2023-03-15 15:35:31 by ambuda-bot
This page has not been fully proofread.
ಮಿಂಚಿನಬಳ್ಳಿ
ರಾಜನಿಗೆ ನಾಚುಗೆಯಿಂದ ತಲೆ ತಗ್ಗಿಸುವಂತಾಯಿತು. ಮಂತ್ರಿಗಳಿಗೂ
ಇದು ಸಹನೆಯಾಗಲಿಲ್ಲ. ಸಿದ್ಧಾರ್ಥನೆಂಬ ಮಂತ್ರಿ ನುಡಿದ.
೫೮
"ಅಸಮಂಜಸ, ಹೆಸರಿಗೆ ತಕ್ಕಂತೆಯೆ ಸಮಂಜಸವಾಗಿ ನಡೆದುಕೊಂಡಿಲ್ಲ.
ನಿರಪರಾಧಿ ಮಕ್ಕಳನ್ನು ನದಿಗೆಸೆದು ಕೊಲ್ಲುತ್ತಿದ್ದ. ಅದರಿಂದ ಸಗರ ಅವನನ್ನು
ರಾಜ್ಯದಿಂದ ದೂರಮಾಡಿದ. ರಾಮಭದ್ರನನ್ನು ಯಾವ ತಪ್ಪಿಗಾಗಿ ಕಾಡಿಗಟ್ಟ
ಬೇಕು ಮಹಾರಾಣಿ ? ಅಪ್ಪಣೆಕೊಡಿಸಬೇಕು. ಜಗತ್ತೆಲ್ಲ ಯಾರನ್ನು ತನ್ನ
ಒಡೆಯನೆಂದು ಕೂಗಿ ಕರೆಯುತ್ತಿದೆಯೋ ಗುಣಧಾಮನಾದ ಪ್ರಿಯ
ಅಂಥ
ಪುತ್ರನನ್ನು ಮಹಾರಾಜ ಹೇಗೆ ಕಾಡಿಗಟ್ಟುವುದು ? ಮಾನವೀಯತೆ ಎಂಬು-
ದೊಂದಿದೆಯಲ್ಲ !
ನೆರೆದವರೆಲ್ಲ ಕೈಕೇಯಿಯನ್ನು ಬರೆವವರೆ, ಮಹಾರಾಜನೂ ಅವಳನ್ನು
ಶಪಿಸತೊಡಗಿದ. ನಡುವೆ ರಾಮಚಂದ್ರ ಪ್ರವೇಶಿಸಿ ನುಡಿದ
ರಾಜನ್, ರಾಜ್ಯವನ್ನು ತೊರೆದ ನನಗೆ ರಾಜವೈಭವದಿಂದೇನು ? ಸಲಗ
ವಿಲ್ಲದವನಿಗೆ ಸಂಕಲೆಯೇಕೆ ? ನನಗೆ ಬೇಕಾದುದು ಕೆಲವು ನಾರುಡೆಗಳು,
ಒಂದು ಗುದ್ದಲಿ-ಒಂದು ಸಣ್ಣ ಬುಟ್ಟಿ ಒಂದು ಜೋಳಿಗೆ ಇಷ್ಟೆ. ಉಳಿದು
ದೆಲ್ಲವೂ ಮಾತೆ ಕೈಕೇಯಿಗಿರಲಿ.
(6
ಮರುಕ್ಷಣದಲ್ಲೇ ನಾಣ್‌ಗೇಡಿ ಕೈಕೇಯಿ ನಾರುಡೆಗಳನ್ನು ಬರಿಸಿ ಇದೋ
ಉಟ್ಟುಕೊಳ್ಳು"
" ಎಂದು ರಾಮನಿಗೆ ಕೊಟ್ಟಳು. ರಾಮನು ನಗುತ್ತಲೆ ಅವನ್ನು
ತೆಗೆದುಕೊಂಡು, ತನ್ನ ಸೂಕ್ಷ್ಮವಸ್ತ್ರಗಳನ್ನು ತ್ಯಜಿಸಿ ಅವನ್ನುಟ್ಟುಕೊಂಡನು.
ರಾಮನನ್ನು ಕಂಡು ಲಕ್ಷ್ಮಣನೂ ಚೀರಧಾರಿಯಾದ. ಕೈಕೇಯಿ ಸೀತೆಯನ್ನು
ಬಿಟ್ಟಿರಲಿಲ್ಲ. ಅವಳಿಗೂ ನಾರುಡೆಯನ್ನು ತರಿಸಿಕೊಟ್ಟಳು. ಪಟ್ಟಿ-ಪೀತಾಂಬರ
ಗಳನ್ನಷ್ಟೆ ತೊಟ್ಟು ಬಲ್ಲ ಸೊಗಸಿ ಸೀತೆ, ನಾರುಡೆಯನ್ನು ಕಂಡು ಅಚ್ಚರಿಗೊಂಡಳು.
ಈ ಮರಡು ಬಟ್ಟೆಯನ್ನು ಉಡುವುದು ಹೇಗೆಂದೇ ಅವಳಿಗೆ ತೋಚದು. ಕೊಟ
ನಾರುಡೆಯನ್ನು ಕತ್ತಿನಲ್ಲಿ ಇಳಿಬಿಟ್ಟು ರಾಮನನ್ನು ನೋಡಿ ನುಡಿದಳು:
3
" ಈ ಕಂಬಳಿಯನ್ನು ಹೇಗೆ ಉಟ್ಟುಕೊಳ್ಳುವುದು ನಾಥ ? ಕಾಡಿನ
ಹೆಂಗಳೆಯರಾದರೂ ಇದನ್ನು ಹೇಗೆ ಉಡುವರೋ ! "
ಈ ಮಾತನ್ನಾಡುವಾಗ ಅವಳ ಕೆನ್ನೆ ನಾಚಿಕೆಯಿಂದ ನಸುಗೆಂಪಾಗಿತ್ತು.
ರಾಮನು ತಾನೇ ಬಂದು ಅವಳಿಗೆ ನಾರುಡೆಯನ್ನುಡಿಸಿದನು. ಜಗನ್ಮಾತೆಯಾದ