This page has been fully proofread once and needs a second look.

ರಾಮಚಂದ್ರ ಕಾಲುನಡಿಗೆಯಿಂದ ಕಾಡಿಗೆ ಹೊರಟು ದನ್ನು ಕಂಡು, ಮಹಾರಾಜ ಸುಮಂತ್ರನನ್ನು ಕರೆದು ಆಜ್ಞಾಪಿಸಿದ:
 
"ಸುಮಂತ್ರ, ನನ್ನ ಕಂದನನ್ನು ನನ್ನ ರಥದಲ್ಲಿ ಕರೆದುಕೊಂಡು ಹೋಗು, ತಾಯಿ-ತಂದೆಯರು ಕೈಬಿಟ್ಟ ಮಗನನ್ನು ಕಾಡಿಗೆ ಬಿಟ್ಟು ಬಾ ಸುಮಂತ್ರ."
 
ಒಡನೆ ಸುಮಂತ್ರ ರಥವನ್ನು ದ್ವಾರದಲ್ಲಿ ತಂದಿರಿಸಿದ. ಚೀರವಸನೆಯಾದ ಸೀತೆಯನ್ನು ಕಂಡು, ಮಹಾರಾಜ ಕೋಶಾಧ್ಯಕ್ಷನನ್ನು ಬರಿಸಿ
ನುಡಿದನು:
 
"ಬೆಲೆಬಾಳುವ ಬಟ್ಟೆಗಳು, ಬಂಗಾರದೊಡವೆ ಗಳು ಇನ್ನೂ ಎಲ್ಲ ಸಿಂಗಾರದ ಬಗೆಗಳನ್ನು ನನ್ನ ಸೊಸೆ ಸೀತೆಗೆ ತಂದುಕೊಡು."
 
ಕೋಶಾಗಾರದ ಅಮೂಲ್ಯ ಆಭರಣಗಳು ಸೀತೆಯ ಮೈಯಲ್ಲಿ ತೊಳಗಿದವು. ಕೌಸಲ್ಯೆ ಸೀತೆಯನ್ನು ಮಗಳಂತೆ ಮುಂಡಾಡಿ ನುಡಿದಳು:
 
"ಮಗಳೆ ! ನಾನು ಬಲ್ಲೆ, ರಾಮಚಂದ್ರನ ಮೇಲೆ ನಿನಗೆ ತುಂಬ ಒಲವು. ಅವನು ಯಾವುದೋ ದುರ್ವಿಪಾಕದಿಂದ ಕಾಡಿಗೆ ತೆರಳುತ್ತಿದ್ದಾನೆ. ತಪಸಿ- ಯಾದ ಗಂಡನನ್ನು ಹಳಿಯಬೇಡ ತಾಯಿ. ಅವನ ಮನಸ್ಸು ನೋಯುವಂಥ ಯಾವ ಮಾತನ್ನೂ ಆಡಬೇಡ, ಸಾಧ್ವಿಯಾಗಿ ಬಾಳು. "
 
" ಅತ್ತೆ ! ಗಂಡನನ್ನು ಗೌರವಿಸದ ಕುಸಂಸ್ಕೃತ- ರೊಡನೆ ನನ್ನನ್ನು ಹೋಲಿಸಬೇಡಿ. ಗಂಡನಿಲ್ಲದ ತರುಣಿ ಗಾಲಿಯಿಲ್ಲದ ತೇರು ಎಂದು ನನಗೆ ಗೊತ್ತು. ತಂತಿಯಿಲ್ಲದ ವೀಣೆ ಎಂದಿಗೂ ನುಡಿಯಲಾರದು. "
 
ಸೊಸೆಯ ಮಾತಿನಿಂದ ಸಂತಸಗೊಂಡ ಕೌಸಲ್ಯೆ ಅವಳನ್ನು ಬಿಗಿದಪ್ಪಿ, ರಾಮನಿಗೂ ಒಂದೆರಡು ಹಿತದ ನುಡಿಯನ್ನಾಡಿದಳು :
 
" ಕಂದ, ಕಾಡಿನಲ್ಲಿ ಎಚ್ಚರಿಕೆಯಿಂದಿರು. ಅಂತೆಯೇ ನನ್ನ ಸೊಸೆಯನ್ನೂ ಕುಮಾರ ಲಕ್ಷ್ಮಣನನ್ನೂ ಜೋಪಾನವಾಗಿ ನೋಡಿಕೊಂಡಿರು ವತ್ಸ. "
 
"ಮಾತೆ, ಈ ತ್ರೈಲೋಕ್ಯದಲ್ಲಿ ದೇವ-ದಾನವರೆಲ್ಲ ಕೂಡಿ ಕದನ ಹೂಡಿ ನನಗೆ ಸೋಲೆಂಬುದಿಲ್ಲ, ಕಳವಳಗೊಳ್ಳಬೇಡ. ಆದಷ್ಟು ಬೇಗ ನಿನ್ನ ಸೊಸೆಯನ್ನು ಕುಮಾರ ಲಕ್ಷ್ಮಣನನ್ನೂ ಕರೆದು ಕೊಂಡು ಬರುವೆ ತಾಯಿ. "
 
ರಾಮಚಂದ್ರನು ಕ್ರಮವಾಗಿ ಮಹಾರಾಜನ ಮುನ್ನೂರೈವತ್ತು ಮಡದಿಯರನ್ನು ವಂದಿಸಿ- ಬೇಡಿಕೊಂಡನು ;