This page has not been fully proofread.

ಮಿಂಚಿನಬಳ್ಳಿ
 
" ಓ ಅಲ್ಲಿ ಸರಯುವಿನ ತಡಿಯಲ್ಲಿ ಹಸುವಿನ ಮಂದೆಯಿದೆಯಲ್ಲ.
ಪೂಜ್ಯರೆ, ಇಲ್ಲಿಂದ ನಿಮ್ಮ ಕೋಲನ್ನು ಬೀಸಿ ಅಲ್ಲಿಗೆ ಎಸೆದಿರಾದರೆ ಅವುಗಳನ್ನು
ನಿಮಗೇ ಕೊಡಬಲ್ಲೆ."
 
೫೬
 
ಆ ಬ್ರಾಹ್ಮಣ ಚಿಂದಿ ಬಟ್ಟೆಗಳನ್ನೇ ಹೇಗೋ ಸೊಂಟಕ್ಕೆ ಬಿಗಿದುಕೊಂಡು
ಎಲ್ಲಿಲ್ಲದ ಹುಮ್ಮಸದಿಂದ ಯಾವಚ್ಛಕ್ತಿ ಕೋಲನ್ನು ಬಲವಾಗಿ ಬೀಸಿ ಎಸೆದನು.
ಅದು ಸರಯುವನ್ನು ದಾಟಿ ಒಂದು ಸಾವಿರ ಗೋವುಗಳಾಚೆ ಹೋಗಿ ಬಿತ್ತು.
ಸಂತಸಗೊಂಡ ರಾಮಚಂದ್ರ ಆ ಒಂದು ಸಾವಿರ ಹಸುಗಳನ್ನೂ ಜತೆಗೆ ಹೇರಳ
ವಾದ ಹಣವನ್ನೂ ಆ ವಿಪನಿಗಿತ್ತು ಅಭಿನಂದಿಸಿದನು.
 
ಅನಂತರ ತಂದೆಯನ್ನು ಕಾಣುವದಕ್ಕೆಂದು ಅಂತಃಪುರದಿಂದ ಇಳಿದು
ಬಂದನು. ಸೀತೆಯೂ ಲಕ್ಷಣನೂ ಅವನನ್ನು ಅನುಸರಿಸಿದರು. ಒಂದು
ಕಾಲವಿತ್ತು ಆಗ ಸೂರ್ಯ ಚಂದ್ರರೂ ಕೂಡ ಸೀತೆಯ ಮೋರೆಯನ್ನು ಸರಿ
ಯಾಗಿ ಕಂಡಿರಲಿಲ್ಲ. ಅದೇ ಸೀತೆ ಇಂದು ಬೀದಿಯಲ್ಲಿ ಬರಿಗಾಲಿನಿಂದ ನಡೆದು
ಬರುತ್ತಿರುವುದನ್ನು ಬೀದಿಹೋಕರು ಕೂಡ ಕಂಡರು !
 
"ರಾಮನು ಕಾಡಿಗೆ ಹೋಗುವವನಾದರೆ ನಾವೂ ಅವನ ಜತೆಗೆ ಬರು
ವೆವು. ಅವನನ್ನುಳಿದು ನಮ್ಮದೆಂಥ ಬಾಳು" ಎಂದು ಜನರು ಗೋಳಿಡುತ್ತಿರುವು
ದಾಲಿಸುತ್ತ ರಾಮನು ತಂದೆಯ ಮಂದಿರವನ್ನು ಪ್ರವೇಶಿಸಿದನು. ರಾಮನ
ಆಗಮನವನ್ನು ಸುಮಂತ್ರನಿಂದ ತಿಳಿದ ದಶರಥನ ಮುನ್ನೂರೈವತ್ತು ಮಂದಿ
ಮಡದಿಯರೂ ಅವನೆಡೆ ಧಾವಿಸಿದರು.
 
ದುಃಖಪೂರದಲ್ಲಿ ಮುಳುಗಿದ್ದ ಜನಕ್ಕೆ ಒಮ್ಮೆಲೆ ರಾಮಭದ್ರನ ಮುಖ
ಚಂದ್ರನ ದರ್ಶನದಿಂದ ಮನಸ್ಸು ನೆಮ್ಮದಿಯ ನೆಲೆಯನ್ನು ಕಂಡಂತಾಯಿತು.
 
ನಾರುಡೆಯನ್ನುಟ್ಟು ಹೊರಟರು
 
ತನ್ನ ಬಳಿಗೆ ಬರುತ್ತಿರುವ ರಾಮಚಂದ್ರನನ್ನು ಕಂಡ ಮಹಾರಾಜ
ಸಿಂಹಾಸನದಿಂದ ಧಿಗ್ಗನೆದ್ದು 'ಬಾ ಮಗನೆ' ಎಂದು ಗದ್ಗದಿತನಾಗಿ ನುಡಿದು
ಮುಂದೆ ಹೋಗಲಾರದೆ ಭೂಮಿಗೆ ಕುಸಿದು ಬಿದ್ದನು. ಅಷ್ಟರಲ್ಲಿ ರಾಮಚಂದ್ರ
ಧಾವಿಸಿ ಬಂದು ತಂದೆಯನ್ನವಲಂಬಿಸಿಕೊಂಡ. ಎಚ್ಚತ್ತ ದಶರಥ ಮಗನನ್ನು
ಬಿಗಿದಪ್ಪಿಕೊಂಡನು.
ರಾಮ-ಲಕ್ಷ್ಮಣರನ್ನೂ ಸೀತೆಯನ್ನೂ ಮಡಿಲಲ್ಲಿ