2023-03-15 15:35:28 by ambuda-bot
This page has not been fully proofread.
ಸಂಗ್ರಹರಾಮಾಯಣ
" ಇಂದೇ ಯುವರಾಜನಾಗು ಕಂದ
ಮರುದಿನ ಮುಂಜಾನೆ ಮಹಾರಾಜ ಇನ್ನೂ ಎದ್ದು ಬಾರದ್ದನ್ನು ಕಂಡು
ಕಾರ್ಯಜ್ಞನಾದ ಸುಮಂತ್ರನು ತ್ವರಿತವಾಗಿ ಅಂತಃಪುರವನ್ನು ಪ್ರವೇಶಿಸಿದನು.
ಅಲ್ಲಿ ಮಹಾರಾಜನು ಶಯ್ಕೆಯಲ್ಲಿ ಮಲಗಿಕೊಂಡೇ ಇದ್ದ. ಸುಮಂತನು ಮೆಲ್ಲನೆ
ಉಸುರಿದ:
೪೭
" ಮಹಾರಾಜ, ರಾಜಕಾರ್ಯದಿಂದ ನಿನ್ನನ್ನು ಎಚ್ಚರಿಸಬೇಕಾಗಿದೆ.
ಪೌರ ಜಾನಪದರೆಲ್ಲ ಬಂದು ನೆರೆದಿದ್ದಾರೆ, ಉತ್ಸುಕತೆಯಿಂದ ಅಭಿಷೇಕ ಕ್ಷಣ-
ವನ್ನು ಇದಿರು ನೋಡುತ್ತಿದ್ದಾರೆ. ರಾಮನ ಅಭಿಷೇಕ ಕಾಲ ಸನ್ನಿಹಿತವಾಗಿದೆ.
ಸಭೆಗೆ ಚಿತ್ತೈಸಬೇಕು. "
ರಾಜ ಒಂದು ಮಾತನ್ನೂ ಆಡಲಿಲ್ಲ. ಬಗ್ಗಿಸಿದ್ದ ತಲೆಯನ್ನೂ ಮೇಲೆ
ಲಿಲ್ಲ. ತೋರುವುದಾದರೂ ಯಾವ ಮುಖವನ್ನು ? ಆಡುವದಾದರೂ ಯಾವ
ಮಾತನ್ನು ? ಕೈಕೇಯಿಯೇ ಸುಮಂತ್ರನ ಮಾತಿಗೆ ಮಾರ್ನುಡಿದಳು:
ಸುಮಂತ್ರ, ಪಟ್ಟಾಭಿಷೇಕದ ಸಂತಸದಿಂದ ಮಹಾರಾಜ ರಾತ್ರಿಯಿಡೀ
ಎಚ್ಚರಾಗಿದ್ದ, ಅದರಿಂದ ಈಗ ಜೊಂಪು ಹತ್ತಿರಬೇಕು. ಚಿಂತಿಲ್ಲ, ಬೇಗನೆ
ರಾಮನನ್ನು ಇಲ್ಲಿಗೆ ಕರೆದುಕೊಂಡು ಬಾ, "
ಕೈಕೇಯಿಯ ಮಾತನ್ನು ನಿಜವೆಂದು ಬಗೆದ ಮಂತ್ರಿ ಸುಮಂತ್ರನು
ಮರಳುತ್ತಿದ್ದಾಗ ಅಂತಪುರ ದ್ವಾರದಲ್ಲಿ ರಾಜನ ಬರವನ್ನು ಕಾದು ನಿಂತಿದ್ದ
ಮಂತ್ರಿಗಳು-ಪುರೋಹಿತರು ಸುಮಂತ್ರನ ಬಳಿ ವಿಜ್ಞಾಪಿಸಿಕೊಂಡರು.
ಮಂತ್ರಿ, ಸೂರ್ಯದೇವ ಉದಿಸುತ್ತಿದ್ದಾನೆ. ಸಾಮಗ್ರಿಯೆಲ್ಲ
ಸಿದ್ಧವಾಗಿದೆ. ಬೇಗನೆ ಚಿತ್ತೈಸುವಂತೆ ಸನ್ನಿಧಾನದಲ್ಲಿ ನಿವೇದಿಸಿಕೊಳ್ಳು."
ಎಲ್ಲಿ ಕಾಲ ಮೀರೀತೋ ಎನ್ನುವ ದುಗುಡ ಎಲ್ಲರಿಗೂ ಕಳವಳದಿಂದಲೇ
ಸುಮಂತ್ರ ಮತ್ತೊಮ್ಮೆ ಅಂತಃಪುರವನ್ನು ಸೇರಿ ರಾಜನನ್ನು ನುತಿಸಿ ಎಚ್ಚರಿ
ಸಿದನು:
" ಓ ಮಹೇಂದ್ರ ತುನಾದ ಮಹಾರಾಜನೆ. ಓ ರಕ್ಕಸರ ಸೊಕ್ಕನ್ನು
ಮುರಿದ ಮಹಾ ವೀರನೆ, ಓ ರಾಮಚಂದ್ರನನ್ನು ಮಗನನ್ನಾಗಿ ಪಡೆದ ಪುಣ್ಯ
ಚರಿತನೆ ಎಚ್ಚರು, ಎಚ್ಚರು.