2023-03-15 15:35:29 by ambuda-bot
This page has not been fully proofread.
ಮಿಂಚಿನಬಳ್ಳಿ
ರಾಮನ ದೃಢನಿಶ್ಚಯವನ್ನರಿತ ಮಹಾರಾಣಿ ಅವನನ್ನು ಕಾಡಿಗೆ ಹೋಗ
ದಂತೆ ತಡೆವುದು ಅಶಕ್ಯವೆಂದು ತಿಳಿದು ಹೇಗೋ ದುಃಖವನ್ನು ಸಾವರಿಸಿಕೊಂಡು
ರಾಮನಿಗೆ ಸ್ವಸ್ಮಯನವನ್ನು ಆಚರಿಸಿ ಹರಸಿದಳು.
* ಸರ್ವಭೂತಗಳೂ ನಿನಗೆ ಮಂಗಳವನ್ನುಂಟುಮಾಡಲಿ. ಸರ್ವಭೂತ
ಸಾಕ್ಷಿಯಾದ ನಾರಾಯಣ ನಿನ್ನನ್ನು ರಕ್ಷಿಸಲಿ. ಭಗವತ್ರಸಾದದಿಂದ ವಿಕ್ರಮ
ಶಾಲಿಯಾಗಿ ಕಾಡಿನಿಂದ ಮರಳಿದ ನಿನ್ನನ್ನು ನೋಡುವ ಭಾಗ್ಯ ನನ್ನದಾಗಲಿ.
ಹೋಗಿ ಬಾ ಕಂದ. "
ಪ್ರಯಾಣದ ಮುನ್ನ ಸರ್ವಸ್ವದಾನ
ತಾಯಿಯ ಚರಣರಜಸ್ಸನ್ನು ಹಣೆಗೊತ್ತಿಕೊಂಡು ಅಲ್ಲಿಂದ ಮರಳಿದ
ರಾಮಚಂದ್ರ ತನ್ನ ಅಂತಃಪುರಕ್ಕೆ ಬಂದು ಸೀತೆಯ ಬಳಿ ಕೇಳಿದನು.
" ಜಾನಕಿ, ನಿನ್ನ ನಿರ್ಣಯವೇನು ? "
66
" ನಿನ್ನೊಡನೆ ಕಾಡಿಗೆ ಬರುವುದೆಂದೇ ನಿಶ್ಚಯಿಸಿದ್ದೇನೆ."
27
* ಹೆಣ್ಣು ಹೆಂಗಸಿಗೆ ಅದು ಕಷ್ಟ. ಅತ್ತೆಯಂದಿರ ಜತೆ ನೀನು ಇಲ್ಲಿ
ಇರಬಹುದಲ್ಲ. ರಾಮನ ಯಾವ ಸಮಾಧಾನವೂ ಉಪಯೋಗಕ್ಕೆ ಬೀಳ
ಲಿಲ್ಲ. ಕೊನೆಗೂ ಸೀತೆ ಪಟ್ಟು ಹಿಡಿದು ಗಂಡನನ್ನು ಒಪ್ಪಿಸಿಯೇ ಬಿಟ್ಟಳು.
ನಿತ್ಯಾವಿಯೋಗಿನಿಯಾದ ಸೀತೆ ರಾಮನ ಜತೆ ಕಾಡಿಗೆ ತೆರಳುವುದೆಂದು ನಿರ್ಣ
ಯವಾಯಿತು. ಇದೂ ಒಂದು ವಿಡಂಬನೆ !
ಅಂತಃಪುರವೆಲ್ಲ ಈ ಸುದ್ದಿಯನ್ನು ಕೇಳಿ ಗೋಳಿಟ್ಟಿತು. ಲಕ್ಷ್ಮಣನೂ
ಒದ್ದೆ ಕಣ್ಣಿನಿಂದ ತಲೆಬಗ್ಗಿಸಿ ದಿಗ್ಭ್ರಾಂತನಾಗಿ ನಿಂತಿದ್ದ. ರಾಮಚಂದ್ರ
ಮತ್ತೊಮ್ಮೆ ಅವನನ್ನು ಸಾಂತ್ವನೆಗೊಳಿಸಿದ.
* ಲಕ್ಷಣ, ಕೈಕೇಯಿಯ ಮೋಹಕ್ಕೆ ಬಲಿಬಿದ್ದ ತಂದೆ ನಮ್ಮ ತಾಯಂದಿ
ರನ್ನು ಕಡೆಗಣಿಸಬಹುದು.
ಭರತನನ್ನೂ ಸಂಸತ್ತಿನ ಮದ, ಯಾವೆಡೆಗೆ
ಕೊಂಡೊಯ್ಯುವುದೋ ಹೇಳಬರುವದಿಲ್ಲ. ಅದರಿಂದ ನೀನು ಇಲ್ಲೇ ಇರುವುದು
ಉತ್ತಮ. ನಾನು ನಿನ್ನನ್ನು ಕಾಡಿಗೆ ಕರೆದೊಯ್ದು ಕಷ್ಟಪಡಿಸ ಬಯಸುವ
ದಿಲ್ಲ. "