This page has not been fully proofread.

ಮಿಂಚಿನಬಳ್ಳಿ
 
ಇವೆಲ್ಲಕ್ಕಾದರೂ ಏನು ಬೆಲೆ? ಸತ್ಯಕ್ಕಾಗಿ ದೇಹವನ್ನು ತೆತ್ತ ಮಹನೀಯರು
ಹುಟ್ಟಿಬಂದ ವಂಶವಿದು. ನಿನಗೆ ಮಾತ್ರ ಸತ್ಯದ ಮೇಲೆ ಒಲವಿಲ್ಲ ! ಆ ರಾಮ
ನನ್ನು ರಾಜ್ಯದಲ್ಲಿ ಅಭಿಷೇಕಿಸಬೇಕು, ಕೌಸಲ್ಯಯೊಡನೆ ರಮಿಸಬೇಕು ಎಂದಲ್ಲವೆ
ನಿನ್ನ ಹಂಚಿಕೆ ?
 

 
ನನ್ನ ಸವತಿಯನ್ನು ನೀನು, ಇನ್ನೊಂದು ಮುಂಡಾಡುವುದನ್ನು ನಾನು
ಸಹಿಸಲಾರೆ. ಒಂದು ದಿನವಾದರೂ ಅವಳೂ ನನ್ನಂತೆಯೇ ಇಂಥ ಸಂಕಟ
ಪಟ್ಟುದನ್ನು ಕಂಡಿದ್ದರೆ ನನ್ನ ಬಾಳು ಸಾರ್ಥಕವಾಯಿತು ಎಂದು ಬಗೆಯುತ್ತಿದ್ದೆ.
 
ಅಂತೂ ನನ್ನ ಅಭಿಪ್ರಾಯದಲ್ಲಿ ಇನ್ನು ಬದಲಾವಣೆ ಸಾಧ್ಯವಿಲ್ಲ.
ನನ್ನ ಬಯಕೆಯನ್ನು ಪೂರಯಿಸಿದರೇ ಸರಿ; ಇಲ್ಲವಾದರೆ ವಿಷ ಕುಡಿದು ನಿನಗೆ
ಬೇಡಾದ ಈ ದೇಹವನ್ನು ನಿನ್ನೆದುರು ಚೆಲ್ಲಿಬಿಡುತ್ತೇನೆ. ಆ ಮೇಲಾದರೂ
ನೀನು ಹಾಯಾಗಿರಬಹುದು. "
 
* ಹಾ ರಾಮಚಂದ್ರ' ಎಂದು ಭೂಮಿಗೆ ಬಿದ್ದ ಮಹಾರಾಜನು ಹೇಗೋ
ಚೇತರಿಸಿಕೊಂಡು ರಾಣಿಯನ್ನು ಬಹುವಾಗಿ ಸಾಂತ್ವನಗೊಳಿಸಿದನು. ಅವಳು
ಪಟ್ಟು ಹಿಡಿದು ಕುಳಿತುಬಿಟ್ಟಳು! ತಾಳ್ಮೆ ತಪ್ಪಿದ ರಾಜ ರೇಗಿ ಕೂಗ
 
ತೊಡಗಿದನು:
 
66
 
" ನೀನೊಂದು ಪಾಪಕೂಪ. ನಿನ್ನ ಕೈ ಹಿಡಿದುದು ನನ್ನ ತಪ್ಪು, ನಿನಗೆ
ಸಲುಗೆಯಿತ್ತು ಮುಂಡಾಡಿದ್ದು ನನ್ನ ತಪ್ಪು, ನಾನು ನಿನ್ನ ಕೈ ಹಿಡಿದುದಕ್ಕೆ
ಅಗ್ನಿ, ಸಾಕ್ಷಿ ನುಡಿಯಬಹುದು. ಆದರೆ ನಾನು ಅದನ್ನು ಬಿಟ್ಟು ಬಿಡಲು ಸಿದ್ಧ
ನಿದ್ದೇನೆ. ವಿಷ ಕನೈಯಿಂದ ಎಷ್ಟು ದೂರಿದ್ದರೆ ಅಷ್ಟು ಚೆನ್ನು !
 
ಅಯ್ಯೋ, ಈ ವಿಷಯ ರಾಮನಿಗೆ ತಿಳಿಯಿತೆಂದರೆ ಅವನು ಖಂಡಿತ
ವಾಗಿಯೂ ಕಾಡಿಗೆ ಹೊರಟು ಹೋಗುತ್ತಾನೆ. ಈ ರಾಷ್ಟ್ರ ಅನಾಥ
ವಾಗುತ್ತದೆ ! "
 
ಕೈಕೇಯಿಯ ಮಾತಿನಿಂದ ನೊಂದ ಮಹಾರಾಜನಿಗೆ ಆ ರಾತ್ರಿ ಒಂದು
ಯುಗದಂತೆ ಭಾಸವಾಯಿತು.
 
ಬೆಳಗಾಯಿತು. ವಂದಿಮಾಗಧರು ತಮ್ಮ ಕೆಲಸಕ್ಕೆ ತೊಡಗಿದರು. ರಾಮ
ಚಂದ್ರನ ಅರಮನೆಯ ಮಾಗಧ ತನ್ನ ಸೊಲ್ಲನ್ನು ಹಾಡುತ್ತಿದ್ದ:
 
" ಓ ರಾಮಭದ್ರ, ಮೂಡಣ ದಿಗಂತದಲ್ಲಿ ಮೂಡುತ್ತಿರುವ ಸೂರ್ಯನ
ಹೊಂಬೆಳಕಿನಂತೆ ನಿನ್ನ ಕೀರ್ತಿ ಪ್ರಭೆ ಜಗತ್ತನ್ನು ಬೆಳಗಿಸಲಿ,"