This page has been fully proofread once and needs a second look.

ಮಿಂಚಿನಬಳ್ಳಿ
 
ಇತ್ತ ರಾಮಚಂದ್ರ ದಾರಿಯಲ್ಲಿ ಸಿಕ್ಕ ವೇದಶ್ರುತಿ ಎಂಬ ನದಿಯನ್ನೂ
, ಗೋತೀ ನದಿಯನ್ನೂ ದಾಟಿ ಮುಂದೆ ಸಾಗಿದ. ಇಲ್ಲಿಯೂ ಕೋಸಲದ
ಜಾನಪದರು ಅವರನ್ನು ಹಿಂಬಾಲಿಸತೊಡಗಿದರು. ಆಗ ರಾಮ ಅವರನ್ನು
ಹಿಂದಿರುಗುವಂತೆ ಕೇಳಿ- ಕೊಂಡನು. ಹೀಗೆಯೇ ಮುಂದೆ ಸಾಗುತ್ತಿದ್ದಂತೆ
 

ಎದುರಿನಲ್ಲಿ ಗಂಗಾನದಿ ಕಾಣಿಸಿಕೊಂಡಿತು. ಸುಮಂತನತ್ರನೂ ಸೀತಾ-ರಾಮ-
ಲಕ್ಷ್ಮಣರೂ ನದಿಯ ತಡೆಯಲ್ಲಿ ಇದ್ದ ಇಂಗುದೀ ವೃಕ್ಷವೊಂದರ ಬುಡದಲ್ಲಿ
- ದಲ್ಲಿ ವಿಶ್ರಮಿಸಿಕೊಂಡರು.
 
>
 

 
ಅದು ಬೇಡರ ಒಡೆಯನಾದ ಗುಹನೆಂಬ ಸತ್ಪುರುಷನ ಸೀಮೆಯಾಗಿತ್ತು.
ಅವನು ತನ್ನ ಪ್ರಾಂತದಲ್ಲಿ ಬಂದ ಪ್ರಭು ರಾಮಚಂದ್ರನನ್ನು ಕಂಡು ಸಂತಸ
ಗೊಂಡು ಬಂದು ಕಾಲಿಗೆರಗಿದನು. ವಿನಯದಿಂದ ಬೇಡಿಕೊಂಡನು:
 

 
"ಈ ಸೀಮೆ ನಿನ್ನದು. ನಾವೆಲ್ಲ ನಿನ್ನ ದಾಸರು. ನೀನಿಲ್ಲೇ ಇರಬೇಕೆಂದು
ನನ್ನ ಬಯಕೆ."
 

 
ಗುಹನ ಆತಿಥ್ಯಕ್ಕೆ ರಾಮನ ಒಪ್ಪಿಗೆ ದೊರೆಯಿತು.
 

 
ಸಂಧ್ಯಾಕಾಲ ಕಳೆಯಿತು. ರಾಮ ಸೀತೆಯರು ಬರಿ ಹುಲ್ಲಮೇಲೆ
ಪವಡಿಸಿದರು. ಲಕ್ಷ್ಮಣ ಮಾತ್ರ ಮಲಗದೆ ಸುಮ್ಮನೆ ನಿಂತಿದ್ದ. ಕೈಯಲ್ಲಿ
ಬಿಲ್ಲು ಬಾಣಗಳಿದ್ದವು. ಇದನ್ನು ಕಂಡು ಗುಹನು ರಾಮ ಸೀತೆಯರಿಗೆ ತಾನು

ಕಾವಲಿರುವದಾಗಿ ನುಡಿದು, ಲಕ್ಷ್ಮಣನ್ನು ವಿಶ್ರಮಿಸುವಂತೆ ಕೇಳಿಕೊಂಡನು.
ಲಕ್ಷ್ಮಣನು ಗದ್ಗದಿತನಾಗಿ ಉತ್ತರಿಸಿದ.
 
:
 
"
ರಾಜಪ್ರಾಸಾದದಲ್ಲಿ ಹಂಸತೂಲಿಕೆಯಲ್ಲಿ ಮಲಗುತ್ತಿದ್ದ ನನ್ನ ಅಣ್ಣ-
ನನ್ನ ಅತ್ತಿಗೆ, ಈ ಹುಲ್ಲುಗರಿಕೆಯ ಮೇಲೆ ಪವಡಿಸಿದ್ದನ್ನು ಕಂಡು ನನ್ನ ಕರುಳು
ಕಿವುಚಿದಂತಾಗುತ್ತಿದೆ. ಗುಹ, ನಿನ್ನಲ್ಲಿ ರಹಸ್ಯ ಮಾಡಲಾರೆ. ಅಲ್ಲಿ ಅಯೋಧ್ಯೆ
ಯಲ್ಲಿ ಅಣ್ಣನನ್ನು ನೆನೆದು, ತಂದೆ-ತಾಯಂದಿರು ಎಷ್ಟು ಕರುಬುತ್ತಿರುವರೋ !
ಅಯ್ಯೋ ! ಅದನ್ನು ನೆನೆದು ಕೊಂಡರೆ ನಿದ್ದೆ ಬರುವುದು ಸಾಧ್ಯವೆ ಗುಹ ?"
 

 
ರಾಮಧ್ಯಾನತತ್ಪರರಾಗಿ ರಾಮನ ಕುರಿತೇ ಮಾತಾಡುತ್ತಿದ್ದ ಗುಹನಿಗೂ
ಲಕ್ಷ್ಮಣನಿಗೂ ಮಾತಿನ ಭರದಲ್ಲಿ ಬೆಳಗಾದುದೇ ಗೊತ್ತಾಗಲಿಲ್ಲ.