2023-03-15 15:35:30 by ambuda-bot
This page has not been fully proofread.
ಸಂಗ್ರಹರಾಮಾಯಣ
ಕುಳ್ಳಿರಿಸಿಕೊಂಡು ಏನೋ ಹೇಳತೊಡಗಿದನು. ಅಷ್ಟರಲ್ಲಿ ದುಃಖ ಉಮ್ಮಳಿಸಿ
ಮೂರ್ಛಿತನಾಗಿ ಬಿದ್ದು ಬಿಟ್ಟ. ಇದನ್ನು ಕಂಡು ಕನ್ನೆವಾಡದ ಹೆಂಗಳೆಯರೆಲ್ಲ
ಚೀರಿದರು. ಮೆಲ್ಲನೆ ಮೂರ್ಛ ತಿಳಿದೆದ್ದ ರಾಜನ ಬಳಿ, ರಾಮಚಂದ್ರ ವಿನಯ
ದಿಂದ ವಿಜ್ಞಾಪಿಸಿಕೊಂಡ.
ನ
(6
" ತಾತ, ನನಗೆ ಕಾಡಿಗೆ ತೆರಳಲು ಅಪ್ಪಣೆಕೊಡು. ಈ ಸೀತೆ- ಈ
ಲಕ್ಷಣ ನಾನು ಬೇಡವೆಂದರೂ ಬರುತ್ತೇವೆ ಎಂದು ಪಟ್ಟು ಹಿಡಿಯುತ್ತಿದ್ದಾರೆ.
ಅವರಿಗೂ ಒಪ್ಪಿಗೆ ಕೊಡು. "
" ಕುಮಾರ, ವಂಚಕಿಯಾದ ಕೈಕೇಯಿ ನನ್ನಿಂದ ವರವನ್ನು ಕಸಿದು
ಕೊಂಡಳು. ಅದರಲ್ಲಿ ನಾನೂ ತಪ್ಪುಗಾರ, ಅದರಿಂದ ನನಗೆ ತಕ್ಕ ಶಾಸ್ತಿ
ಯನ್ನು ಮಾಡಿ ನೀನು ರಾಜ್ಯವನ್ನು ಪಾಲಿಸಬೇಕು. ಇದು ಧರ್ಮ, ನೀನು
ಸರ್ವಥಾ ಕಾಡಿಗೆ ಹೋಗುವುದೇ ದಿಟವಾದರೆ ನನ್ನನ್ನೂ ಕರೆದುಕೊಂಡು
ಹೋಗು. ಓ ನನ್ನ ಮಾಣಿಕ್ಯವೆ, ನಿನ್ನನ್ನು ತೊರೆದು ನಾನು ಬದುಕಲಾರೆ. "
(6
* ಹಾಗೆನ್ನಬೇಡ ಅಪ್ಪ, ನಾನು ಶಾಸ್ತಿ ಮಾಡಬೇಕೆ ? ಇದೋ- ನೀನೇ
ರಾಜನಾಗಿರಬೇಕು. ಕುಮಾರ ಭರತನ ಯುವರಾಜನಾಗಬೇಕು. ಇದು ನನ್ನ
ಬಯಕೆ, ಸ್ವರ್ಗ-ನರಕಗಳಲ್ಲಾಗಲಿ, ನಾಡು-ಕಾಡುಗಳಲ್ಲಾಗಲಿ ಎಲ್ಲಾದರೂ
ನನಗೆ ಸುಖವೇ ಹೊರತು ದುಃಖವೆಂಬುದಿಲ್ಲ. ಅದಕ್ಕಾಗಿ ನೀನು ಚಿಂತಿಸ
ರಾಮನ ನಿರ್ಧಾರವನ್ನರಿತ ಮಹಾರಾಜ ಮಂತ್ರಿಯನ್ನಾಜ್ಞಾಪಿಸಿದನು.
" ನಮ್ಮ ರಾಜ್ಯದ ಸೇನೆ-ಸಂಪತ್ತು, ಸಕಲ ವೈಭವವೂ ರಾಮನ ಜತೆಗೆ
ಕಾಡಿಗೆ ಹೋಗಲಿ. ನನ್ನ ಮಗ ಕಾಡಿನಲ್ಲಾದರೂ ಸುಖವಾಗಿರಲಿ, ಹಾಳು
ಬಿದ್ದ ಅಯೋಧ್ಯೆಯನ್ನು ಕೈಕೇಯಿಯ ಮಗ ಆಳಲಿ, ವಯಸ್ಸಿನಲ್ಲೂ ಗುಣ
ದಲ್ಲೂ ಹಿರಿಯನಾದ ರಾಮಚಂದ್ರ ಕೈಕೇಯಿಯ ಕೈತವದಿಂದ ದುಃಖಪಡು
ವಂತಾಗಬಾರದು.
ಇದನ್ನು ಕೇಳಿ ಕೈಕೇಯಿಗೆ ಮುನಿಸು ತಡೆಯಲಾಗಲಿಲ್ಲ. ಅವಳು ಸೆಟೆದು
ನುಡಿದಳು.
ಈ ಹಿಂದೆ ಸಗರನು ತನ್ನ ಹಿರಿಯ ಮಗ ಅಸಮಂಜಸನನ್ನು ಕಾಡಿಗೆ
ಅಟ್ಟಿಲ್ಲವೆ ? ಹಾಗೆಯೇ ಇವನನ್ನೂ ತೊರೆದರೆ ತಪ್ಪೇನು ? "
4