We're performing server updates until 1 November. Learn more.

This page has not been fully proofread.

ಸಂಗ್ರಹರಾಮಾಯಣ
 
ಸೀತೆಯ ಮೈಯಲ್ಲಿ ನಾರುಡೆಯನ್ನು ಕಂಡಾಗ, ವಸಿಷ್ಠರು ಈ ವರೆಗೆ ತಡೆಹಿಡಿ
ದಿದ್ದ ಸಿಟ್ಟು ಹೊನಲಾಗಿ ಹರಿಯಿತು, "ಬೇಡ ತಾಯಿ ನಾರುಡೆಯನ್ನುಡಬೇಡ"
ಎಂದು ಸೀತೆಯನ್ನು ತಡೆದು ಅವರು ಕೈಕೇಯಿಯೆಡೆಗೆ ತಿರುಗಿ ನುಡಿದರು:
 
" ಕೈಕೇಯಿ, ನಿನ್ನ ಈ ದುಡುಕುತನ ಎಲ್ಲೆ ಮೀರುತ್ತಿದೆ. ನೀನು ಈ
ಅಕೃತ್ಯದಿಂದ ಇಡಿಯ ಕೇಕಯವಂಶಕ್ಕೆ ಮಸಿಬಳೆಯುತ್ತಿರುವೆ. ನಿನ್ನ ದುರ್ವತ್ತದ
ಫಲವಾಗಿಯೂ ಸೀತೆ ಕಾಡಿಗೆ ಹೋಗುವುದನ್ನು ನಾನು ಸಹಿಸಲಾರೆ. ಗಂಡ-
ಹೆಂಡಿರೆಂದರೆ ಒಂದು ಮನಸಿನ ಎರಡು ಮೈಗಳು. ರಾಮನ ಅರ್ಧಾಂಗಿ ಸೀತೆ
ನಮ್ಮ ರಾಣಿಯಾಗಿ ಇಲ್ಲೇ ಉಳಿಯಲಿ, ಸೀತಾ ರಾಮರಿಬ್ಬರೂ ಕಾಡಿಗೆ
ಹೋಗುವುದಾದರೆ ನಮಗಾದರೂ ಏಕೆ ಈ ರಾಜ್ಯ ? ನಾವೂ ರಾಮನ
ಜತೆಗೆ ತಪಸಿಗಳಾಗಿ ಬಾಳುವೆವು. ಕಾಡಿನಲ್ಲೇ ಹೊಸ ರಾಷ್ಟ್ರವನ್ನು ನಿರ್ಮಾಣ
ಮಾಡುವೆವು. ಭರತ-ಶತುಘ್ನರೂ ನನ್ನ ಜತೆಗೆ ಬಂದುಬಿಡುವರು. ಓ ಕುಹಕಿ
ಕೈಕೇಯಿಯೇ, ನಿರ್ಜನವಾದ ಅಯೋಧ್ಯೆಯ ಮರ-ಬಳ್ಳಿಗಳನ್ನು ನೀನು ಮಹಾ
ರಾಣಿಯಾಗಿ ಆಳು ತಾಯಿ, ಅಯೋಧ್ಯೆಯ ಪ್ರಣ್ಯನೆಲದ ಮೇಲೆ ನಡೆಯಲಿ
ಈ ಮಹಾಕಾಳಿಯ ಪ್ರಳಯ ನೃತ್ಯ ! "
ಮಹಾರಾಜನೂ ನಿರ್ವಿಣ್ಣನಾಗಿ ನುಡಿದ
 
ರಾಮನೊಬ್ಬ ಕಾಡಿಗೆ ಹೋಗಬೇಕಂದಲ್ಲವೆ ನೀನು ಬಯಸಿದ್ದು ?
ಪಾಪ-ಸೀತೆಗೂ ಲಕ್ಷ್ಮಣನಿಗೂ ಏಕೆ ನಾರುಡೆಯನ್ನು ತೊಡಿಸಿದೆ ಪಾಪಿಷ್ಠೆ ?
 
66
 
ಇಡಿಯ ಅಂತಃಪುರವೇ ಪ್ರಕ್ಷುಬ್ಧವಾಗಿ ಕೈಕೇಯಿಯ ಮೇಲೆ ಹರಿಹಾಯು
ವಂತಿದ್ದುದನ್ನು ನೋಡಿ ಕರುಣಾಳು ರಾಮಚಂದ್ರ ನುಡಿದ.
 
* ಮಹಾರಾಜ, ನನಗಾಗಿ ನೀವಾರೂ ತಾಯಿ ಕೈಕೇಯಿಯನ್ನು ಹೀಗೆ
ನೋಯಿಸಬಾರದು. ಏನಿದ್ದರೂ ಅವಳು ನನ್ನ ತಾಯಿ. ದಯವಿಟ್ಟು ನನಗೋ
ಸ್ಕರ ಅವಳ ಮೇಲೆ ನೀವೆಲ್ಲ ಕೃಪೆತಾಳಬೇಕು.
 
2)
 
ರಾಮನು ಮೆಲ್ಲನೆ ಅಂತಃಪುರದಿಂದ ಹೊರನಡೆದ. ಅದನ್ನು ಕಂಡು
ಮಹಾರಾಜನಿಗೆ ದುಃಖ ತಡೆಯಲಾಗಲಿಲ್ಲ. ಕೈಕೇಯಿಯನ್ನು ಪರಿಪರಿಯಾಗಿ
ತೆಗಳಿದನು. ರಾಮನನ್ನು ನೆನೆದು ಮಕ್ಕಳಂತೆ ಅತ್ತು ಬಿಟ್ಟನು.
ನೂರಾರು ಮಹಿಷಿಯರೂ ಚೀತ್ಕರಿಸಿದರು.
 
ರಾಜನ
 
ಯುವರಾಜನಾಗಬೇಕಿದ್ದ