This page has been fully proofread once and needs a second look.

ಮಿಂಚಿನಬಳ್ಳಿ
 
ರಾಜನಿಗೆ ನಾಚುಗೆಯಿಂದ ತಲೆ ತಗ್ಗಿಸುವಂತಾ- ಯಿತು. ಮಂತ್ರಿಗಳಿಗೂ
ಇದು ಸಹನೆಯಾಗಲಿಲ್ಲ. ಸಿದ್ಧಾರ್ಥನೆಂಬ ಮಂತ್ರಿ ನುಡಿದ.
 
೫೮
 

 
"ಅಸಮಂಜಸ, ಹೆಸರಿಗೆ ತಕ್ಕಂತೆಯೆ ಸಮಂಜಸ- ವಾಗಿ ನಡೆದುಕೊಂಡಿಲ್ಲ.
ನಿರಪರಾಧಿ ಮಕ್ಕಳನ್ನು ನದಿಗೆಸೆದು ಕೊಲ್ಲುತ್ತಿದ್ದ. ಅದರಿಂದ ಸಗರ ಅವನನ್ನು
ರಾಜ್ಯ- ದಿಂದ ಅವನನ್ನು ದೂರಮಾಡಿದ. ರಾಮಭದ್ರನನ್ನು ಯಾವ ತಪ್ಪಿಗಾಗಿ ಕಾಡಿಗಟ್ಟ
ಬೇಕು ಮಹಾರಾಣಿ ? ಅಪ್ಪಣೆಕೊಡಿಸಬೇಕು. ಜಗತ್ತೆಲ್ಲ ಯಾರನ್ನು ತನ್ನ
ಒಡೆಯನೆಂದು ಕೂಗಿ ಕರೆಯುತ್ತಿದೆಯೋ ಅಂಥ ಗುಣಧಾಮನಾದ ಪ್ರಿಯ
 
ಅಂಥ
 
ಪುತ್ರನನ್ನು ಮಹಾರಾಜ ಹೇಗೆ ಕಾಡಿಗಟ್ಟುವುದು ? ಮಾನವೀಯತೆ ಎಂಬು-
ದೊಂದಿದೆಯಲ್ಲ !
 

 
ನೆರೆದವರೆಲ್ಲ ಕೈಕೇಯಿಯನ್ನು ರೆವವರೆ, ಮಹಾರಾಜನೂ ಅವಳನ್ನು
ಶಪಿಸತೊಡಗಿದ. ನಡುವೆ ರಾಮಚಂದ್ರ ಪ್ರವೇಶಿಸಿ ನುಡಿದ
 
:
 
"
ರಾಜನ್, ರಾಜ್ಯವನ್ನು ತೊರೆದ ನನಗೆ ರಾಜ- ವೈಭವದಿಂದೇನು ? ಸಲಗ
ವಿಲ್ಲದವನಿಗೆ ಸಂಕಲೆ- ಯೇಕೆ ? ನನಗೆ ಬೇಕಾದುದು ಕೆಲವು ನಾರುಡೆಗಳು,

ಒಂದು ಗುದ್ದಲಿ-ಒಂದು ಸಣ್ಣ ಬುಟ್ಟಿ -ಒಂದು ಜೋಳಿಗೆ ಇಷ್ಟೆ. ಉಳಿದು
ದೆಲ್ಲವೂ ಮಾತೆ ಕೈಕೇಯಿ- ಗಿರಲಿ.
 
(6
 
"
 
ಮರುಕ್ಷಣದಲ್ಲೇ ನಾಣ್‌ಗೇಡಿ ಕೈಕೇಯಿ ನಾರುಡೆ ಗಳನ್ನು ಬರಿಸಿ "ಇದೋ
ಉಟ್ಟುಕೊಳ್ಳು"
"
ಎಂದು ರಾಮನಿಗೆ ಕೊಟ್ಟಳು. ರಾಮನು ನಗುತ್ತಲೆ ಅವನ್ನು

ತೆಗೆದುಕೊಂಡು, ತನ್ನ ಸೂಕ್ಷ್ಮವಸ್ತ್ರಗಳನ್ನು ತ್ಯಜಿಸಿ ಅವನ್ನುಟ್ಟುಕೊಂಡನು.
ರಾಮನನ್ನು ಕಂಡು ಲಕ್ಷ್ಮಣನೂ ಚೀರಧಾರಿಯಾದ. ಕೈಕೇಯಿ ಸೀತೆಯನ್ನು
ಬಿಟ್ಟಿರಲಿಲ್ಲ. ಅವಳಿಗೂ ನಾರುಡೆಯನ್ನು ತರಿಸಿ ಕೊಟ್ಟಳು. ಪಟ್ಟಿಟೆ-ಪೀತಾಂಬರ
ಗಳನ್ನಷ್ಟೆ ತೊಟ್ಟು ಬಲ್ಲ ಸೊಗಸಿ ಸೀತೆ, ನಾರುಡೆಯನ್ನು ಕಂಡು ಅಚ್ಚರಿಗೊಂಡಳು.
ಈ ಮರಡು ಬಟ್ಟೆಯನ್ನು ಉಡುವುದು ಹೇಗೆಂದೇ ಅವಳಿಗೆ ತೋಚದು. ಕೊಟ್

ನಾರುಡೆಯನ್ನು ಕತ್ತಿನಲ್ಲಿ ಇಳಿಬಿಟ್ಟು ರಾಮನನ್ನು ನೋಡಿ ನುಡಿದಳು:
 
3
 

 
" ಈ ಕಂಬಳಿಯನ್ನು ಹೇಗೆ ಉಟ್ಟುಕೊಳ್ಳುವುದು ನಾಥ ? ಕಾಡಿನ
ಹೆಂಗಳೆಯರಾದರೂ ಇದನ್ನು ಹೇಗೆ ಉಡುವರೋ ! "
 

 
ಈ ಮಾತನ್ನಾಡುವಾಗ ಅವಳ ಕೆನ್ನೆ ನಾಚಿಕೆ- ಯಿಂದ ನಸುಗೆಂಪಾಗಿತ್ತು.
ರಾಮನು ತಾನೇ ಬಂದು ಅವಳಿಗೆ ನಾರುಡೆಯನ್ನುಡಿಸಿದನು. ಜಗನ್ಮಾತೆಯಾದ