This page has not been fully proofread.


 
ಸಂಗ್ರಹರಾಮಾಯಣ
 
ರಾಮಚಂದ್ರನ ಮಾತಿನಿಂದ ಲಕ್ಷ್ಮಣನ ಕೋಪ ಮಾಸಿದರೂ ಅಣ್ಣನ
ಅಗಲುವಿಕೆಯ ಯೋಚನೆಯ ಕಳವಳವಾಯಿತು. ಆತನಿಗೆ ಅಣ್ಣನ ಸೇವೆ
 
ಯೆಂದರೆ ಎಲ್ಲಿಲ್ಲದ ಸಂತಸ. ಎಂತಲೆ ಈ ಯೋಚನೆಯಿಂದ ಕಣ್ಣು ತೇವ
ವಾಯಿತು. ಕುತ್ತಿಗೆ ಬಿಗಿದು ಬಂತು. ಕೈ ಮುಗಿದು ಅಣ್ಣನ ಬಳಿ ವಿಜ್ಞಾಪಿಸಿ
 
ಕೊಂಡ :
 
" ಅಣ್ಣ, ನಿನ್ನ ಸೇವೆಯ ಸೊಗಸಿಲ್ಲದ ಸಂಪತ್ತು ನನಗೆ ಬೇಕಿಲ್ಲ.
ನೀನೆಲ್ಲಿರುವೆಯೋ ಅಲ್ಲಿ ನನ್ನ ವಾಸ. ನೀನು ನನ್ನನ್ನು ಕರೆದುಕೊಂಡು
ಹೋಗಲಾರೆಯಾದರೆ ಈ ಕ್ಷುದ್ರ ದೇಹವನ್ನು ತೊರೆದು ಇನ್ನೊಂದು ಜನ್ಮ-
ದಲ್ಲಾದರೂ ನಿನ್ನ ಸೇವೆಗೆ ಅಣಿಯಾಗುವುದು ಖಂಡಿತ. "
 
ತಮ್ಮನ ಕಳಕಳಿಯನ್ನು ಕಂಡ ರಾಮಚಂದ್ರ ನಕ್ಕ " ಆಗಲಿ, ನನ್ನ ಜತೆ
ಬರುವಿಯಂತೆ ಅದಕ್ಕೇನು ?" ಎಂದು ಸಂತೈಸಿದ. ರಾಮನ ನಿರ್ಣಯವನ್ನ
ರಿತ ಕೌಸಲ್ಯ ಮತ್ತೆ ಅಂಗಲಾಚಿಕೊಂಡಳು.
 
" ಕುಮಾರ, ಮನುಷ್ಯರ ಸಂತತಿಯ ಮೂಲಪುರುಷನಾದ ಮನುವಿನ
ಮಾತನ್ನು ಕೇಳಿಲ್ಲವೆ ?
 
* ಒಳಿತು ಕೆಡುಕುಗಳನ್ನು ವಿವೇಚಿಸದೆ ಗರ್ವದಿಂದ ಮನಬಂದಂತೆ ನಡೆ
ವಂಥವನು ಗುರುವೇ ಆಗಿದ್ದರೂ ಅವನ ಮಾತನ್ನು ಗೌರವಿಸಬೇಕಾಗಿಲ್ಲ'
ಎಂದು ಅವನು ಹೇಳಿಲ್ಲವೆ ? ಹೆಣ್ಣಿನ ಮಾತಿನಿಂದ ದಾರಿತಪ್ಪಿದ ರಾಜನನ್ನು
ಸರಿದಾರಿಗೆ ಬರಿಸುವುದು ನಿನ್ನ ಹೊಣೆಯಲ್ಲವೆ ?"
 
" ಶನ ದನಸಂಪನ್ನನಾದ ತಂದೆಯ ಮಾತನ್ನು ಪಾಲಿಸುವುದೇ ಚೆನ್ನ
ಲ್ಲವೆ ತಾಯಿ ?
 
22
 
" ಓ ನನ್ನ ಕಂದ, ಹುಲಿಯೆದುರು ಸಿಕ್ಕಿದ ಹಸುವಿನಂತೆ ನನ್ನ ಸವತಿಗೆ
ನಾನು ಹೆದರಬೇಕಾಗಿದೆ. ಇಂಥ ದೆಸೆಯಲ್ಲಿ ನನ್ನನ್ನು ತೊರೆಯಬೇಡ ಮಗನೆ.
ನಾನೂ ನಿನ್ನೊಡನೆ ಬಂದುಬಿಡುವೆ. "
 
* ಮಾತೆ, ಇದೆಂಥ ಮಾತು ? ನೀನು ಪತಿಸೇವೆಮಾಡಿಕೊಂಡು ಇಲ್ಲೇ
ಇರುವುದು ದೇವರು ಮೆಚ್ಚುವ ಕೆಲಸ, ಭರತನೂ ನಿನಗೆ ದೂರದವನಲ್ಲ.
ನನ್ನಂತೆಯೇ ಅವನನ್ನು ನೋಡಿಕೊಂಡಿರು. ಅವನೂ ನಿನ್ನನ್ನು ಭಕ್ತಿಯಿಂದ
ಸೇವಿಸಬಲ್ಲ. ಹದಿನಾಲ್ಕು ವರ್ಷಗಳು ಕಳೆದಾಗ ಮತ್ತೆ ಬಂದು ನಿನ್ನ ಆಶೀ
ರ್ವಾದವನ್ನು ಪಡೆಯುತ್ತೇನೆ ಕ್ಷಮಿಸು,