This page has been fully proofread once and needs a second look.

ಮಿಂಚಿನಬಳ್ಳಿ
 
ರಾಮನ ದೃಢನಿಶ್ಚಯವನ್ನರಿತ ಮಹಾರಾಣಿ ಅವನನ್ನು ಕಾಡಿಗೆ ಹೋಗ
ದಂತೆ ತಡೆವುದು ಅಶಕ್ಯ- ವೆಂದು ತಿಳಿದು ಹೇಗೋ ದುಃಖವನ್ನು ಸಾವರಿಸಿ- ಕೊಂಡು
ರಾಮನಿಗೆ ಸ್ವಸ್ತ್ಯಯನವನ್ನು ಆಚರಿಸಿ ಹರಸಿದಳು.
 
*

 
"
ಸರ್ವಭೂತಗಳೂ ನಿನಗೆ ಮಂಗಳವನ್ನುಂಟು ಮಾಡಲಿ. ಸರ್ವಭೂತ
ಸಾಕ್ಷಿಯಾದ ನಾರಾಯಣ ನಿನ್ನನ್ನು ರಕ್ಷಿಸಲಿ. ಭಗವತ್ಪ್ರಸಾದದಿಂದ ವಿಕ್ರಮ

ಶಾಲಿಯಾಗಿ ಕಾಡಿನಿಂದ ಮರಳಿದ ನಿನ್ನನ್ನು ನೋಡುವ ಭಾಗ್ಯ ನನ್ನದಾಗಲಿ.
ಹೋಗಿ ಬಾ ಕಂದ. "
 

 
ಪ್ರಯಾಣದ ಮುನ್ನ ಸರ್ವಸ್ವದಾನ
 

 
ತಾಯಿಯ ಚರಣರಜಸ್ಸನ್ನು ಹಣೆಗೊತ್ತಿಕೊಂಡು ಅಲ್ಲಿಂದ ಮರಳಿದ
ರಾಮಚಂದ್ರ ತನ್ನ ಅಂತಃ- ಪುರಕ್ಕೆ ಬಂದು ಸೀತೆಯ ಬಳಿ ಕೇಳಿದನು.
" ಜಾನಕಿ, ನಿನ್ನ ನಿರ್ಣಯವೇನು ? "
 
66
 

 
" ನಿನ್ನೊಡನೆ ಕಾಡಿಗೆ ಬರುವುದೆಂದೇ ನಿಶ್ಚಯಿಸಿ- ದ್ದೇನೆ."
 
27
 
*

 
"
ಹೆಣ್ಣು ಹೆಂಗಸಿಗೆ ಅದು ಕಷ್ಟ. ಅತ್ತೆಯಂದಿರ ಜತೆ ನೀನು ಇಲ್ಲಿ
ಲೆಇರಬಹುದಲ್ಲ. " ರಾಮನ ಯಾವ ಸಮಾಧಾನವೂ ಉಪಯೋಗಕ್ಕೆ ಬೀಳ
ಲಿಲ್ಲ. ಕೊನೆಗೂ ಸೀತೆ ಪಟ್ಟು ಹಿಡಿದು ಗಂಡನನ್ನು ಒಪ್ಪಿಸಿಯೇ ಬಿಟ್ಟಳು.
ನಿತ್ಯಾವಿಯೋಗಿನಿಯಾದ ಸೀತೆ ರಾಮನ ಜತೆ ಕಾಡಿಗೆ ತೆರಳುವುದೆಂದು ನಿರ್ಣ

ಯವಾಯಿತು. ಇದೂ ಒಂದು ವಿಡಂಬನೆ !
 

 
ಅಂತಃಪುರವೆಲ್ಲ ಈ ಸುದ್ದಿಯನ್ನು ಕೇಳಿ ಗೋಳಿಟ್ಟಿತು. ಲಕ್ಷ್ಮಣನೂ
ಒದ್ದೆ ಕಣ್ಣಿನಿಂದ ತಲೆಬಗ್ಗಿಸಿ ದಿಗ್ಭ್ರಾಂತನಾಗಿ ನಿಂತಿದ್ದ. ರಾಮಚಂದ್ರ

ಮತ್ತೊಮ್ಮೆ ಅವನನ್ನು ಸಾಂತ್ವನೆಗೊಳಿಸಿದ.
 
*

 
"
ಲಕ್ಷಣ, ಕೈಕೇಯಿಯ ಮೋಹಕ್ಕೆ ಬಲಿಬಿದ್ದ ತಂದೆ ನಮ್ಮ ತಾಯಂದಿ
ರನ್ನು ಕಡೆಗಣಿಸಬಹುದು.

ಭರತನನ್ನೂ ಸಂತ್ತಿನ ಮದ, ಯಾವೆಡೆಗೆ
ಕೊಂಡೊಯ್ಯುವುದೋ ಹೇಳಬರುವದಿಲ್ಲ. ಅದರಿಂದ ನೀನು ಇಲ್ಲೇ ಇರುವುದು
ಉತ್ತಮ. ನಾನು ನಿನ್ನನ್ನು ಕಾಡಿಗೆ ಕರೆದೊಯ್ದು ಕಷ್ಟಪಡಿಸ ಬಯಸುವ
ದಿಲ್ಲ. "