This page has been fully proofread once and needs a second look.

ಮಿಂಚಿನಬಳ್ಳಿ
 
ಮುಂದಿನ ಪ್ರಯಾಣಕ್ಕಾಗಿ ಜಟಾಧಾರಿಗಳಾದ ರಾಮ-ಲಕ್ಷ್ಮಣರು
ನರ-ನಾರಾಯಣರಂತೆ ಸೊಗಯಿಸಿದರು. ಅನಂತರ ಗುಹನನ್ನೂ ಸೂತ- ನನ್ನೂ
ಬೀಳ್ಕೊಟ್ಟು ಮೂವರೂ ಸುಂದರವಾದ ದೋಣಿಯನ್ನೇರಿದರು.
 

 
ಕ್ಷಣಾರ್ಧದಲ್ಲಿ ದೋಣಿ ಆಚೆಯ ತಡಿಯನ್ನು ಸೇರಿತು. ದೋಣಿಯಿಂದಿ
ಳಿದು ಲಕ್ಷ್ಮಣನೊಡನೆ ರಾಮಚಂದ್ರ ನುಡಿದ:
 

 
"ಲಕ್ಷಣ, ನೀನು ಮುಂದಿನಿಂದ ಹೋಗು. ಸೀತೆ ಮಧ್ಯದಲ್ಲಿ ಬರಲಿ.
ನಿಮ್ಮಿಬ್ಬರ ಬೆಂಗಾವಲಾಗಿ ನಾನು ಕೊನೆಯಲ್ಲಿ ಬರುತ್ತೇನೆ."
 

 
ಹೀಗೆ ಸಾಗುತ್ತ ಒಂದು ದೊಡ್ಡ ಕಾಡನ್ನು ಸೇರಿ- ದರು. ಅಲ್ಲೊಂದು
ಆಲದ ಮರವಿತ್ತು. ಅದರ ಬುಡ- ದಲ್ಲಿ ತಂಗಿದರು. ಕಮಲದ ನಾಲವನ್ನು
ಅಂದು ಆಹಾರವಾಗಿ ಸೇವಿಸಿದರು. ಎಲ್ಲಿಲ್ಲದ ಮಾತುಕತೆ- ಗಳಿಂದ ಆ ರಾತ್ರಿ
ಸುಖಮಯವಾಗಿ ಸಾಗಿತು. ಬೆಳಗಾದರೆ ಮತ್ತೆ ಪುನಃ ಪ್ರಯಾಣ. ಹೀಗೆ

ಬಹು ಪ್ರದೇಶಗಳನ್ನು ದಾಟಿ, ಸಂಜೆಯ ಹೊತ್ತಿಗೆ ಗಂಗೆ-ಯಮುನೆಯರ ಸಂಗಮ
ಸ್ಥಕ್ಕೆ ಬಂದು ತಲುಪಿದರು.
 

 
ಬೃಹಸ್ಪತಿಯ ಮಕ್ಕಳಾದ ಭರದ್ವಾಜರ ಆಶ್ರಮ ಅಲ್ಲೆ ಬಳಿಯಲ್ಲಿತ್ತು.
ಅವರು ರಾಮಚಂದ್ರ ಬಂದು- ದನ್ನು ತಿಳಿದು ಆಶ್ರಮಕ್ಕೆ ಕರೆದು ಸತ್ಕರಿಸಿದರು.

ಹಣ್ಣು-ಗಡ್ಡೆಗಳನ್ನು ಉಣಿಸಿದರು. ಭಕ್ತಿಯಿಂದ ಆಸನದಲ್ಲಿ ಕುಳ್ಳಿರಿಸಿ
ಕೈಮುಗಿದು ವಿಜ್ಞಾಪಿಸಿ ಕೊಂಡರು:
 

 
"ಪರಮಪುರುಷ, ನಿನ್ನನ್ನು ಕಾಣುವ ಭಾಗ್ಯ ಇಷ್ಟು ವಿಲಂಬವಾಗಿ
ಯಾದರೂ ನನಗೆ ದೊರಕಿತಲ್ಲ ! ಅದೇ ಮಹಾಪುಣ್ಯ, ರಾಮಭದ್ರ, ಈ
ಪ್ರದೇಶ ತುಂಬ ಸೊಗಸಾಗಿದೆ; ಹಿತವಾಗಿದೆ. ನೀನು ಇಲ್ಲೇ ಇದ್ದು ಬಿಟ್ಟರೆ
ನಮಗೆಲ್ಲ ಆನಂದವಾಗುವುದು."
 

 
"ಮಹರ್ಷಿಯೆ, ನಾನಿಲ್ಲಿದ್ದರೆ ಜನರೆಲ್ಲ ಒಂದು ಮುತ್ತಿ ಬಿಡುತ್ತಾರೆ. ಇದ
'
ಕ್ಕಿಂತಲೂ ಏಕಾಂತವಾದ ಒಂದು ನಿರ್ಜನಾರಣ್ಯವನ್ನು ತಿಳಿಸಿದರೆ ಚೆನ್ನಾಗಿತ್ತು."
 

 
ಆಗ ಭರದ್ವಾಜರು ಕಪಾಲಶಿರ ಮೊದಲಾದ ತಪಸ್ವಿಗಳು ಸಿದ್ದಿ ಪಡೆದ
ತಾಣವಾದ ಚಿತ್ರಕೂಟ- ವನ್ನು ಸೂಚಿಸಿದರು.
 

 
ಮರುದಿನ ಬೆಳಿಗ್ಗೆ ಮುನಿಗಳಿಗೆ ಅಭಿನಂವಂದಿಸಿ, ಸೀತಾಲಕ್ಷ್ಮಣರೊಡನೆ
ರಾಮಚಂದ್ರ ಪಶ್ಚಿಮಾಭಿ ಮುಖವಾಗಿ ಮುಂದೆ ಹೊರಟನು. ದಾರಿಯಲ್ಲಿ