This page has been fully proofread once and needs a second look.

ಸಂಗ್ರಹರಾಮಾಯಣ
 
ಕೌಸಲ್ಯೆ ಮರುಗಿದಳು
 

 
ತಾಯಿಯ ಮಾತನ್ನಾಲಿಸಿದ ರಾಮಚಂದ್ರ ತಮ್ಮನ ಮುಖವನ್ನೊಮ್ಮೆ
ದಿಟ್ಟಿಸಿ ಮುಗುಳುನಕ್ಕು ನುಡಿದ:
 

 
"ತಾಯಿ, ನಿನಗೆ ಒಂದು ದುಃಖದ ಸಂಗತಿಯನ್ನು ಹೇಳಬೇಕಾಗಿದೆ.
ಕೈಕೇಯಿ ತಾಯಿ, ತಂದೆಯಿಂದ ವರವನ್ನು ಪಡೆದಿದ್ದಾಳೆ- ತನ್ನ ಸಂತತಿಗೆ
ಗೇ
ರಾಜ್ಯಾಧಿಕಾರ ಸಿಗಬೇಕು ಮತ್ತು ನಾನು ಹದಿನಾಲ್ಕು ವರ್ಷಗಳ ಕಾಲ
ಕಾಡಿನಲ್ಲಿರಬೇಕು- ಎಂದು."
 

 
ಈ ಮಾತನ್ನು ಆಲಿಸಿದ್ದೇ ತಡ -ಕೌಸಲ್ಯೆ ಮೂರ್ಛಿತಳಾಗಿ ಭೂಮಿಗೆ
ಬಿದ್ದು ಬಿಟ್ಟಳು- ಕತ್ತರಿಸಿಬಿಟ್ಟ ಹೂಬಳ್ಳಿಯಂತೆ; ಬಾಣದ ಪೆಟ್ಟು ತಿಂದ ಹುಲ್ಲೆ
ಯಂತೆ ! ಭೂಮಿಗೆ ಬಿದ್ದ ತಾಯಿಯನ್ನು ರಾಮಚಂದ್ರ ಮೆಲ್ಲನೆ ಹಿಡಿದೆತ್ತಿ ಅವಳ
ಮೈಗಂಟಿದ ಧೂಳನ್ನು ತನ್ನ ಮೃದುಪಾಣಿಯಿಂದ ಒರಸಿ ತೆಗೆದನು. ಹೇಗೋ
ಎಚ್ಚೆತ್ತ ಕೌಸಲ್ಯೆ ಕಣ್ಣೀರಿಟ್ಟು ನುಡಿದಳು:
 

 
"ನಿರಪರಾಧಿನಿಯಾದ ನನ್ನನ್ನು ಬಿಟ್ಟು ಹೋಗಬೇಡ ಕಂದ. ವಕ್ರ
ಸ್ವಭಾವಳಾದ ಕೈಕೇಯಿಯ ಬಯಕೆಯನ್ನು ಪೂರಯಿಸುವುದರಲ್ಲಿ ನಿನಗಿಷ್ಟು

ಭರವೆ ? ಜತೆಗೆ ಮಾತೃ ಹೃದಯಕ್ಕಾಗಿ ಹಂಬಲಿಸಿ-ಹಂಬಲಿಸಿ ಈ ಸೌಭಾಗ್ಯ
ವನ್ನು ಕಾಣುವುದಕ್ಕಾಗಿ ಬದುಕಬೇಕಾಯಿತೆ ? ಕಂದ, ಮಕ್ಕಳಿಗೆ ತಂದೆಗಿಂತ

ತಾಯಿ ಮೇಲಲ್ಲವೆ ? ನಾನು ಆಣತಿ ಮಾಡುತ್ತಿದ್ದೇನೆ- ಕಾಡಿಗೆ ಹೋಗ
ಕೂಡದು. ನಿನ್ನನ್ನು ಕಳೆದುಕೊಂಡು ನಾನಾದರೂ ಏಕೆ ಬದುಕಬೇಕು
ವತ್ಸ ? ನೀನು ಕಾಡಿಗೆ ಹೋಗುವುದು ನಿಶ್ಚಯವೆಂದಾದರೆ ನನ್ನನ್ನೂ ಕರೆದು
ಕೊಂಡು ಹೋಗು. ನಾವು ಕಾಡಿ- ನಲ್ಲಿ ಸೊಪ್ಪು-ಗಡ್ಡೆ ತಿಂದು ಬದುಕೋಣ.
ಈ ಹಾಳು ಸಂಪತ್ತನ್ನು ಕೈಕೇಯಿಯೊಬ್ಬಳೆ ಉಣ್ಣಲಿ."
 

 
ಕೌಸಲ್ಯೆಯ ಮಾತುಗಳಿಂದ ಲಕ್ಷ್ಮಣನಿಗೆ ಕರುಳು ಕಿತ್ತು ಬಂದಂತಾಗು
ತಿತ್ತು. ಅವನನ್ನು ತಡೆದು ರಾಮಚಂದ್ರನೇ ಉತ್ತರಿಸಿದ:
 
66
 
*

 
"
ಮಾತೆ, ಜಗತ್ತಿನಲ್ಲಿ ತಾಯಿಗೆ ಸರಿ-ಸಾಟಿಯಾದುದು ಬೇರೊಂದಿಲ್ಲ
ಎಂದು ಬಲ್ಲೆ: ಆದರೆ ಭಗವದಿಚ್ಛೆ ಎಲ್ಲಕ್ಕಿಂತಲೂ ದೊಡ್ಡದು. ಅದಕ್ಕೆ
ಎಲ್ಲರೂ ಮಣಿ- ಯಬೇಕು. ಹಿಂದೆ ಪರಶುರಾಮ ತಂದೆಯ ಮಾತಿನಿಂದಲೇ
ತಾಯಿಯ ತಲೆಯನ್ನು ತರಿದು ಮತ್ತೆ ಬದುಕಿಸಿದ್ದ. ಪಂಡಿತನಾದ ಕಂಡು