This page has not been fully proofread.

8
 
ಮಿಂಚಿನಬಳ್ಳಿ
 
"ಮಾನಧನನಾದ ಮಹಾರಾಜ ನಾಚಿಕೆಯಿಂದ ಇದನ್ನು ನಿನಗೆ ತಿಳಿಸ
ಲಾರದಾದ. ಅವನ ಗೂಢಭಾವವನ್ನು ನಾನರಿಯಬಲ್ಲೆ ಅರುಹಬಲ್ಲೆ, ನೀನು
ಎಂದೂ ಗುರ್ವಾಜ್ಞೆಯನ್ನು ಮೀರಿದವನಲ್ಲ. ಅದರಿಂದ ನಿನಗೆ ತಿಳಿಸುತ್ತಿದ್ದೇನೆ:
ನೀನು ಇಲ್ಲಿರುವ ವರೆಗೆ ನಿನ್ನ ತಂದೆ ಕಳವಳದಿಂದ ಉಣ್ಣಲೂ ಆರ. ಅದರಿಂದ
ಆದಷ್ಟು ಬೇಗ ಈ ರಾಜ್ಯದಿಂದ ದೂರಾಗು."
 
ಕೈಕೇಯಿಯ ಮಾತನ್ನು ಕೇಳಿಯೂ ಏನೂ ಹೇಳಲಾರದೆ ಮಹಾರಾಜ
ದುಃಖಾತಿಶಯದಿಂದ ಮೂರ್ಛಗೊಂಡನು. ರಾಮನು ವಿನಯದಿಂದ ಕೈಕೇಯಿ
ಯಲ್ಲಿ ವಿನಂತಿಸಿಕೊಂಡನು:
 
"ರಾಷ್ಟ್ರ, ತಾಯಿಯನ್ನು ಕಂಡು, ಸೀತೆಯನ್ನು ಸಾಂತ್ವನಗೊಳಿಸಿ ಬೇಗನೆ
ತಾಪಸವೇಷದಿಂದ ಕಾಡಿಗೆ ತೆರಳುವೆ.
ಇಷ್ಟೊಂದು ಕಾಲವಿಲಂಬವನ್ನು
ಕ್ಷಮಿಸು. ಪಿತೃಶುಕ್ರೂಷೆಯಲ್ಲಿ ನಿರತನಾದ ಭರತ, ಈ ಭೂಮಂಡಲದ ಅಧಿಪತಿ
 
ಯಾಗಲಿ."
 
ರಾಮನ ಮಾತನ್ನಾಲಿಸಿದ ದಶರಥ ಓ ನನ್ನ ಕಂದ ರಾಮಭದ್ರ' ಎಂದು
ತನ್ನಷ್ಟಕ್ಕೆ ಎಂಬಂತೆ ಹಲುಬಿದ. ನಿಶ್ಲೇಷ್ಟಿತನಾಗಿ ಕುಳಿತಿದ್ದ ರಾಜನ ಮತ್ತು
ಕೈಕೇಯಿಯ ಪಾದಧೂಲಿಯನ್ನು ಹಣೆಗೆ ಹಚ್ಚಿಕೊಂಡು, ರಾಮಚಂದ್ರ ಅಂತಃ-
ಪುರದಿಂದ ಶಾಂತಗಂಭೀರವಾಗಿ ಹೊರನಡೆದ.
 
ಅಂತಃಪುರದಲ್ಲೆಲ್ಲ ರಾಮಚಂದ್ರನ ನಿರ್ಗಮನವನ್ನು ಕಂಡ ಜನ ಹಾಹಾ
ಕಾರವನ್ನೆ ಮಾಡಲಾರಂಭಿಸಿತು. ಲಕ್ಷ್ಮಣ ಮಾತ್ರ ಈ ಸಂದರ್ಭದಿಂದ ಕೋಭೆ
ಗೊಂಡಿದ್ದ. ಒಂದೆಡೆ ಸಿಟ್ಟು ಒಂದೆಡೆ ದುಗುಡ, ಒಂದೆಡೆ ಸಿಗ್ಗು- ಇವೆಲ್ಲ
ಭಾವ ತುಮುಲಗಳಿಂದ ಅವನಿಗೆ ಮಾತೇ ಹೊರಡದಂತಿತ್ತು. ಸುಮ್ಮನೆ ಮೂಕ
ನಾಗಿ ತನ್ನಣ್ಣನನ್ನು ಹಿಂಬಾಲಿಸಿದನು. ಈ ಪ್ರಸಂಗದಲ್ಲಿ ಧೃತಿಗೆಡದೆ ನಗು
ಮುಖದಿಂದ ಬರುತ್ತಿದ್ದ ಒಬ್ಬನೇ ಒಬ್ಬ ವ್ಯಕ್ತಿಯೆಂದರೆ ರಾಮಚಂದ್ರ.
 
ರಾಮಚಂದ್ರ ನೇರವಾಗಿ ತಾಯಿಯ ಕೋಣೆಗೆ ಹೋಗಿ ಭಗವತ್ತೂಜೆಯಲ್ಲಿ
ಮಗ್ನಳಾದ ತಾಯಿಗೆ ಅಭಿನಂದಿಸಿದನು. ನಡೆದಿದ್ದ ಅವಾಂತರದ ಸುಳಿವನ್ನೂ
ಅರಿಯದ ರಾಜ್ ಕೌಸಿ, ಮಗನನ್ನು ನಿಯಿಂದ ತಬ್ಬಿ ಹನಿಗೂಡಿದ ಕಣ್ಣು
 
ಗಳಿಂದ ಹರಸಿದಳು:
 
"ಇಂದೇ ಯುವರಾಜನಾಗು, ಕಂದ."