This page has been fully proofread once and needs a second look.

ಸಂಗ್ರಹರಾಮಾಯಣ
 
ಯಮುನಾನದಿ ಅಡ್ಡವಾಯಿತು. ಆಗ ಲಕ್ಷ್ಮಣನು ಸುತ್ತುಮುತ್ತಲಿನ ಗಿಡ
ಬಳ್ಳಿಗಳನ್ನು ಕಡಿದು, ಒಂದು ಬೀಳುದೋಣಿಯನ್ನು ರಚಿಸಿದನು. ಸಂಕೋಚ-

ನಾಚಿಕೆಗಳಿಂದ ಕುಗ್ಗಿದ ಸೀತೆಯನ್ನು ಆ ಬೈತ್ರದಲ್ಲಿ ಕುಳ್ಳಿರಿಸಿ ಆಭರಣ
ಆಯುಧಗಳನ್ನೂ ಅದರಲ್ಲಿರಿಸಿ, ಸೋದರರು ಯಮುನೆಯನ್ನು ದಾಟಿದರು.
 
೬೭
 

 
ಯಮುನೆಯ ತಡಿಯ ಕಾಡಿನಲ್ಲಿ ತಾವರೆಗಳಿಂದ ತುಂಬಿದ ಕೊಳವೊಂದರ
ಬಳಿ ವಿಶ್ರಮಿಸಿ 'ಶ್ಯಾ' ಎಂಬ ಆಲದ ಮರವೊಂದರ ಬಳಿಗೆ ಬಂದರು. ಮುಂದೆ
ಲಕ್ಷ್ಮಣ-ಹಿಂದೆ ರಾಮ-ನಡುವೆ ಸೀತೆ ಹೀಗೆ ಇವರ ಪ್ರಯಾಣ ಸಾಗಿತು.
ಒಂದೆರಡು ಕ್ರೋಶ (ಸುಮಾರು ೨ ಮೈಲು) ದೂರ ಸಾಗಿ ಕೆಲವು ಹಣ್ಣು-ಗಡ್ಡೆ
ಗಳನ್ನು ಆಹಾರಕ್ಕಾಗಿ ಕೊಂಡು, ಅವನ್ನು ಹಿಡಿದುಕೊಂಡು ಯಮುನೆಯ
ತಡಿಯಲ್ಲಿ ಒಂದೆಡೆ ರಾತ್ರಿಯನ್ನು ಕಳೆದರು.
 

 
ಬೆಳಿಗ್ಗೆ ಮೊದಲೆ ಎಚ್ಚತ್ತ ರಾಮಚಂದ್ರ, ಲಕ್ಷ್ಮಣನನ್ನು ಕುಲುಕಿ ಎಬ್ಬಿಸಿ
ದನು. ಮೂವರೂ ಬೇಗನೆ ಎದ್ದು ಹೊರಟವರು ಸ್ವಲ್ಪದರಲ್ಲಿಲೆ ಚಿತ್ರಕೂಟ
ವನ್ನು ಸೇರಿದರು. ಅಲ್ಲಿ ಆಶ್ರಮಕ್ಕೆ ಅನು- ಕೂಲವಾದ ಸ್ಥಳದ ಶೋಧ ನಡೆ
ಯಿತು. ಸುತ್ತಲೂ ಹೂ-ಹಣ್ಣುಗಳಿಂದ ತೊನೆವ ಗಿಡಬಳ್ಳಿಗಳು, ಸನಿಯದಲ್ಲಿ
ಲೆ ಕಲಕಲ ನಾದದಿಂದ ಹರಿವ ಗಂಗೆ, ಸುತ್ತಲೂ ತಂಗಾಳಿಯಿಂದ ತಂಪಾದ ತಾಣ.
ಪ್ರಕೃತಿ ಸುಂದರವಾದ ಈ ಕಾಡಿನಲ್ಲಿ ಇಲ್ಲದ್ದಾದರೂ ಏನು ?
 

 
ಅಲ್ಲಿ ದೊಡ್ಡದಾದ ಎರಡು ಪರ್ಣಶಾಲೆಗಳನ್ನು ಕಟ್ಟತೊಡಗಿದರು. ಆನೆ
ಗಳು ಬೀಳಿಸಿದ ಮರದ ಗೆಲ್ಲುಗಳಿಂದ ಕಂಬವೂರಿ, ತರಗೆಲೆಗಳಿಂದ ಹುಲ್ಲುಗರಿ
ಗಳಿಂದ ಸುತ್ತಲೂ ಮುಚ್ಚಿ, ಮೇಲೆ ಹೂ ಬಳ್ಳಿಯ ಮಾನ್ನು ರಚಿಸಿದರು. ಪರ್ಣ
ಶಾಲೆ- ಯೆಂದರೆ ರಾಜೋದ್ಯಾನದ ಬಳ್ಳಿ ಮಾಡದಂತೆ ಕಣ್ಸೆಳೆಯುತ್ತಿತ್ತು. ಸೀತೆ
ಗೋಡೆಗೆ ನೆಲಕ್ಕೆ ಮಣ್ಣು ಬಳಿದು ಚೊಕ್ಕಗೊಳಿಸಿದಳು.
 

 
ಆಶ್ರಮದ ಕೆಲಸ ಮುಗಿದಂತಾಯಿತು. ಇನ್ನು ಆಹಾರದ ಚಿಂತೆ.
ಅದಕ್ಕಾಗಿ ಲಕ್ಷ್ಮಣನು ಕೆಲವು ಹಣ್ಣು-ಗಡ್ಡೆಗಳನ್ನು ಆಯ್ದು ತಂದನು..
 
ಮೂವರೂ ಸೇವಿಸಿದರು.
 

 
ಎಲ್ಲರೂ ಸ್ನಾನಮಾಡಿದರು. ನಿತ್ಯಕರ್ಮವನ್ನು ಪೂರೈಸಿದ ರಾಮಚಂದ್ರ
ಹವಿರ್ಭಾಗವನ್ನು ದೇವತೆಗಳಿಗರ್ಪಿಸಿದನು. ಅನಂತರ ಸೀತೆ ಗಂಡನಿಗೂ ಮೈದು
ನನಿಗೂ ಬಡಿಸಿ ತಾನೂ ಉಂಡಳು.