This page has been fully proofread once and needs a second look.

ಮಿಂಚಿನಬಳ್ಳಿ
 
ಮಹರ್ಷಿ ತಂದೆಯ ವಚನಕ್ಕಾಗಿ ಗೋಹತ್ಯೆಯನ್ನೇ ಮಾಡಿದ್ದ. ನೀನು ನನ್ನನ್ನು
ಪ್ರೀತಿಸುವುದಾದರೆ ತಂದೆಯ ಮಾತನ್ನು ನಡೆಸುವಂತೆ ನನಗೆ ಆಶೀರ್ವದಿಸು
ತಾಯಿ." ಹೀಗೆ ತಾಯಿಯನ್ನು ಸಮಾಧಾನಗೊಳಿಸಿ ಲಕ್ಷ್ಮಣನೆಡೆಗೆ ತಿರುಗಿ

ನುಡಿದನು; " ದೈವಸಂಕಲ್ಪಕ್ಕೆ ವಿರುದ್ಧವಾಗಿ ಸಿಟ್ಟಾಗುವುದು ಚೆನ್ನಲ್ಲ ತಮ್ಮ
ಸಮಾಧಾನ ತಾಳು,. "
 
ME
 

 
ಕೈಕೇಯಿಯ ಕಪಟ, ಪ್ರಜೆಗಳ ಕಳವಳ, ರಾಮ- ಚಂದ್ರನ ನಿರ್ವ್ಯಾಜ
ಸರಳತೆಗಳನ್ನು ಯೋಚಿಸಿದಾ- ಗ ಲಕ್ಷ್ಮಣನಿಗೆ ಸಿಟ್ಟು ಬರದಿರುವುದಾದರೂ
ಹೇಗೆ ? ಹುಬ್ಬು ಗಂಟಿಕ್ಕಿತು; ಕಣ್ಣು ಕಿಡಿ ಕಾರಿತು ; ಸೆಟೆದು ನಿಂತು ಲಕ್ಷ್ಮಣನು
ತನ್ನ
ತನ್ನ ಖಡ್ಗವನ್ನು ಝಳಪಿಸುತ್ತ ನುಡಿದನು.
 

 
"
ಅಣ್ಣ, ನಿನ್ನ ಒಪ್ಪಿಗೆಯಿಲ್ಲದೆ ನಾನೇನನ್ನೂ ಮಾಡುವಂತಿಲ್ಲ. ಇಲ್ಲ
ದಿದ್ದರೆ ನಿನ್ನ ರಾಜ್ಯ ಪ್ರಾಪ್ತಿಗೆ ಕಂಟಕವಾದ ಆ ದೈವ-ಅದರ ಸಂಕಲ್ಪ ಎಂಥದು

ಎಂದು ನೋಡಿಬಿಡುತ್ತಿದ್ದೆ. ಲಕ್ಷ್ಮಣನ ಪೌರುಷ ಇನ್ನೂ ಸತ್ತು ಹೋಗಿಲ್ಲ.
ಈ ಬ್ರಹ್ಮಾಂಡದಲ್ಲಿ ಯಾವನೇ ಆಗಲಿ ನಿನ್ನ ಅಭಿವೃದ್ಧಿಗೆ ಕಿಚ್ಚು ಪಡುವವ
- ವವನಿದ್ದರೆ ಅವನ ರಕ್ತವನ್ನು ಹೀರಲಿಕ್ಕೆ ನನ್ನ ನಿರ್ದಯಿ ಖಡ್ಗಕ್ಕೆ ಏನೂ
ಸಂಕೋಚವಿಲ್ಲ. ಕೈಕೇಯಿ ಕವಡಿನಿಂದ ವರವನ್ನು ಪಡೆದರೆ ಅಖಂಡ

ಪ್ರಜಾವರ್ಗದ ಅಭಿಪ್ರಾಯವನ್ನು ಕಡೆಗಣಿಸಿ-ಒಬ್ಬ ಕೈಕೇಯಿಗಾಗಿ ಈ
ಕೋಟಿಕಂಠದ ಕರೆಯನ್ನು ನಿರ್ಲಕ್ಷಿಸಿ ಕಾಡಿಗೆ ತೆರಳುವುದು ನ್ಯಾಯವೆ ಅಣ್ಣ ??
 
*
"
 
"
ಲಕ್ಷಣ, ಯಾವುದಕ್ಕೂ ದುಡುಕಬಾರದು. ಸುಖ-ದುಃಖ ಎನ್ನು
ವುದು ಅರಮನೆಯಲ್ಲಿ- ಕಾಡಿನಲ್ಲಿ ಬೆಲೆಗೆ ಪಡೆವಂಥ ಮಾಲಲ್ಲ. ಅದು ಅಂತ
ರಂಗದ ವಿಷಯ, ನಿಸ್ಸಂಗರಾಗಿ ಅಲೆವ ಜನಕ್ಕೆ ಪಟ್ಟಣವೇನು ? ನವೇನು?
ರಾಮಚಂದ್ರ ರಾಜ್ಯದ ಮೋಹದಿಂದ ತಂದೆಯ ಮಾತನ್ನು ಮಾಮೀರಿದ ಎಂದು
ಜನ ಆಡಿಕೊಳ್ಳುವಂತಾಗಬಾರದಲ್ಲ. ನಮ್ಮ ಕುಲದ ಪರಂಪರೆಗೆ ನನ್ನಿಂದಾಗಿ
ಕಲಂಕ ತಟ್ಟಬಾರದಲ್ಲ.: ಅದು ಮುಖ್ಯ ವಿಷಯ: ಕಾಡಿನಲ್ಲಿ ತಪಸಿಸ್ವಿಗಳ

ಸೇವೆ ಮಾಡುತ್ತ ಸುಖವಾಗಿರಬಲ್ಲೆ. ಅಲ್ಲದೆ ಕಾಡಿಗೆ ಹೋಗುವುದರಿಂದ
ಮುಂದೆ ತುಂಬ ಪ್ರಯೋಜನ- ವಾಗಲಿದೆ. ಅದಿರಲಿ ಕುಮಾರ, ನಿನಗೆ ನನ್ನ

ಮೇಲೆ ತುಂಬ ಮಮತೆ, ಅದರಿಂದ ನಿನಗೆ ಹೀಗೆ ತೋರುವುದೂ ಸಹಜ,
ನನ್ನ ಚಿಂತೆ ತೊರೆದುಬಿಡು. ಭರತನೊಡನೆ ತಂದೆ-ತಾಯಂದಿರ ಸೇವೆಗೆ

ದೀಕ್ಷೆತೊಡು,. "