ಸುಖವನ್ನುಣ್ಣಲಾರದು. ಅದರಿಂದ ಭರತನನ್ನು
ಕೇಕಯದಿಂದ ಬರಿಸುವು- ದೊಂದೇ ದಾರಿ.
 

 
ಒಡನೆ ವಸಿಷ್ಠರು ನಾಲ್ವರು ಅಮಾತ್ಯರನ್ನು ಕರೆದು, ಭರತನನ್ನು ಕರೆದು
ತರುವಂತೆ ಆಜ್ಞಾಪಿಸಿ- ದರು. ಇಲ್ಲಿಯ ದುರಂತವನ್ನು ಅವನಿಗೆ ತಿಳಿಸ- ದಂತೆಯೂ
ಸೂಚನೆಯಿತ್ತರು. ಆ ಅಮಾತ್ಯರು ಅಯೋಧ್ಯೆಯಿಂದ ಹಸ್ತಿನಾಪುರಕ್ಕೆ ಬಂದು
ಅಲ್ಲಿಂದ ಗಂಗೆಯನ್ನು ದಾಟಿ, ಪಶ್ಚಿಮಾಭಿಮುಖವಾಗಿ ಸಾಗಿದರು. ಇಕ್ಷುಮತಿ
ಮೊದಲಾದ ನದಿಗಳನ್ನೂ ಪಾಂಚಾಲ-ಬಾಹ್ಲೀಕ ಮೊದಲಾದ ದೇಶಗಳನ್ನೂ

ದಾಟಿ ಏಳನೆಯ ದಿನ ಕೇಕೆಯವನ್ನು ತಲುಪಿದರು.
 

 
ಇವರು ಹೋದ ದಿನವೆ ರಾತ್ರಿ ಮಲಗಿದ್ದ ಭರತನಿಗೆ ಎಲ್ಲಿಲ್ಲದ ಕನಸುಗಳು.
ಅದೂ ಎಂಥ ಕೆಟ್ಟ ಕನಸು ! ಕಡಲು ಬತ್ತಿ ಹೋದಂತೆ- ಚಂದ್ರ ಭೂಮಿಗೆ

ಬಿದ್ದಂತೆ ತನ್ನ ತಂದೆ ಕೆಂಪು ಹೂಮಾಲೆ ಕಪ್ಪು ಬಟ್ಟೆ ಧರಿಸಿ, ಕತ್ತೆಯ ಮೇಲೆ