This page has been fully proofread once and needs a second look.

8
 
ಮಿಂಚಿನಬಳ್ಳಿ
 
"ಮಾನಧನನಾದ ಮಹಾರಾಜ ನಾಚಿಕೆಯಿಂದ ಇದನ್ನು ನಿನಗೆ ತಿಳಿಸ
ಲಾರದಾದ. ಅವನ ಗೂಢಭಾವವನ್ನು ನಾನರಿಯಬಲ್ಲೆ ಅರುಹಬಲ್ಲೆ, ನೀನು
ಎಂದೂ ಗುರ್ವಾಜ್ಞೆಯನ್ನು ಮೀರಿದವನಲ್ಲ. ಅದರಿಂದ ನಿನಗೆ ತಿಳಿಸುತ್ತಿದ್ದೇನೆ:
ನೀನು ಇಲ್ಲಿರುವ- ವರೆಗೆ ನಿನ್ನ ತಂದೆ ಕಳವಳದಿಂದ ಉಣ್ಣಲೂಲಾರ. ಅದರಿಂದ
ಆದಷ್ಟು ಬೇಗ ಈ ರಾಜ್ಯದಿಂದ ದೂರಾಗು."
 

 
ಕೈಕೇಯಿಯ ಮಾತನ್ನು ಕೇಳಿಯೂ ಏನೂ ಹೇಳಲಾರದೆ ಮಹಾರಾಜ
ದುಃಖಾತಿಶಯದಿಂದ ಮೂರ್ಛೆಗೊಂಡನು. ರಾಮನು ವಿನಯದಿಂದ ಕೈಕೇಯಿ
ಯಲ್ಲಿ ವಿನಂತಿಸಿಕೊಂಡನು:
 

 
"ರಾಷ್ಟ್ರಜ್ಞಿ, ತಾಯಿಯನ್ನು ಕಂಡು, ಸೀತೆಯನ್ನು ಸಾಂತ್ವನಗೊಳಿಸಿ ಬೇಗನೆ
ತಾಪಸವೇಷದಿಂದ ಕಾಡಿಗೆ ತೆರಳುವೆ.
ಇಷ್ಟೊಂದು ಕಾಲವಿಲಂಬವನ್ನು
ಕ್ಷಮಿಸು. ಪಿತೃಶುಕ್ಶ್ರೂಷೆಯಲ್ಲಿ ನಿರತನಾದ ಭರತ, ಈ ಭೂಮಂಡಲದ ಅಧಿಪತಿ
 
ಯಾಗಲಿ."
 

 
ರಾಮನ ಮಾತನ್ನಾಲಿಸಿದ ದಶರಥ ' ಓ ನನ್ನ ಕಂದ ರಾಮಭದ್ರ' ಎಂದು
ತನ್ನಷ್ಟಕ್ಕೆ ಎಂಬಂತೆ ಹಲುಬಿದ. ನಿಶ್ಲೇಚೇಷ್ಟಿತನಾಗಿ ಕುಳಿತಿದ್ದ ರಾಜನ ಮತ್ತು
ಕೈಕೇಯಿಯ ಪಾದಧೂಲಿಯನ್ನು ಹಣೆಗೆ ಹಚ್ಚಿಕೊಂಡು, ರಾಮಚಂದ್ರ ಅಂತಃ-
ಪುರದಿಂದ ಶಾಂತಗಂಭೀರವಾಗಿ ಹೊರನಡೆದ.
 

 
ಅಂತಃಪುರದಲ್ಲೆಲ್ಲ ರಾಮಚಂದ್ರನ ನಿರ್ಗಮನ- ವನ್ನು ಕಂಡ ಜನ ಹಾಹಾ
ಕಾರವನ್ನೆ ಮಾಡಲಾ- ರಂಭಿಸಿತು. ಲಕ್ಷ್ಮಣ ಮಾತ್ರ ಈ ಸಂದರ್ಭದಿಂದ ಕೋಕ್ಷೋಭೆ
ಗೊಂಡಿದ್ದ. ಒಂದೆಡೆ ಸಿಟ್ಟು- ಒಂದೆಡೆ ದುಗುಡ, ಒಂದೆಡೆ ಸಿಗ್ಗು- ಇವೆಲ್ಲ
ಭಾವ ತುಮುಲ- ಗಳಿಂದ ಅವನಿಗೆ ಮಾತೇ ಹೊರಡದಂತಿತ್ತು. ಸುಮ್ಮನೆ ಮೂಕ
ನಾಗಿ ತನ್ನಣ್ಣನನ್ನು ಹಿಂಬಾಲಿಸಿ- ದನು. ಈ ಪ್ರಸಂಗದಲ್ಲಿ ಧೃತಿಗೆಡದೆ ನಗು
ಮುಖ- ದಿಂದ ಬರುತ್ತಿದ್ದ ಒಬ್ಬನೇ ಒಬ್ಬ ವ್ಯಕ್ತಿಯೆಂದರೆ ರಾಮಚಂದ್ರ.
 

 
ರಾಮಚಂದ್ರ ನೇರವಾಗಿ ತಾಯಿಯ ಕೋಣೆಗೆ ಹೋಗಿ ಭಗವತ್ತೂಪೂಜೆಯಲ್ಲಿ
ಮಗ್ನಳಾದ ತಾಯಿಗೆ ಅಭಿನಂವಂದಿಸಿದನು. ನಡೆದಿದ್ದ ಅವಾಂತರದ ಸುಳಿವನ್ನೂ
ಅರಿಯದ ರಾಜ್ಞಿ ಕೌಸಿಸಲ್ಯೆ, ಮಗನನ್ನು ನಿನಲ್ಮೆಯಿಂದ ತಬ್ಬಿ ಹನಿಗೂಡಿದ ಕಣ್ಣು
 
ಗಳಿಂದ ಹರಸಿದಳು:
 

 
"ಇಂದೇ ಯುವರಾಜನಾಗು, ಕಂದ."