This page has been fully proofread once and needs a second look.

ಸಂಗ್ರಹರಾಮಾಯಣ
 
ಹೀಗೆಂದು ಸುಮಂತ್ರನು ಹೊರಟುಹೋದನು. ಕೌಸಲ್ಯೆಗೆ ಇದನ್ನು
ಕೇಳಿ ತಡೆಯಲಾಗಲಿಲ್ಲ. ಅವಳು ರಾಜನನ್ನು ಕೆಣಕುವಂಥ ಮಾತನ್ನಾಡಿ
ದಳು :
 
E
 
CC
 

 
"
ಇದ್ದ ಒಬ್ಬ ಮಗನನ್ನೂ ಕಾಡಿಗಟ್ಟಿದೆ, ನನ್ನದೇನು ಬಾಳು ಮಣ್ಣು,
ನೀನಾದರೂ ಕೈಕೇಯಿಯೊಡನೆ ಸುಖವಾಗಿರು ಮಹಾರಾಜ."
 
(6
 

 
"
ಹಾಗೆನ್ನಬೇಡ ದೇವಿ, ನನ್ನನ್ನು ಮತ್ತಷ್ಟು ಗಾಸಿ- ಗೊಳಿಸಬೇಡ. ನನ್ನ
ಕೌಸಲ್ಯೆ, ನಿನ್ನ ತೋಳುಗಳಿಂದ ನನ್ನನ್ನೊಮ್ಮೆ ನಲುಮೆಯಿಂದ ನೇವರಿಸು."
 

 
ಕೌಸಲ್ಯೆ ತನ್ನ ಮಾತಿಗೆ ತಾನೇ ಪಶ್ಚಾತ್ತಾಪ ಪಟ್ಟು ಕೊಂಡಳು. 'ಶೋಕ
ದಿಂದ ವಿವೇಕಹೀನಳಾಗಿ ಏನನ್ನೊ ಗಳುಹಿದೆ, ಕ್ಷಮಿಸು' ಎಂದು ಕಾಲಿಗೆ
ಅಡ್ಡ ಬಿದ್ದಳು.
 

 
ಹೀಗೆ ಅಳುತ್ತಲೇ ಐದು ದಿನಗಳು ಕಳೆದು ಹೋದವು. ಕೊನೆಗೊಮ್ಮೆ
ಸುಮಿತ್ರ ಬಂದು ದಶರಥ ಕೌಸಲ್ಯೆಯರನ್ನು ಸಂತೈಸಿದಳು. ಆಕೆಯ ಸಮಾ
ಧಾ- ನದ ನುಡಿಗಳಿಂದ ಅವರ ದುಃಖ ಸ್ವಲ್ಪ ಸಹ್ಯ- ವಾದಂತಾಯಿತು.
 

 
ಆರನೆಯ ದಿನ, ರಾತ್ರಿಯಾಗಿತ್ತು. ದಶರಥನ ಮನಸ್ಸಿನಲ್ಲಿ ಗತಕಾಲದ
ಘಟನೆಯೊಂದು ಮಿಂಚಿ ಹೋಯಿತು. ಅವನು ಕೌಸಲ್ಯಗೆ ಆ ಹಿಂದಿನ ಇತಿಹಾಸ
ನ್ನರುಹಿದನು :
 

 
"ಕೌಸಲ್ಯೆ, ನಾನು ಹಿಂದೊಮ್ಮೆ ಬೇಟೆಯಾಡುತ್ತ-ಶಬ್ದ ವೇಧದ ಬಲದಿಂದ
ಕಾಡಾನೆಯೆಂದು ಭ್ರಮಿಸಿ, ಕೊಡವನ್ನು ನೀರಿನಲ್ಲಿ ಮುಳುಗಿಸುತ್ತಿದ್ದ ಮುನಿ

ಪುತ್ರನೊಬ್ಬನನ್ನು ಕೊಂದಿದ್ದೆ. ಹೋಗಿ ಕಂಡಾಗ ಮುನಿಕುಮಾರ ಬಾಣದ
ಪೆಟ್ಟಿನಿಂದ ನರಳುತ್ತಿದ್ದ. ಅವನು ನನ್ನನ್ನು ಕಂಡು 'ಗೊತ್ತಿಲ್ಲದೆ ಹೊಡೆದುದ

ರಿಂದ ನಿನಗೆ ಬ್ರಹ್ಮಹತ್ಯೆ ತಟ್ಟದಿರಲಿ' ಎಂದು ಹರಸಿ ಕಣ್ಮುಚ್ಚಿದನು. ಕುರುಡರೂ
ವೃದ್ಧರೂ ಆದ ಅವನ ತಂದೆ-ತಾಯಂದಿರ ಬಳಿಸಾರಿ, ದುಃಖದಿಂದಲೆ ಈ ಸುದ್ದಿ
ಯನ್ನು ನಿವೇದಿಸಿಕೊಂಡೆ. "ನಿನಗೂ ಹೀಗೆಯೇ ಪುತ್ರವಿರಹದಿಂದ ಸಾವು ಬರಲಿ
ಎಂದು ಶಪಿಸಿ, ಆ ತಪಸಿ ಮಡದಿಯೊಡನೆ ಸಾವನ್ನಪ್ಪಿದನು. ನಾನು ಮಾಡಿದ
ಪಾಪದ ಫಲ ಈಗ ನನ್ನ ಬೆನ್ನು ಹತ್ತಿದೆ. ನಾನು ಪಾತಕಿ, ಭಾಗ್ಯಶಾಲಿಗಳು
ಮಾತ್ರ ನನ್ನ ಕಂದನನ್ನು ಕಾಣಬಲ್ಲರು. ಜನ್ಮಾಂತರದಲ್ಲಾದರೂ ಆ ಭಾಗ್ಯ
ನನಗೆ ದೊರಕಲಿ, "