This page has been fully proofread once and needs a second look.

ಮಿಂಚಿನಬಳ್ಳಿ
 
ತಡೆದು ನಿಲ್ಲಿಸಿದರು. ಜೀವವಿಲ್ಲದ ದೇಹದಂತೆ ರಾಮನಿಲ್ಲದ ಅಯೋಧ್ಯೆ
ಅಮಂಗಳವಾಗಿ ಕಾಣುತ್ತಿತ್ತು. ಮನುಷ್ಯನೇ ಏನು ? ಮರ-ಮಟ್ಟುಗಳೂ
ಪ್ರಾಣಿ-ಪಕ್ಷಿಗಳೂ ಇಡಿಯ ಪ್ರಕೃತಿಯೇ ಮೂಕ ವೇದನೆಯನ್ನನುಭವಿಸು-
ವಂತಿತ್ತು.
 
19
 

 
ಪುತ್ರವಿರಹದಿಂದ ದುಃಖಿತನಾದ ರಾಜ ನೆಲದ ಮೇಲೆ ಕುಸಿದು ಬಿದ್ದ.
ಕೌಸಲ್ಯೆ, ಕೈಕೇಯಿಯರು ಇದನ್ನು ಕಂಡು ಕಾತರತೆಯಿಂದ ರಾಜನ ಎರಡೂ
ತೋಳನ್ನು ಹಿಡಿದು ಮೇಲೆತ್ತಿದರು. ಮಹಾರಾಜ ಸಿಟ್ಟಿನಿಂದ ಕೈಕೇಯಿಯೆಡೆಗೆ
ಕೆಕ್ಕರಿಸಿ, ಅವಳು ಹಿಡಿದ ತೋಳನ್ನು ಝಾಡಿಸಿ ಹಂಗಿಸಿದ :
 

 
" ತೊಲಗು ಚಂಡಾಲಿ, ನನ್ನನ್ನು ಮುಟ್ಟಬೇಡ. ನೀನು ಕವಡಿನಿಂದ
ಪಡೆದ ರಾಜ್ಯವನ್ನು ಭರತ ಭೋಗಿಸುವುದಾದರೆ, ಅವನಿತ್ತ ಪಿಂಡವನ್ನು ನನ್ನ

ಮೃತಾತ್ಮವೂ ಮುಟ್ಟಲಾರದು; " ಹೀಗೆಂದು ರಾಮನು ಹೋದ ದಾರಿಯನ್ನೆ
ಸ್ವಲ್ಪ ಹೊತ್ತು ದಿಟ್ಟಿಸಿ-ದೀರ್ಘವಾದ ನಿಟ್ಟುಸಿರೊಂದನ್ನೆಳೆದು ನುಡಿದ:
" ಕೌಸಲ್ಯೆಯ ಕನ್ನೆವಾಡಕ್ಕೆ ನನ್ನನ್ನು ಕರೆದೊಯ್ದಿಯಿರಿ, ರಾಮನು ನಡೆದ ನೆಲ
ವನ್ನಾದರೂ ಕಣ್ಣಿಂದ ಕಾಣುವೆನು. "
 

 
ಕೌಸಲ್ಯೆಯ ಅಂತಃಪುರದಲ್ಲಿ ರಾಜ ಬಹು ವಿಧ- ವಾಗಿ ವಿಲಾಪಿಸಿದನು.
ರಾಮನನ್ನು ನೆನೆದುಕೊಂಡು ಹೇಗೋ ಕಾಲವನ್ನು ಕಳೆದನು.
 

 
ಇತ್ತ ಪುರಸ್ತ್ರೀಯರು-ಮಕ್ಕಳು ರಾಮನ ವನ ಗಮನವನ್ನು ಕಂಡು
ದುಃಖ ತಡೆಯಲಾರದೆ ಕಣ್ಣೀರ ಕೋಡಿಯನ್ನೆ ಹರಿಸಿದರು. ಪೌರರೆಲ್ಲ 'ರಾಮ-
ಭದ್ರ ನಮ್ಮನ್ನು ತೊರೆದು ಹೋಗಬೇಡ' ಎಂದು ರಥದ ಹಿಂದೆಯೆ ಧಾವಿಸಿ
ದರು. ರಾಮನು ಗಂಭೀರ ವಾಣಿಯಿಂದ ಅವರನ್ನು ಸಮಾಧಾನಗೊಳಿಸಿದ:
 
(6
 

 
" ನೀವೆಲ್ಲ ಹಿಂತಿರುಗಬೇಕು. ಇನ್ನು ಭರತ ನಿಮ್ಮ ಯುವರಾಜ,
ಅವನ ಆದೇಶದಂತೆ ನೀವು ನಡೆಯ- ಬೇಕು, ಅದರಿಂದ ನನಗೆ ಸಂತೋಷ.
ವಾಗುವುದು. 2
 
"
 
ಆದರೂ ಪೌರರು ಅವನನ್ನೇ ಹಿಂಬಾಲಿಸಿದರು. ಅದನ್ನು ಕಂಡು
ಕರುಣಾಳು ರಾಮಚಂದ್ರ ರಥ- ದಿಂದಿಳಿದು ಬರಿಗಾಲಿನಿಂದ ಅವರ ಜತೆಗೇ ನಡೆದು

ಬಂದನು. ಆಗ ನಗರದ ವಿಪ್ರರೆಲ್ಲ ರಾಮನಲ್ಲಿ ವಿನಂತಿಸಿಕೊಂಡರು: