2023-03-15 15:35:27 by ambuda-bot
This page has not been fully proofread.
ಸಂಗ್ರಹರಾಮಾಯಣ
ಕತ್ತಲಿನ ರೂಪಕ್ಕೆ ತಳ್ಳುವೆಯಾ ? ಸೂರ್ಯನಿಲ್ಲದೆ ಹಗಲೂ ಇಲ್ಲ. ನೀರಿಲ್ಲದೆ
ತಾವರೆಯೂ ಇಲ್ಲ. ರಾಮನಿಲ್ಲದೆ ನಾನೂ ಇಲ್ಲ. ರಾಮಚಂದ್ರನೂ ನಾನೂ
ಇರದ ತಾಣದಲ್ಲಿ ಭರತನೂ ಇರಲಾರನು. ನೀನು ಭರತನ ತಾಯಿ, ನನ್ನ
ಧರ್ಮಪತ್ನಿ, ಅಶ್ವಪತಿರಾಜನ ಮಗಳು-ಹೀಗಿದ್ದು ನಮ್ಮ ಮೂವರ ಹೆಸರಿಗೂ
ಮಸಿ ಬಳಿಯುವೆಯಾ ? ನೀನು ಈ ವರೆಗೆ ಇಂಥ ಚುಚ್ಚು ಮಾತುಗಳನ್ನಾಡಿ-
ದವಳಲ್ಲ ! ಇಂದೇನಾಯಿತು ನಿನಗೆ ? ನಿನ್ನ ಎಲ್ಲ ಗುಣಗಳೂ ಈ ಒಂದು
ಮುಳ್ಳಾತಿನ ಅಪರಾಧಕ್ಕೆ ಸಾಟಿಯಾಗಲಾರವು.
೪೫
ಲಾರ.
ಎಲ್ಲರಿಗೂ ಪ್ರಿಯನಾದ, ಗುಣಭರಿತನೂ ಹುಜು ಸ್ವಭಾವದವನೂ
ಆದ ರಾಮಚಂದ್ರನನ್ನು ಯಾವ ಪಾತಕಿಯ ಕಿಚ್ಚಿನ ಕಣ್ಣಿನಿಂದ ನೋಡ-
ಇಂದೇನು ನಿನಗೆ ಗರ ಬಡಿದಿದೆ ? ನನಗೆ ರಾಮನೂ ಭರತನೂ
ಇಬ್ಬರೂ ಒಂದೇ ಎಂದು ಈ ಮೊದಲು ಗಳಸುತ್ತಿದ್ದೆಯಲ್ಲ. ಅಂಥ ರಾಮನನ್ನು
ನಿನ್ನ ಶುಶೂಷೆಯಲ್ಲಿ ಭರತನಿಗಿಂತಲೂ ಮೇಲುಗೈಯನ್ನಿಸಿದ ರಾಮಚಂದ್ರನನ್ನು
ಕಾಡಿಗಟ್ಟಲು ನಿನಗೆ ಮನಸ್ಸು ಬರುವುದೆ ? ನಿರ್ದೋಷಿಯಾದ ರಾಮಚಂದ್ರನಿಗೆ
* ಕಾಡಿಗೆ ಹೋಗು " ಎಂದು ಯಾವ ಬಾಯಿಂದ ಹೇಳಲಿ ? ಹೊಸ ಹರೆಯ-
ದಲ್ಲೇ ಗಂಡನಿಂದ ಅಗಲಿಸಿ ಪಾಪ, ಆ ಸೀತೆಗಾದರೂ ಯಾವ ಮೋರೆ
ತೋರಿಸುವುದು ?
- ನಮ್ಮ ರಾಷ್ಟ್ರದ ಜನಕ್ಕೆ ನಿನ್ನ ಕುರಿತು ಒಳ್ಳೆಯ ಗೌರವದ ಭಾವನೆ
ಯಿದೆ. ಈ ಕುವರ್ತನೆಯಿಂದ ಆ ಗೌರವವನ್ನು ಕಳೆದುಕೊಳ್ಳಬೇಡ. ಈ
ವರಗಳನ್ನುಳಿದು ಇನ್ನೇನಾದರೂ ಕೇಳು. ಆದರೆ ಇಂಥ ಮಾತನ್ನು ಮಾತ್ರ
ಆಡಬೇಡ. ಇರೋ ಮುಪ್ಪಡರಿದ ಈ ತಲೆಯನ್ನು ಬಗ್ಗಿ ಬೇಡಿಕೊಳ್ಳುತ್ತಿ-
ದೇನೆ. ನಿನ್ನ ಪ್ರಿಯಕರನ ಈ ಕರುಣಾವಸ್ಥೆಯನ್ನು ಕಂಡಾದರೂ ನಿನ್ನ
ಮನಸ್ಸು ಕರಗದೆ ? "
ಮಹಾರಾಜ ಭೂಮಿಯಲ್ಲಿ ಬಿದ್ದು ಹಲುಬುತ್ತಿದ್ದಾನೆ. ಆದರೆ ಮಂಥರೆ
ಅರೆದ ಮದ್ದು ಕೈಕೇಯಿಯಲ್ಲಿ ಇನ್ನೂ ಪರಿಣಾಮಕಾರಿಯಾಗಿತ್ತು ! ಅವಳು
ಸೆಟೆದುಕೊಂಡೇ ಉತ್ತರಿಸಿದಳು:
" ನೀನು ಈ ವರಗಳನ್ನು ಕೊಡದಿದ್ದರೆ ನನ್ನದೇನೂ ಅಭ್ಯಂತರವಿಲ್ಲ.
ಆದರೆ ಮಹಾರಾಜ, ಸ್ವಲ್ಪ ಚಿಂತಿಸು, ನಿನ್ನ ಸತ್ಯಸಂಧತೆಗೆ ಏನು ಬೆಲೆ ಬಂದ
ಹಾಗಾಯಿತು ? ಸತ್ಯ ಬಾಹಿರವಾದ ನಿನ್ನ ಯಶಸ್ಸು - ನಿನ್ನ ಧಾರ್ಮಿಕತೆ