2023-03-15 15:35:32 by ambuda-bot
This page has not been fully proofread.
ಸಂಗ್ರಹರಾಮಾಯಣ
ಯಮುನಾನದಿ ಅಡ್ಡವಾಯಿತು. ಆಗ ಲಕ್ಷ್ಮಣನು ಸುತ್ತುಮುತ್ತಲಿನ ಗಿಡ
ಬಳ್ಳಿಗಳನ್ನು ಕಡಿದು, ಒಂದು ಬೀಳುದೋಣಿಯನ್ನು ರಚಿಸಿದನು. ಸಂಕೋಚ-
ನಾಚಿಕೆಗಳಿಂದ ಕುಗ್ಗಿದ ಸೀತೆಯನ್ನು ಆ ಬೈತ್ರದಲ್ಲಿ ಕುಳ್ಳಿರಿಸಿ ಆಭರಣ
ಆಯುಧಗಳನ್ನೂ ಅದರಲ್ಲಿರಿಸಿ, ಸೋದರರು ಯಮುನೆಯನ್ನು ದಾಟಿದರು.
೬೭
ಯಮುನೆಯ ತಡಿಯ ಕಾಡಿನಲ್ಲಿ ತಾವರೆಗಳಿಂದ ತುಂಬಿದ ಕೊಳವೊಂದರ
ಬಳಿ ವಿಶ್ರಮಿಸಿ 'ಶ್ಯಾನ' ಎಂಬ ಆಲದ ಮರವೊಂದರ ಬಳಿಗೆ ಬಂದರು. ಮುಂದೆ
ಲಕ್ಷ್ಮಣ-ಹಿಂದೆ ರಾಮ-ನಡುವೆ ಸೀತೆ ಹೀಗೆ ಇವರ ಪ್ರಯಾಣ ಸಾಗಿತು.
ಒಂದೆರಡು ಕ್ರೋಶ (ಸುಮಾರು ೨ ಮೈಲು) ದೂರ ಸಾಗಿ ಕೆಲವು ಹಣ್ಣು-ಗಡ್ಡೆ
ಗಳನ್ನು ಆಹಾರಕ್ಕಾಗಿ ಕೊಂಡು, ಅವನ್ನು ಹಿಡಿದುಕೊಂಡು ಯಮುನೆಯ
ತಡಿಯಲ್ಲಿ ಒಂದೆಡೆ ರಾತ್ರಿಯನ್ನು ಕಳೆದರು.
ಬೆಳಿಗ್ಗೆ ಮೊದಲೆ ಎಚ್ಚತ್ತ ರಾಮಚಂದ್ರ, ಲಕ್ಷ್ಮಣನನ್ನು ಕುಲುಕಿ ಎಬ್ಬಿಸಿ
ದನು. ಮೂವರೂ ಬೇಗನೆ ಎದ್ದು ಹೊರಟವರು ಸ್ವಲ್ಪದರಲ್ಲಿ ಚಿತ್ರಕೂಟ
ವನ್ನು ಸೇರಿದರು. ಅಲ್ಲಿ ಆಶ್ರಮಕ್ಕೆ ಅನುಕೂಲವಾದ ಸ್ಥಳದ ಶೋಧ ನಡೆ
ಯಿತು. ಸುತ್ತಲೂ ಹೂ-ಹಣ್ಣುಗಳಿಂದ ತೊನೆವ ಗಿಡಬಳ್ಳಿಗಳು, ಸನಿಯದಲ್ಲಿ
ಕಲಕಲ ನಾದದಿಂದ ಹರಿವ ಗಂಗೆ, ಸುತ್ತಲೂ ತಂಗಾಳಿಯಿಂದ ತಂಪಾದ ತಾಣ.
ಪ್ರಕೃತಿ ಸುಂದರವಾದ ಈ ಕಾಡಿನಲ್ಲಿ ಇಲ್ಲದ್ದಾದರೂ ಏನು ?
ಅಲ್ಲಿ ದೊಡ್ಡದಾದ ಎರಡು ಪರ್ಣಶಾಲೆಗಳನ್ನು ಕಟ್ಟತೊಡಗಿದರು. ಆನೆ
ಗಳು ಬೀಳಿಸಿದ ಮರದ ಗೆಲ್ಲುಗಳಿಂದ ಕಂಬವೂರಿ, ತರಗೆಲೆಗಳಿಂದ ಹುಲ್ಲುಗರಿ
ಗಳಿಂದ ಸುತ್ತಲೂ ಮುಚ್ಚಿ, ಮೇಲೆ ಹೂಬಳ್ಳಿಯ ಮಾತನ್ನು ರಚಿಸಿದರು. ಪರ್ಣ
ಶಾಲೆಯೆಂದರೆ ರಾಜೋದ್ಯಾನದ ಬಳ್ಳಿ ಮಾಡದಂತೆ ಕಣ್ಸೆಳೆಯುತ್ತಿತ್ತು. ಸೀತೆ
ಗೋಡೆಗೆ ನೆಲಕ್ಕೆ ಮಣ್ಣು ಬಳಿದು ಚೊಕ್ಕಗೊಳಿಸಿದಳು.
ಆಶ್ರಮದ ಕೆಲಸ ಮುಗಿದಂತಾಯಿತು. ಇನ್ನು ಆಹಾರದ ಚಿಂತೆ.
ಅದಕ್ಕಾಗಿ ಲಕ್ಷ್ಮಣನು ಕೆಲವು ಹಣ್ಣು-ಗಡ್ಡೆಗಳನ್ನು ಆಯ್ದು ತಂದನು..
ಮೂವರೂ ಸೇವಿಸಿದರು.
ಎಲ್ಲರೂ ಸ್ನಾನಮಾಡಿದರು. ನಿತ್ಯಕರ್ಮವನ್ನು ಪೂರೈಸಿದ ರಾಮಚಂದ್ರ
ಹವಿರ್ಭಾಗವನ್ನು ದೇವತೆಗಳಿಗರ್ಪಿಸಿದನು. ಅನಂತರ ಸೀತೆ ಗಂಡನಿಗೂ ಮೈದು
ನನಿಗೂ ಬಡಿಸಿ ತಾನೂ ಉಂಡಳು.