This page has been fully proofread once and needs a second look.

ಸಂಗ್ರಹರಾಮಾಯಣ
 
*
"ರಾಮಚಂದ್ರ, ಊರಿಗೆ ಮರಳು. ನಮ್ಮನ್ನೆಲ್ಲ ಪಾಲಿಸು. ಹಂಸದಂತೆ
ಬಿಳಿಗೂದಲಿನ ಈ ಹಾರುವ- ರನ್ನೊಮ್ಮೆ ನೋಡು, ನೀನು ಊರಿಗೆ ಮರಳ
- ಬೇಕೆಂದು ಅವರು ಯಾಚಿಸುತ್ತಿದ್ದಾರೆ. ಶ್ವೇತಚ್ಛತ್ರ- ದಡಿಯಲ್ಲಿ ನಡೆಯಬೇಕಾಗಿದ್ದ
ನೀನು ಕೊಡೆ- ಯಿಲ್ಲದೆ ಹೋಗುತ್ತಿರುವೆ. ಬ್ರಾಹ್ಮಣರೆಲ್ಲ ವಾಜಪೇಯಯಾಗದ
ಛತ್ರವನ್ನು ನಿನಗೆ ಹಿಡಿಯುತ್ತಿದ್ದಾರೆ.
 
33
 
೬೩
 
"
 
ವಿಪ್ರರ ಮಾತುಗಳನ್ನಾಲಿಸುತ್ತ ರಾಮನು ಸುಮ್ಮನೆ ಮುಂದುವರಿಯು
ತಿದ್ದ. ಸಂಜೆ ಸಮಾಪಿಸಿತು. ಎಲ್ಲರೂ ತಮಸಾನದಿಯ ದಡಕ್ಕೆ ಬಂದಿದ್ದರು.

ರಾಮಚಂದ್ರ ಲಕ್ಷ್ಮಣನೊಡನೆ ಹಾಸ್ಯಕ್ಕೆಂಬಂತೆ ನುಡಿದನು:
 
CE
 

 
"
ಅರಮನೆಯ ರಾಜಭೋಗವನ್ನು ನೆನೆದು ಕೊರಗಬೇಡ ಲಕ್ಷಣ.
ಈ ತಿಳಿ ನೀರು ಈ ಹಣ್ಣು -ಗಡ್ಡೆಗಳೇ ನಮಗಿನ್ನು ಆಹಾರ, "
 
. "
 
ಸುಮಂತ್ರನು ಬಳಲಿದ ಕುದುರೆಗೆ ನೀಮೇವು ತಿನ್ನಿಸಿದನು. ಸಾಯಂ
ಸಂಧ್ಯಾವಂದನೆ ಮುಗಿದ ಬಳಿಕ ಎಲ್ಲರೂ ತಮಸಾ ನದಿಯ ತಡಿಯಲ್ಲಿ
 
ಲೆ
ಮಲಗಿದರು.
 

 
ನಡುರಾತ್ರಿಯ ಕಾಲ,. ರಾಮಚಂದ್ರ ಎದ್ದು ಕುಳಿತು ಲಕ್ಷ್ಮಣನನ್ನು
ಕರೆದು ನುಡಿದನು.
 

 
" ತಮ್ಮ ಮನೆಯನ್ನು ತೊರೆದು ಈ ಪುರಜನರೆಲ್ಲ ಇಲ್ಲಿ ಬಂದು ಮಲ
ಗಿದ್ದಾರೆ. ಮಡದಿ-ಮಕ್ಕಳನ್ನು ತೊರೆದು ನನ್ನ ಬೆನ್ನು ಹಿಡಿದಿದ್ದಾರೆ !
ಈಗಿನ್ನೂ ಇವರು ಎಚ್ಚೆತ್ತಿಲ್ಲ. ಆ ಮೊದಲೇ ನಾವು ಇಲ್ಲಿಂದ ಹೊರಟುಹೋಗ
ಬೇಕು. " ಒಂದು ಕ್ಷಣ ಸುಮ್ಮನಿದ್ದು ಮತ್ತೆ ನುಡಿದ : " "ನಮ್ಮನ್ನು ನಂಬಿ
ಬಂದ ಇವರನ್ನು ವಂಚಿಸಿ ಹೋಗುವುದು ಎಂಥ ಕಷ್ಟದ ಕೆಲಸ! ಅಲ್ಲವೆ
ಲಕ್ಷಣ ? " ಮತ್ತೆ ಸುಮಂತ್ರನೆಡೆಗೆ ತಿರುಗಿ ನುಡಿದನು: " ಪೌರರು ನಾನು
ಊರಿಗೆ ಮರಳಿದೆ- ನೆಂದು ತಿಳಿದಂವಂತೆ ರರ್ನ್ನು ಸ್ವಲ್ಪು ಉತ್ತರಕ್ಕೆ ಕೊಂಡೊಯ್ದು
ಬಾ, "
 
. "
 
ಸುಮಂತ್ರನು ಹಾಗೆ ಮಾಡಿದಮೇಲೆ ರಾಮ-ಲಕ್ಷ್ಮಣ-ಸೀತೆಯರು ರಥ
ವನ್ನೇರಿ ಬೆಳಗಾಗುವುದ- ರೊಳಗೆ ಬಹುದೂರ ಸಾಗಿ ಹೋಗಿದ್ದರು.
ಬೆಳಿಗ್ಗೆ

ತಮಸಾನದಿಯ ತಡಿಯಲ್ಲಿ ರಾಮನಿಲ್ಲದ್ದನ್ನು ಕಂಡ ಪೌರರು, ಅವನು ಊರಿಗೆ
ಮರಳಿದನೆಂದೇ ನಂಬಿ ಸಂತಸದಿಂದ ನಗರದೆಡೆಗೆ ನಡೆದರು.