2023-03-15 15:35:29 by ambuda-bot
This page has not been fully proofread.
ಲ
ಮಿಂಚಿನ ಬಳ್ಳಿ
ದುಃಖಿತನಾದ ಮಹಾರಾಜನಿಗೆ ಕೈಕೇಯಿಯ ಬಿರುನುಡಿಗಿಂತಲೂ
ಸುಮಂತನ ಹೊಗಳು ಮಾತೇ ಹೆಚ್ಚು ದುಃಸಹವಾಗಿ ಕಂಡಿತು. ಚಿಂತಾಕುಲ
ನಾಗಿಯೇ ರಾಜನು ಉತ್ತರಿಸಿದನು:
"ಈ ಜೀವಚ್ಛವವನ್ನು ಏಕೆ ಹೊಗಳುವೆ ಮಂತ್ರಿನ್ ? ಕೂಡಲೆ ನನ್ನ
ಕಂದನನ್ನು ಕರೆದು ತಾ. ಬದುಕಿದ್ದಾಗಲೆ ಅವನನ್ನು ಇನ್ನೊಮ್ಮೆ ಕಾಣುವ
ಭಾಗ್ಯವಾದರೂ ದೊರೆಯಲಿ."
ಏನು ನಡೆಯಿತು ಎಂಬುದನ್ನರಿಯದೆ ದಿಗಿಲುಗೊಂಡ ಸುಮಂತನು
ಬೇಗನೆ ರಾಮಚಂದ್ರನ ಅರಮನೆಗೆ ತೆರಳಿದ. ವೇಗವಾಗಿ ಸಪ್ತ ಪ್ರಾಕಾರಗಳಿಂದ
ಗುಪ್ತವಾದ ವೈಕುಂಠ ಸುಂದರವಾದ ಮಂದಿರವನ್ನು ಪ್ರವೇಶಿಸಿದ. ಅಂತಃಪುರ
ದಲ್ಲಿ ರಾಮಭದ್ರ ಬಂಗಾರದ ಮಂಚದಲ್ಲಿ ಕುಳಿತಿದ್ದ. ಹಿಂಬದಿಯಲ್ಲಿ ಸೀತೆ
ತನ್ನ ಕೈಗಳಿಂದಲೇ ಚಾಮರವನ್ನು ಬೀಸುತ್ತಿದ್ದಳು. ಸುಮಂತ್ರ ಪ್ರವೇಶಿಸಿದವನೆ
* ಮಹಾರಾಜ ನಿನ್ನನ್ನು ನೋಡಬಯಸುತ್ತಾನೆ " ಎಂದು ಉಸುರಿದ. ಸೀತಾ
ದೇವಿಯ ಕುಡಿನೋಟದ ಕಾಪನ್ನು ಪಡೆದು ರಾಮಚಂದ್ರ ಸೂರ್ಯತುಲ್ಯವಾದ
ರಥವನ್ನೇರಿದನು. ಗುಹೆಯಿಂದ ಹೊರಹೊರಟ ಸಿಂಹದಂತೆ ಈ ಪುರುಷಸಿಂಹ
ಅರಮನೆಯಿಂದ ರಾಜವೀಧಿಗೆ ಇಳಿದು ಬಂದ. ದಾರಿಯಲ್ಲಿ ನರನಾರಿಯರು
ಉಪ್ಪರಿಗೆಯನ್ನೇರಿ ಇವನ ಬರವನ್ನು ಕಂಡು ಸಂತೋಷದಿಂದ ನುಡಿಯು-
ತ್ತಿದ್ದರು:
"ರಾಮನನ್ನು ಪತಿಯಾಗಿ ಪಡೆದ ಸೀತಾಮಾತೆ ಧನ್ಯ; ಮಗನನ್ನಾಗಿ
ಪಡೆದ ದಶರಥ ಕೌಸಿಯರು ಧನೈಯರು; ರಾಜನನ್ನಾಗಿ ಪಡೆದ ನಾವೂ
ಧನ್ಯರು."
ಈ ಜನರೆಡೆಗೆ ಮಂದಹಾಸದಿಂದ ಬೆರೆತ ಕಟಾಕ್ಷವನ್ನು ಬೀರುತ್ತಾ ರಾಮ
ಚಂದ್ರು ಮುಂದೆ ಸಾಗಿದ. ಅಂತಃಪುರವನ್ನು ಪ್ರವೇಶಿಸಿದವನೇ ದಶರಥನನ್ನೂ
ಕೈಕೇಯಿಯನ್ನೂ ಕಾಲ್ಮುಟ್ಟಿ ವಂದಿಸಿದನು. "ಚಿರಂಜೀವಿಯಾಗು ವತ್ಸಾ'
ಎಂದು ಹೇಳಬಯಸಿದರೂ ರಾಜನ ಬಾಯಿಂದ ಮಾತೇ ಬಾರದಾಯಿತು.
ಕಣ್ಣಿನಿಂದ ಸುರಿವ ಕಂಬನಿಯಧಾರೆ ಎದೆಯ ಮೂಕ ವೇದನೆಯನ್ನು ತೋರು
ಇತ್ತು. ಎಲ್ಲವನ್ನು ಬಲ್ಲ ಲೋಕವಿಡಂಬಕನಾದ ರಾಮಚಂದ್ರ ಕವಡರಿಯ
ದವನಂತೆ ತಂದೆಯ ಅಳುವಿನ ಕಾರಣವನ್ನು ಕೈಕೇಯಿಯ ಬಳಿ ಕೇಳಿದನು: