This page has not been fully proofread.

ಮಿಂಚಿನಬಳ್ಳಿ
 
ಮಾತು ಮಂದವಾಯಿತು. ರಾಜನು ಸಮಾಧಿಸ್ಥನಂತೆ ಕುಳಿತುಬಿಟ್ಟನು.
ರಾಜನಿಗೆ ನಿದ್ದೆ ಬಂದಿರಬೇಕೆಂದು ತಿಳಿದು ಕೌಸಲ್ಯಯೂ ಬಳಿಯಲ್ಲಿ ಮಲಗಿ
ನಿದ್ರಿಸಿದಳು.
 
20
 
ಬೆಳಗಾಯಿತು. ಬಂದಿಗಳು ಮಹಾರಾಜನೆ ಎಚ್ಚರು' ಎಂದು ಹಾಡಿ
ದರು. ರಾಜಪತ್ನಿಯರು ಬಳಿಸಾರಿದರು. ರಾಜನ ಅಂಗಾಲು ಹಿಮದಂತಿತ್ತು !
ಓ ! ದಶರಥ ಮಹಾರಾಜನು ಇನ್ನಿಲ್ಲ !
 
ಅಂತಃಪುರದ ಹೆಂಗಸರೆಲ್ಲ ಹೆದರಿ ಚೀರಿದರು. ಸುಮಿತ್ರೆ, ಕೌಸಲ್ಯಯರು
ಎದೆ ಬಡಿದುಕೊಂಡು ಬೊಬ್ಬಿಟ್ಟರು.
 
ಕಾಲಜ್ಞರಾದ ವಸಿಷ್ಠರೂ ಅಲ್ಲಿಗೆ ಚಿತ್ತೈಸಿದರು. ಅವರು ರಾಜಪತ್ನಿಯ
ರನ್ನೆಲ್ಲ ಅಲ್ಲಿಂದ ಕಳುಹಿಸಿ ರಾಜನ ಕಳೇಬರವನ್ನು ಎಣ್ಣೆಯ ದೋಣಿಯೊಂದ
ರಲ್ಲಿ ಇಡಿಸಿದರು.
 
ರಾಮನನ್ನು ನೆನೆದು ಕೌಸಲ್ಯ ಹೇಗೋ ದುಃಖವನ್ನು ತಡೆದುಕೊಂಡಳು.
 
ಕನಸು ಕಣಿ ಹೇಳಿತು
 
ಮಹಾರಾಜ ಸ್ವರ್ಗವನ್ನೈದಿದ. ರಾಮಚಂದ್ರ ಕಾಡಿಗೆ ಹೊರಟುಹೋದ.
ಮುಂದೆ ಮಾಡಬೇಕಾದುದೇನು ?
 
ಅರಾಜಕವಾದ ರಾಷ್ಟ್ರ ಸುಖವನ್ನುಣ್ಣಲಾರದು. ಅದರಿಂದ ಭರತನನ್ನು
ಕೇಕಯದಿಂದ ಬರಿಸುವುದೊಂದೇ ದಾರಿ.
 
ಒಡನೆ ವಸಿಷ್ಠರು ನಾಲ್ವರು ಅಮಾತ್ಯರನ್ನು ಕರೆದು, ಭರತನನ್ನು ಕರೆದು
ತರುವಂತೆ ಆಜ್ಞಾಪಿಸಿದರು. ಇಲ್ಲಿಯ ದುರಂತವನ್ನು ಅವನಿಗೆ ತಿಳಿಸದಂತೆಯೂ
ಸೂಚನೆಯಿತ್ತರು. ಆ ಅಮಾತ್ಯರು ಅಯೋಧ್ಯೆಯಿಂದ ಹಸ್ತಿನಾಪುರಕ್ಕೆ ಬಂದು
ಅಲ್ಲಿಂದ ಗಂಗೆಯನ್ನು ದಾಟಿ, ಪಶ್ಚಿಮಾಭಿಮುಖವಾಗಿ ಸಾಗಿದರು. ಇಕ್ಷುಮತಿ
ಮೊದಲಾದ ನದಿಗಳನ್ನೂ ಪಾಂಚಾಲ-ಬಾಕ ಮೊದಲಾದ ದೇಶಗಳನ್ನೂ
ದಾಟ ಏಳನೆಯ ದಿನ ಕೇಕೆಯವನ್ನು ತಲುಪಿದರು.
 
ಇವರು ಹೋದ ದಿನವೆ ರಾತ್ರಿ ಮಲಗಿದ್ದ ಭರತನಿಗೆ ಎಲ್ಲಿಲ್ಲದ ಕನಸುಗಳು.
ಅದೂ ಎಂಥ ಕೆಟ್ಟ ಕನಸು ! ಕಡಲು ಬತ್ತಿ ಹೋದಂತೆ- ಚಂದ್ರ ಭೂಮಿಗೆ
ಬಿದ್ದಂತೆ ತನ್ನ ತಂದೆ ಕೆಂಪು ಹೂಮಾಲೆ ಕಪ್ಪು ಬಟ್ಟೆ ಧರಿಸಿ, ಕತ್ತೆಯ ಮೇಲೆ