This page has been fully proofread once and needs a second look.

ಮಿಂಚಿನಬಳ್ಳಿ
 
ಈ ಹಿತಜೀವನದಿಂದ ರಾಮನಿಗೂ ಸೀತೆಗೂ ನೆಮ್ಮದಿಯಾಗಿತ್ತು.
ಕಾಡಿನ ತಂಗಾಳಿಯೂ ಲಕ್ಷ್ಮಣನೊಡನೆ ಇವರ ಸೇವೆಯಲ್ಲಿ ಹುಮ್ಮಸ ತಾಳಿ

ದಂತಿತ್ತು !
 
14
 

 
ಮುನಿಶಾಪ ದಿಟವಾಯಿತು
 

 
ಇತ್ತ ಅಯೋಧ್ಯೆಯಲ್ಲಿ ಎಲ್ಲರಿಗೂ ರಾಮನದೇ ಯೋಚನೆ. ಎಲ್ಲರೂ
ರಾಮನ ಕುರಿತೇ ಮಾತನಾಡು- ವವರು, ಅವನ ಗುಣವನ್ನೇ ಗಾನಮಾಡು
ವವರು. ಮಕ್ಕಳು-ಮುದುಕರು-ಗಂಡಸರು-ಹೆಂಗಸರು ಎಲ್ಲರ ಬಾಯಲ್ಲೂ
ಒಂದೇಮಾತು. ಮನೆ ಮನೆಯಲ್ಲೂ ಒಂದೇ ಪಲ್ಲವಿ ಕೇಳಿಬರುತ್ತಿತ್ತು:
 
(C
 

 
"
ಭಾಗ್ಯದೇವಿಯ ಕೃಪಾಕಟಾಕ್ಷ ಅಯೋಧ್ಯೆ- ಯಿಂದ ಕಾಡಿನೆಡೆಗೆ ಹರಿ
ದಿದೆ, ರಾಮಚಂದ್ರನ ಪಾದ ಸ್ಪರ್ಶದ ಸುಖವನ್ನನುಭವಿಸುವ ಕಾಡುದಾರಿಯ

ಹುಲ್ಲು-ಕಲ್ಲುಗಳು ಎಂಥ ಪುಣ್ಯಶಾಲಿಗಳೊ ! ರಾಮನ ಮಜ್ಜನದಿಂದ ಕಾಡಿನ
ನದಿಗಳೆಲ್ಲ ಇಂದು ಪಾವನವಾದವು. ಕಾಡಿನ ಪಶುಪಕ್ಷಿಗಳಿಗೊಂದು ಭಾಗ್ಯ.
ಮುನಿಗಳ ಕಣ್ಣಿಗೊಂದು ಹಬ್ಬ.
 
""
 

 
ದಶರಥ ಮಹಾರಾಜನ ರೋದನಕ್ಕಂತೂ ಎಣೆಯೇ ಇರಲಿಲ್ಲ. ಅವನಿಗೆ
ಒಂದೊಂದು ದಿನವೂ ಒಂದು ಯುಗದಂತೆ ಕಾಣುತ್ತಿತ್ತು.
 

 
ಇತ್ತ ಸುಮಂತ್ರನು ರಥವನ್ನೇರಿ ಅಯೋಧ್ಯೆಗೆ ಬಂದನು. "'ನಮ್ಮ
ರಾಮನನ್ನು ಎಲ್ಲಿ ತೊರೆದು ಬಂದೆ ? ' ಎಂದು ಜನರೆಲ್ಲ ಸುತ್ತುವರಿದರು.
ಕಣ್ಣೀರ- ನ್ನೊರಸಿಕೊಳ್ಳುತ್ತ ಸುಮಂತ್ರ ರಾಜಮಂದಿರವನ್ನು ಪ್ರವೇಶಿಸಿದ.
 

 
ರಾಮನ ವಾರ್ತೆಯನ್ನು ಕೇಳಲು ಕಾತರನಾದ ರಾಜನ ಬಳಿ ಸುಮಂತ
ನಿವೇದಿಸಿಕೊಂಡನು:
 
66
 

 
" ನರೇಂದ್ರ, ಪ್ರತಿಜ್ಞೆಯ ಅವಧಿ ಮುಗಿದ ಮೇಲೆ ರಾಮಚಂದ್ರ ನಿನ್ನನ್ನು
ಸಂತೋಷಗೊಳಿಸಲಿರು- ವನು. ಭರತನು ಯುವರಾಜನಾಗಲಿ ಎಂದು ಅವನ್ನು
ನು ಕೇಳಿಕೊಂಡಿದ್ದಾನೆ. ಸೀತೆಯೂ ರಾಮ-ಲಕ್ಷ್ಮಣರೂ ನಿನಗೆ ವಂದನೆಯನ್ನು
ತಿಳಿಸಿದ್ದಾರೆ. ಗುಣನಿಧಿಯಾದ ರಾಮಚಂದ್ರನು ಕಾಡಿನಲ್ಲೂ ಸುಖವಾಗಿ
ದ್ದಾನೆ. ರಾಮನ ಸುಖವೇ ತನ್ನ ಸುಖವೆಂದು ಸೀತೆಯೂ ಹುಮ್ಮಸದಿಂದಿ
ದ್ದಾಳೆ. ಲಕ್ಷ್ಮಣನಿಗೋ
 
ರಾಮಸೇವೆ- ಗಿಂತ ಮಿಗಿಲಾದ ಆನಂದವೆಂಥದು ?
 

ಅದರಿಂದ ಅವರ ಕುರಿತು ಚಿಂತಿಸುತ್ತ ನೀನು ಕೊರಗಬೇಡ ಮಹಾರಾಜ,
 
."