This page has been fully proofread once and needs a second look.

ಸಂಗ್ರಹರಾಮಾಯಣ
 
ಸೀತೆಯ ಮೈಯಲ್ಲಿ ನಾರುಡೆಯನ್ನು ಕಂಡಾಗ, ವಸಿಷ್ಠರು ಈ ವರೆಗೆ ತಡೆಹಿಡಿ
ದಿದ್ದ ಸಿಟ್ಟು ಹೊನ- ಲಾಗಿ ಹರಿಯಿತು, "ಬೇಡ ತಾಯಿ ನಾರುಡೆಯನ್ನು- ಡಬೇಡ"
ಎಂದು ಸೀತೆಯನ್ನು ತಡೆದು ಅವರು ಕೈಕೇಯಿಯೆಡೆಗೆ ತಿರುಗಿ ನುಡಿದರು:
 

 
" ಕೈಕೇಯಿ, ನಿನ್ನ ಈ ದುಡುಕುತನ ಎಲ್ಲೆ ಮೀರುತ್ತಿದೆ. ನೀನು ಈ
ಅಕೃತ್ಯದಿಂದ ಇಡಿಯ ಕೇಕಯವಂಶಕ್ಕೆ ಮಸಿಬಳೆಯುತ್ತಿರುವೆ. ನಿನ್ನ ದುರ್ವೃತ್ತದ
ಫಲವಾಗಿಯೂ ಸೀತೆ ಕಾಡಿಗೆ ಹೋಗು- ವುದನ್ನು ನಾನು ಸಹಿಸಲಾರೆ. ಗಂಡ-
ಹೆಂಡಿರೆಂದರೆ ಒಂದು ಮನಸಿನ ಎರಡು ಮೈಗಳು. ರಾಮನ ಅರ್ಧಾಂಗಿ ಸೀತೆ
ನಮ್ಮ ರಾಣಿಯಾಗಿ ಇಲ್ಲೇ ಉಳಿ- ಯಲಿ, ಸೀತಾ ರಾಮರಿಬ್ಬರೂ ಕಾಡಿಗೆ
ಹೋಗುವು- ದಾದರೆ ನಮಗಾದರೂ ಏಕೆ ಈ ರಾಜ್ಯ ? ನಾವೂ ರಾಮನ
ಜತೆಗೆ ತಪಸಿಸ್ವಿಗಳಾಗಿ ಬಾಳುವೆವು. ಕಾಡಿನಲ್ಲೇ ಹೊಸ ರಾಷ್ಟ್ರವನ್ನು ನಿರ್ಮಾಣ
ಮಾಡು ವೆವು. ಭರತ-ಶತುಘ್ನರೂ ನನ್ನಮ್ಮ ಜತೆಗೆ ಬಂದು ಬಿಡುವರು. ಓ ಕುಹಕಿ
ಕೈಕೇಯಿಯೇ, ನಿರ್ಜನವಾದ ಅಯೋಧ್ಯೆಯ ಮರ-ಬಳ್ಳಿಗಳನ್ನು ನೀನು ಮಹಾ

ರಾಣಿಯಾಗಿ ಆಳು ತಾಯಿ, ಅಯೋಧ್ಯೆಯ ಪ್ರಪುಣ್ಯ- ನೆಲದ ಮೇಲೆ ನಡೆಯಲಿ
ಈ ಮಹಾಕಾಳಿಯ ಪ್ರಳಯ ನೃತ್ಯ ! "

 
ಮಹಾರಾಜನೂ ನಿರ್ವಿಣ್ಣನಾಗಿ ನುಡಿದ
 
:
 
"
ರಾಮನೊಬ್ಬ ಕಾಡಿಗೆ ಹೋಗಬೇಕಂದಲ್ಲವೆ ನೀನು ಬಯಸಿದ್ದು ?
ಪಾಪ-ಸೀತೆಗೂ ಲಕ್ಷ್ಮಣನಿಗೂ ಏಕೆ ನಾರುಡೆಯನ್ನು ತೊಡಿಸಿದೆ ಪಾಪಿಷ್ಠೆ ?
 
66
 
"
 
ಇಡಿಯ ಅಂತಃಪುರವೇ ಪ್ರಕ್ಷುಬ್ಧವಾಗಿ ಕೈಕೇಯಿ- ಯ ಮೇಲೆ ಹರಿಹಾಯು
ವಂತಿದ್ದುದನ್ನು ನೋಡಿ ಕರುಣಾಳು ರಾಮಚಂದ್ರ ನುಡಿದ.
 
*

 
"
ಮಹಾರಾಜ, ನನಗಾಗಿ ನೀವಾರೂ ತಾಯಿ ಕೈಕೇಯಿಯನ್ನು ಹೀಗೆ
ನೋಯಿಸಬಾರದು. ಏನಿದ್ದರೂ ಅವಳು ನನ್ನ ತಾಯಿ. ದಯವಿಟ್ಟು ನನಗೋ
ಸ್ಕರ ಅವಳ ಮೇಲೆ ನೀವೆಲ್ಲ ಕೃಪೆತಾಳ- ಬೇಕು.
 
2)
 
"
 
ರಾಮನು ಮೆಲ್ಲನೆ ಅಂತಃಪುರದಿಂದ ಹೊರ ನಡೆದ. ಅದನ್ನು ಕಂಡು
ಮಹಾರಾಜನಿಗೆ ದುಃಖ ತಡೆಯಲಾಗಲಿಲ್ಲ. ಕೈಕೇಯಿಯನ್ನು ಪರಿಪರಿಯಾಗಿ

ತೆಗಳಿದನು. ರಾಮನನ್ನು ನೆನೆದು ಮಕ್ಕಳಂತೆ ಅತ್ತು ಬಿಟ್ಟನು.
ನೂರಾರು ಮಹಿಷಿಯರೂ ಚೀತ್ಕರಿಸಿದರು.
 
ರಾಜನ
 

ಯುವರಾಜನಾಗಬೇಕಿದ್ದ