This page has not been fully proofread.

ಸಂಗ್ರಹರಾಮಾಯಣ
 
* ರಾಮಚಂದ್ರ, ಊರಿಗೆ ಮರಳು. ನಮ್ಮನ್ನೆಲ್ಲ ಪಾಲಿಸು. ಹಂಸದಂತೆ
ಬಿಳಿಗೂದಲಿನ ಈ ಹಾರುವರನ್ನೊಮ್ಮೆ ನೋಡು, ನೀನು ಊರಿಗೆ ಮರಳ
ಬೇಕೆಂದು ಅವರು ಯಾಚಿಸುತ್ತಿದ್ದಾರೆ. ಶ್ವೇತಚ್ಛತ್ರದಡಿಯಲ್ಲಿ ನಡೆಯಬೇಕಾಗಿದ್ದ
ನೀನು ಕೊಡೆಯಿಲ್ಲದೆ ಹೋಗುತ್ತಿರುವೆ. ಬ್ರಾಹ್ಮಣರೆಲ್ಲ ವಾಜಪೇಯಯಾಗದ
ಛತ್ರವನ್ನು ನಿನಗೆ ಹಿಡಿಯುತ್ತಿದ್ದಾರೆ.
 
33
 
೬೩
 
ವಿಪರ ಮಾತುಗಳನ್ನಾಲಿಸುತ್ತ ರಾಮನು ಸುಮ್ಮನೆ ಮುಂದುವರಿಯು
ತಿದ್ದ. ಸಂಜೆ ಸಮಾಪಿಸಿತು. ಎಲ್ಲರೂ ತಮಸಾನದಿಯ ದಡಕ್ಕೆ ಬಂದಿದ್ದರು.
ರಾಮಚಂದ್ರ ಲಕ್ಷ್ಮಣನೊಡನೆ ಹಾಸ್ಯಕ್ಕೆಂಬಂತೆ ನುಡಿದನು:
 
CE
 
ಅರಮನೆಯ ರಾಜಭೋಗವನ್ನು ನೆನೆದು ಕೊರಗಬೇಡ ಲಕ್ಷಣ.
ಈ ತಿಳಿ ನೀರು ಈ ಹಣ್ಣು -ಗಡ್ಡೆಗಳೇ ನಮಗಿನ್ನು ಆಹಾರ, "
 
ಸುಮಂತ್ರನು ಬಳಲಿದ ಕುದುರೆಗೆ ನೀವು ತಿನ್ನಿಸಿದನು. ಸಾಯಂ
ಸಂಧ್ಯಾವಂದನೆ ಮುಗಿದ ಬಳಿಕ ಎಲ್ಲರೂ ತಮಸಾ ನದಿಯ ತಡಿಯಲ್ಲಿ
 
ಮಲಗಿದರು.
 
ನಡುರಾತ್ರಿಯ ಕಾಲ, ರಾಮಚಂದ್ರ ಎದ್ದು ಕುಳಿತು ಲಕ್ಷ್ಮಣನನ್ನು
ಕರೆದು ನುಡಿದನು.
 
" ತಮ್ಮ ಮನೆಯನ್ನು ತೊರೆದು ಈ ಪುರಜನರೆಲ್ಲ ಇಲ್ಲಿ ಬಂದು ಮಲ
ಗಿದ್ದಾರೆ. ಮಡದಿ-ಮಕ್ಕಳನ್ನು ತೊರೆದು ನನ್ನ ಬೆನ್ನು ಹಿಡಿದಿದ್ದಾರೆ !
ಈಗಿನ್ನೂ ಇವರು ಎಚ್ಚತ್ತಿಲ್ಲ. ಆ ಮೊದಲೇ ನಾವು ಇಲ್ಲಿಂದ ಹೊರಟುಹೋಗ
ಬೇಕು. " ಒಂದು ಕ್ಷಣ ಸುಮ್ಮನಿದ್ದು ಮತ್ತೆ ನುಡಿದ : " ನಮ್ಮನ್ನು ನಂಬಿ
ಬಂದ ಇವರನ್ನು ವಂಚಿಸಿ ಹೋಗುವುದು ಎಂಥ ಕಷ್ಟದ ಕೆಲಸ! ಅಲ್ಲವೆ
ಲಕ್ಷಣ ? " ಮತ್ತೆ ಸುಮಂತ್ರನೆಡೆಗೆ ತಿರುಗಿ ನುಡಿದನು: " ಪೌರರು ನಾನು
ಊರಿಗೆ ಮರಳಿದೆನೆಂದು ತಿಳಿದಂತೆ ರರ್ಥನ್ನು ಸ್ವಲ್ಪು ಉತ್ತರಕ್ಕೆ ಕೊಂಡೊಯ್ದು
ಬಾ, "
 
ಸುಮಂತನು ಹಾಗೆ ಮಾಡಿದಮೇಲೆ ರಾಮ-ಲಕ್ಷ್ಮಣ-ಸೀತೆಯರು ರಥ
ವನ್ನೇರಿ ಬೆಳಗಾಗುವುದರೊಳಗೆ ಬಹುದೂರ ಸಾಗಿ ಹೋಗಿದ್ದರು.
ಬೆಳಿಗ್ಗೆ
ತಮಸಾನದಿಯ ತಡಿಯಲ್ಲಿ ರಾಮನಿಲ್ಲದ್ದನ್ನು ಕಂಡ ಪೌರರು, ಅವನು ಊರಿಗೆ
ಮರಳಿದನೆಂದೇ ನಂಬಿ ಸಂತಸದಿಂದ ನಗರದೆಡೆಗೆ ನಡೆದರು.