This page has been fully proofread once and needs a second look.


 
ಮಿಂಚಿನ ಬಳ್ಳಿ
 
ದುಃಖಿತನಾದ ಮಹಾರಾಜನಿಗೆ ಕೈಕೇಯಿಯ ಬಿರುನುಡಿಗಿಂತಲೂ
ಸುಮಂತ್ರನ ಹೊಗಳು ಮಾತೇ ಹೆಚ್ಚು ದುಃಸಹವಾಗಿ ಕಂಡಿತು. ಚಿಂತಾಕುಲ

ನಾಗಿಯೇ ರಾಜನು ಉತ್ತರಿಸಿದನು:
 

 
"ಈ ಜೀವಚ್ಛವವನ್ನು ಏಕೆ ಹೊಗಳುವೆ ಮಂತ್ರಿನ್ ? ಕೂಡಲೆ ನನ್ನ
ಕಂದನನ್ನು ಕರೆದು ತಾ. ಬದುಕಿದ್ದಾಗಲೆ ಅವನನ್ನು ಇನ್ನೊಮ್ಮೆ ಕಾಣುವ

ಭಾಗ್ಯವಾದರೂ ದೊರೆಯಲಿ."
 

 
ಏನು ನಡೆಯಿತು ಎಂಬುದನ್ನರಿಯದೆ ದಿಗಿಲು- ಗೊಂಡ ಸುಮಂತನು
ತ್ರನು ಬೇಗನೆ ರಾಮಚಂದ್ರನ ಅರಮನೆಗೆ ತೆರಳಿದ. ವೇಗವಾಗಿ ಸಪ್ತ ಪ್ರಾಕಾರಗಳಿಂದ

ಗುಪ್ತವಾದ ವೈಕುಂಠ ಸುಂದರವಾದ ಮಂದಿರವನ್ನು ಪ್ರವೇಶಿಸಿದ. ಅಂತಃಪುರ
ದಲ್ಲಿ ರಾಮಭದ್ರ ಬಂಗಾರದ ಮಂಚದಲ್ಲಿ ಕುಳಿತಿದ್ದ. ಹಿಂಬದಿಯಲ್ಲಿ ಸೀತೆ
ತನ್ನ ಕೈಗಳಿಂದಲೇ ಚಾಮರವನ್ನು ಬೀಸು- ತ್ತಿದ್ದಳು. ಸುಮಂತ್ರ ಪ್ರವೇಶಿಸಿದವನೆ
*
' ಮಹಾರಾಜ ನಿನ್ನನ್ನು ನೋಡಬಯಸುತ್ತಾನೆ "' ಎಂದು ಉಸುರಿದ. ಸೀತಾ
ದೇವಿಯ ಕುಡಿನೋಟದ ಕಾಪನ್ನು ಪಡೆದು ರಾಮಚಂದ್ರ ಸೂರ್ಯತುಲ್ಯವಾದ
ರಥವನ್ನೇರಿ- ದನು. ಗುಹೆಯಿಂದ ಹೊರಹೊರಟ ಸಿಂಹದಂತೆ ಈ ಪುರುಷಸಿಂಹ
ಅರಮನೆಯಿಂದ ರಾಜವೀಧಿಗೆ ಇಳಿದು ಬಂದ. ದಾರಿಯಲ್ಲಿ ನರನಾರಿಯರು

ಉಪ್ಪರಿಗೆಯನ್ನೇರಿ ಇವನ ಬರವನ್ನು ಕಂಡು ಸಂತೋಷದಿಂದ ನುಡಿಯು-
ತ್ತಿದ್ದರು:
 

 
"ರಾಮನನ್ನು ಪತಿಯಾಗಿ ಪಡೆದ ಸೀತಾಮಾತೆ ಧನ್ಯೆ; ಮಗನನ್ನಾಗಿ
ಪಡೆದ ದಶರಥ ಕೌಸಿಸಲ್ಯೆಯರು ಧನೈನ್ಯರು; ರಾಜನನ್ನಾಗಿ ಪಡೆದ ನಾವೂ
ಧನ್ಯರು."
 

 
ಈ ಜನರೆಡೆಗೆ ಮಂದಹಾಸದಿಂದ ಬೆರೆತ ಕಟಾಕ್ಷ- ವನ್ನು ಬೀರುತ್ತಾ ರಾಮ
ಚಂದ್ರು ಮುಂದೆ ಸಾಗಿದ. ಅಂತಃಪುರವನ್ನು ಪ್ರವೇಶಿಸಿದವನೇ ದಶರಥನನ್ನೂ

ಕೈಕೇಯಿಯನ್ನೂ ಕಾಲ್ಮುಟ್ಟಿ ವಂದಿಸಿದನು. "'ಚಿರಂಜೀವಿಯಾಗು ವತ್ಸಾ'
ಎಂದು ಹೇಳಬಯಸಿ- ದರೂ ರಾಜನ ಬಾಯಿಂದ ಮಾತೇ ಬಾರದಾಯಿತು.

ಕಣ್ಣಿನಿಂದ ಸುರಿವ ಕಂಬನಿಯಧಾರೆ ಎದೆಯ ಮೂಕ ವೇದನೆಯನ್ನು ತೋರು
ತ್ತಿತ್ತು. ಎಲ್ಲವನ್ನು ಬಲ್ಲ ಲೋಕವಿಡಂಬಕನಾದ ರಾಮಚಂದ್ರ ಕವಡರಿಯ
ದವನಂತೆ ತಂದೆಯ ಅಳುವಿನ ಕಾರಣ- ವನ್ನು ಕೈಕೇಯಿಯ ಬಳಿ ಕೇಳಿದನು: