2023-03-15 15:35:29 by ambuda-bot
This page has not been fully proofread.
ಸಂಗ್ರಹರಾಮಾಯಣ
ರಾಮನು ಮಾತನ್ನು ಮುಗಿಸುವ ಮೊದಲೇ ಲಕ್ಷ್ಮಣನು ಅವನ ಕಾಲಿಗೆ
ಅಡ್ಡ ಬಿದ್ದು ಕಂಬನಿಯಿಂದ ಅವನ ಕಾಲನ್ನು ತೊಳೆದು-ವಿಜ್ಞಾಪಿಸಿಕೊಂಡನು:
"ಭರತನು ಬದುಕಿರುವ ವರೆಗೆ ನಮ್ಮ ತಾಯಂದಿರಿಗೆ ಯಾವ ತೊಡಕೂ
ಬರಲಾರದು. ಭರತನಿಗೆ ನಿನ್ನ ಮೇಲೆ ಎಂಥ ಗೌರವವಿದೆ ಎಂಬುದು ನನಗೆ
ಗೊತ್ತು. ಅವನಿರುವಾಗ ಇಲ್ಲಿ ನನ್ನ ಆವಶ್ಯಕತೆಯಿಲ್ಲ. ನೀನು ಮತ್ತು
ಅತ್ತಿಗೆ ಕಾಡಿನಲ್ಲಿ ವಿಹರಿಸುವಾಗ ನಿಮ್ಮನ್ನು ಸೇವಿಸುವ ಭಾಗ್ಯ ದೊರಕಿದರೆ
ಅದೇ ದೊಡ್ಡದು. ನನ್ನನ್ನು ತೊರೆದು ಹೋಗಬೇಡ ಅಣ್ಣ."
"ಆಗಲಿ ಕುಮಾರ, ಹಾಗೆಯೇ ಆಗಲಿ. ನೀನು ಹೊರಡುವ ಸುದ್ದಿ
ಯನ್ನು ಬಂಧುಗಳಿಗೆ ಅರುಹಿ ಬಾ, ಮರಳಿ ಬರುವಾಗ ಆಚಾರ್ಯಮಂದಿರ
ದಲ್ಲಿರುವ ವರುಣದತ್ತಗಳಾದ ಬಿಲ್ಲುಗಳನ್ನೂ ಕವಚವನ್ನೂ ಅಕ್ಷಯ ಬಾಣ
ಗಳುಳ್ಳ ಬತ್ತಳಿಕೆಗಳನ್ನೂ ಖಡ್ಗಗಳನ್ನೂ ಹಿಡಿದುಕೊಂಡು ಬಾ."
೫
ಲಕ್ಷ್ಮಣನಿಗೆ ಅಣ್ಣನ ಒಪ್ಪಿಗೆ ದೊರೆತುದು ನಿಧಿ ದೊರೆತಂತಾಯಿತು.
ಆನಂದದಿಂದ ಕ್ಷಣಮಾತ್ರದಲ್ಲಿ ಈ ಕಾರ್ಯಗಳನ್ನು ಪೂರೈಸಿದನು. ರಾಮನು
ತನ್ನ ಮೈಯ ದಿವ್ಯಾಭರಣಗಳನ್ನು ಕಳಚಿ ವಸಿಷ್ಠ ಪುತ್ರನಾದ ಸುಯಜ್ಞನಿಗೆ
ಅರ್ಪಿಸಿದನು. ಅಂತೆಯೇ ಜನಕರಾಜನು ತನಗೆ ಬಳುವಳಿಯಾಗಿ ಕೊಟ್ಟಿದ್ದ
ಶತ್ರುಂಜಯವೆಂಬ ಆನೆಯನ್ನೂ ಅವನಿಗಿತ್ತನು. ಸೀತೆಯೂ ತನ್ನ ಒಡವೆ
ಗಳನ್ನು ಸುಯಜ್ಞನ ಮಡದಿಗೊಪ್ಪಿಸಿದಳು. ರಾಮನು ಬಹಳ ಸಂತಸದಿಂದ
ಯಾರು ಏನನ್ನು ಕೇಳಿದರೆ ಅದನ್ನು ಹಂಚಿಬಿಡುತ್ತಿದ್ದ. ಬ್ರಾಹ್ಮಣರಿಗೆ-ಪುರ
ಜನರಿಗೆ ಅಂತಃಪುರದ ಆಳುಗಳಿಗೆ ದಾಸದಾಸಿಯರಿಗೆ ಪ್ರತಿಯೊಬ್ಬರಿಗೂ
ಪ್ರತ್ಯೇಕವಾಗಿ ಬಹುಮಾನವನ್ನಿತ್ತು ಸತ್ಕರಿಸಿದನು. ತೆಗೆದುಕೊಳ್ಳುವವನ
ಕಣ್ಣೀರು ಕೊಡುವವನ ಮಂದಹಾಸದಲ್ಲಿ ಲೀನವಾಗುತ್ತಿತ್ತು.
ಅಷ್ಟರಲ್ಲಿ ತ್ರಿಜಟನೆಂಬ ಮುದಿ ಹಾರುವನೊಬ್ಬ ಕೋಲನ್ನೂರಿಕೊಂಡು
ಬಂದು ನುಡಿದ:
"ರಾಮಭದ್ರ, ನೋಡು, ನಾನು ಮುದುಕ, ಮನೆಯಲ್ಲಿ ಹರೆಯದ
ಮಡದಿ: ಮನೆತುಂಬ ಮಕ್ಕಳು. ಬಡತನದ ಬಾಳು. ನನಗೂ ಏನನ್ನಾದರೂ
ಕೊಡು."
ಮುಗುಳುನಕ್ಕು ಹಾಸ್ಯಕ್ಕಾಗಿ ರಾಮಚಂದ್ರ ನುಡಿದ: