This page has not been fully proofread.

ಮಿಂಚಿನಬಳ್ಳಿ
 
ಮುಂದಿನ ಪ್ರಯಾಣಕ್ಕಾಗಿ ಜಟಾಧಾರಿಗಳಾದ ರಾಮ-ಲಕ್ಷ್ಮಣರು
ನರ-ನಾರಾಯಣರಂತೆ ಸೊಗಯಿಸಿದರು. ಅನಂತರ ಗುಹನನ್ನೂ ಸೂತನನ್ನೂ
ಬೀಳ್ಕೊಟ್ಟು ಮೂವರೂ ಸುಂದರವಾದ ದೋಣಿಯನ್ನೇರಿದರು.
 
ಕ್ಷಣಾರ್ಧದಲ್ಲಿ ದೋಣಿ ಆಚೆಯ ತಡಿಯನ್ನು ಸೇರಿತು. ದೋಣಿಯಿಂದಿ
ಳಿದು ಲಕ್ಷ್ಮಣನೊಡನೆ ರಾಮಚಂದ್ರ ನುಡಿದ:
 
"ಲಕ್ಷಣ, ನೀನು ಮುಂದಿನಿಂದ ಹೋಗು. ಸೀತೆ ಮಧ್ಯದಲ್ಲಿ ಬರಲಿ.
ನಿಮ್ಮಿಬ್ಬರ ಬೆಂಗಾವಲಾಗಿ ನಾನು ಕೊನೆಯಲ್ಲಿ ಬರುತ್ತೇನೆ."
 
ಹೀಗೆ ಸಾಗುತ್ತ ಒಂದು ದೊಡ್ಡ ಕಾಡನ್ನು ಸೇರಿದರು. ಅಲ್ಲೊಂದು
ಆಲದ ಮರವಿತ್ತು. ಅದರ ಬುಡದಲ್ಲಿ ತಂಗಿದರು. ಕಮಲದ ನಾಲವನ್ನು
ಅಂದು ಆಹಾರವಾಗಿ ಸೇವಿಸಿದರು. ಎಲ್ಲಿಲ್ಲದ ಮಾತುಕತೆಗಳಿಂದ ಆ ರಾತ್ರಿ
ಸುಖಮಯವಾಗಿ ಸಾಗಿತು. ಬೆಳಗಾದರೆ ಮತ್ತೆ ಪುನಃ ಪ್ರಯಾಣ. ಹೀಗೆ
ಬಹು ಪ್ರದೇಶಗಳನ್ನು ದಾಟಿ, ಸಂಜೆಯ ಹೊತ್ತಿಗೆ ಗಂಗೆ-ಯಮುನೆಯರ ಸಂಗಮ
ಸ್ಥಲಕ್ಕೆ ಬಂದು ತಲುಪಿದರು.
 
ಬೃಹಸ್ಪತಿಯ ಮಕ್ಕಳಾದ ಭರದ್ವಾಜರ ಆಶ್ರಮ ಅಲ್ಲೆ ಬಳಿಯಲ್ಲಿತ್ತು.
ಅವರು ರಾಮಚಂದ್ರ ಬಂದುದನ್ನು ತಿಳಿದು ಆಶ್ರಮಕ್ಕೆ ಕರೆದು ಸತ್ಕರಿಸಿದರು.
ಹಣ್ಣು-ಗಡ್ಡೆಗಳನ್ನು ಉಣಿಸಿದರು. ಭಕ್ತಿಯಿಂದ ಆಸನದಲ್ಲಿ ಕುಳ್ಳಿರಿಸಿ
ಕೈಮುಗಿದು ವಿಜ್ಞಾಪಿಸಿಕೊಂಡರು:
 
"ಪರಮಪುರುಷ, ನಿನ್ನನ್ನು ಕಾಣುವ ಭಾಗ್ಯ ಇಷ್ಟು ವಿಲಂಬವಾಗಿ
ಯಾದರೂ ನನಗೆ ದೊರಕಿತಲ್ಲ ! ಅದೇ ಮಹಾಪುಣ್ಯ, ರಾಮಭದ್ರ, ಈ
ಪ್ರದೇಶ ತುಂಬ ಸೊಗಸಾಗಿದೆ; ಹಿತವಾಗಿದೆ. ನೀನು ಇಲ್ಲೇ ಇದ್ದು ಬಿಟ್ಟರೆ
ನಮಗೆಲ್ಲ ಆನಂದವಾಗುವುದು."
 
"ಮಹರ್ಷಿಯೆ, ನಾನಿಲ್ಲಿದ್ದರೆ ಜನರೆಲ್ಲ ಒಂದು ಮುತ್ತಿ ಬಿಡುತ್ತಾರೆ. ಇದ
'ಕ್ಕಿಂತಲೂ ಏಕಾಂತವಾದ ಒಂದು ನಿರ್ಜನಾರಣ್ಯವನ್ನು ತಿಳಿಸಿದರೆ ಚೆನ್ನಾಗಿತ್ತು."
 
ಆಗ ಭರದ್ವಾಜರು ಕಪಾಲಶಿರ ಮೊದಲಾದ ತಪಸ್ವಿಗಳು ಸಿದ್ದಿ ಪಡೆದ
ತಾಣವಾದ ಚಿತ್ರಕೂಟವನ್ನು ಸೂಚಿಸಿದರು.
 
ಮರುದಿನ ಬೆಳಿಗ್ಗೆ ಮುನಿಗಳಿಗೆ ಅಭಿನಂದಿಸಿ, ಸೀತಾಲಕ್ಷ್ಮಣರೊಡನೆ
ರಾಮಚಂದ್ರ ಪಶ್ಚಿಮಾಭಿಮುಖವಾಗಿ ಮುಂದೆ ಹೊರಟನು. ದಾರಿಯಲ್ಲಿ