This page has been fully proofread once and needs a second look.

ಸಂಗ್ರಹರಾಮಾಯಣ
 
ಕುಳ್ಳಿರಿಸಿಕೊಂಡು ಏನೋ ಹೇಳತೊಡಗಿದನು. ಅಷ್ಟರಲ್ಲಿಲೆ ದುಃಖ ಉಮ್ಮಳಿಸಿ
ಮೂರ್ಛಿತನಾಗಿ ಬಿದ್ದು ಬಿಟ್ಟ. ಇದನ್ನು ಕಂಡು ಕನ್ನೆವಾಡದ ಹೆಂಗಳೆ- ಯರೆಲ್ಲ
ಚೀರಿದರು. ಮೆಲ್ಲನೆ ಮೂರ್ಛೆ ತಿಳಿದೆದ್ದ ರಾಜನ ಬಳಿ, ರಾಮಚಂದ್ರ ವಿನಯ
ದಿಂದ ವಿಜ್ಞಾಪಿಸಿಕೊಂಡ.
 

 
(6
 

 
" ತಾತ, ನನಗೆ ಕಾಡಿಗೆ ತೆರಳಲು ಅಪ್ಪಣೆಕೊಡು. ಈ ಸೀತೆ- ಈ
ಲಕ್ಷಣ ನಾನು ಬೇಡವೆಂದರೂ ಬರುತ್ತೇವೆ ಎಂದು ಪಟ್ಟು ಹಿಡಿಯುತ್ತಿದ್ದಾರೆ.

ಅವರಿಗೂ ಒಪ್ಪಿಗೆ ಕೊಡು. "
 

 
" ಕುಮಾರ, ವಂಚಕಿಯಾದ ಕೈಕೇಯಿ ನನ್ನಿಂದ ವರವನ್ನು ಕಸಿದು
ಕೊಂಡಳು. ಅದರಲ್ಲಿ ನಾನೂ ತಪ್ಪುಗಾರ, ದರಿಂದ ನನಗೆ ತಕ್ಕ ಶಾಸ್ತಿ
ಯನ್ನು ಮಾಡಿ ನೀನು ರಾಜ್ಯವನ್ನು ಪಾಲಿಸಬೇಕು. ಇದು ಧರ್ಮ, ನೀನು
ಸರ್ವಥಾ ಕಾಡಿಗೆ ಹೋಗುವುದೇ ದಿಟವಾದರೆ ನನ್ನನ್ನೂ ಕರೆದುಕೊಂಡು
ಹೋಗು.
ಓ ನನ್ನ ಮಾಣಿಕ್ಯವೆ, ನಿನ್ನನ್ನು ತೊರೆದು ನಾನು ಬದುಕಲಾರೆ. "
 
(6
 
*

 
"
ಹಾಗೆನ್ನಬೇಡ ಅಪ್ಪ, ನಾನು ಶಾಸ್ತಿ ಮಾಡಬೇಕೆ ? ಇದೋ- ನೀನೇ
ರಾಜನಾಗಿರಬೇಕು. ಕುಮಾರ ಭರತನು ಯುವರಾಜನಾಗಬೇಕು.- ಇದು ನನ್ನ

ಬಯಕೆ, ಸ್ವರ್ಗ-ನರಕಗಳಲ್ಲಾಗಲಿ, ನಾಡು-ಕಾಡು- ಗಳಲ್ಲಾಗಲಿ ಎಲ್ಲಾದರೂ
ನನಗೆ ಸುಖವೇ ಹೊರತು ದುಃಖವೆಂಬುದಿಲ್ಲ. ಅದಕ್ಕಾಗಿ ನೀನು ಚಿಂತಿಸ
 
ಬೇಡ"
 
ರಾಮನ ನಿರ್ಧಾರವನ್ನರಿತ ಮಹಾರಾಜ ಮಂತ್ರಿಯನ್ನಾಜ್ಞಾಪಿಸಿದನು.
" ನಮ್ಮ ರಾಜ್ಯದ ಸೇನೆ-ಸಂಪತ್ತು, ಸಕಲ ವೈಭವವೂ ರಾಮನ ಜತೆಗೆ
ಕಾಡಿಗೆ ಹೋಗಲಿ. ನನ್ನ ಮಗ ಕಾಡಿನಲ್ಲಾದರೂ ಸುಖವಾಗಿರಲಿ, ಹಾಳು
ಬಿದ್ದ ಅಯೋಧ್ಯೆಯನ್ನು ಕೈಕೇಯಿಯ ಮಗ ಆಳಲಿ, ವಯಸ್ಸಿನಲ್ಲೂ ಗುಣ
- ದಲ್ಲೂ ಹಿರಿಯನಾದ ರಾಮಚಂದ್ರ ಕೈಕೇಯಿಯ ಕೈತವದಿಂದ ದುಃಖಪಡು
 
ವಂತಾಗಬಾರದು.
 
"
 
ಇದನ್ನು ಕೇಳಿ ಕೈಕೇಯಿಗೆ ಮುನಿಸು ತಡೆಯ- ಲಾಗಲಿಲ್ಲ. ಅವಳು ಸೆಟೆದು
ನುಡಿದಳು.
 

 
"
ಈ ಹಿಂದೆ ಸಗರನು ತನ್ನ ಹಿರಿಯ ಮಗ ಅಸಮಂಜಸನನ್ನು ಕಾಡಿಗೆ
ಅಟ್ಟಿಲ್ಲವೆ ? ಹಾಗೆಯೇ ಇವನನ್ನೂ ತೊರೆದರೆ ತಪ್ಪೇನು ? "
 
4