This page has not been fully proofread.

ಮಿಂಚಿನಬಳ್ಳಿ
 
ನನ್ನ ಮೇಲೆ ಸಂತೋಷಗೊಂಡು ಎರಡು ವರಗಳನ್ನೇವುದಾಗಿ ನುಡಿದಿದ್ದೆ.
ನೆನಪಿದೆಯೆ ? ಅವುಗಳನ್ನು ಕೇಳಬೇಕಾದ ಕಾಲ ಈಗ ಬಂದೊದಗಿದೆ. "
 
ಬೇಡ ಬಾರಿಸಿದ ಗೋರಿಗೆ, ಮರುಳಾದ ಹುಲ್ಲೆಯಂತೆ ರಾಜ ಈ
ಮಾತುಗಳಿಗೆ ಮಾರುಹೋದ !
 
" ಓ, ಇಷ್ಟು ಕೇಳಲು ಇಷ್ಟೊಂದು ಮುನಿಸಿನ ಪೀಠಿಕೆಯೆ ? ಬೇಕಾದ
ವರಗಳನ್ನು ಕೇಳು. ಅದಕ್ಕೇನಂತೆ ? ನಾನು ಇಲ್ಲವೆಂದೆನೆ ? ಛೇ, ರಘು-ಕುಲ
ದಲ್ಲಿ ಹುಟ್ಟಿದ ಈ ಮೈ, ಸುಳ್ಳನ್ನು ಸಹಿಸುವುದಿಲ್ಲ. ಖಂಡಿತವಾಗಿ ನಿನ್ನ ಬೇಡಿಕೆ
ಯನ್ನು ಪೂರಯಿಸುತ್ತೇನೆ. ಇಲ್ಲವಾದರೆ ನನಗೆ ಹರಣಕ್ಕಿಂತಲೂ ಹೆಚ್ಚು
ಪ್ರಿಯನಾದ ನನ್ನ ಕಂದ ರಾಮಚಂದ್ರನ ಆಣೆಯಿದೆ ! »
 
ರಾಜನ ದೃಢವಾಣಿಯನ್ನು ಕೇಳಿ ರಾಣಿಯ ಕಣ್ಣರಳಿತು. ಜಗತ್ತಿನ
ಮಂಗಲಕ್ಕೆ ಕೊಡಲಿಯೇಟಿನಂತಿರುವ ವಾಗ್ವಜ್ರವನ್ನು ಮೆಲ್ಲನೆ ಅವನೆಡೆಗೆ
 
ಎಸೆದಳು.
 
(6
 
* ಮಹಾರಾಜ, ಧರ್ಮದೇವತೆಗಳು ನಿನ್ನ ಪ್ರತಿಜ್ಞೆಗೆ ಸಾಕ್ಷಿಪುರುಷರಾಗಿ
ರಲಿ, ನಿನಗೆ ರಾಮನ ಮೇಲೆ ನಿಜವಾದ ಪ್ರೀತಿಯಿರುವುದಾದರೆ ನನ್ನ ಎರಡು
ಬೇಡಿಕೆಗಳನ್ನು ಪೂರಯಿಸಿಕೊಡು, ನಾನು ಕೇಳಬೇಕಾದ ಮಾತು ಇಷ್ಟೆ.
ಊರನ್ನು ಸಿಂಗರಿಸಿಯಂತೂ ಆಯಿತು. ಈ ಸಿಂಗಾರ ಭರತನ ಅಭಿಷೇಕಕ್ಕಾಗಿ
ಉಪಯೋಗಿಸಲ್ಪಡಲಿ. ಭರತನೇ ಯುವರಾಜನಾಗಲಿ, ಎರಡನೆಯದಾಗಿ
ಹದಿನಾಲ್ಕು ವರ್ಷಗಳ ಕಾಲ ರಾಮ ವನವಾಸವನ್ನನುಭವಿಸಲಿ.
 
ಮಾತಿನ ಕೂರ್ಗಣೆ ನಾಟಿದುದೇ ತಡ- ಮಹಾರಾಜ ಬುಡ ತರಿದ ಮರ
ದಂತೆ ಭೂಮಿಯ ಮೇಲೊರಗಿದ ! ಮಂಥರೆ, ಕೈಕೇಯಿಯೆಂಬ ಬಿಲ್ಲಿನಿಂದ
ಹೂಡಿದ ಈ ಮುಳ್ಳಾತಿನ ಬಾಣ ದೈತ್ಯರ ಬಾಣಗಳಿಂದಲೂ ಗಾಸಿಗೊಳದ
ರಾಜನನ್ನು ಧೃತಿಗೆಡಿಸಿತು ! ದುಃಖ ಉಮ್ಮಳಿಸುತಿತ್ತು. ಮುನಿಸಿನಿಂದ
ಕಣ್ಣೀರು ಕುದಿಯುತಿತ್ತು. ಹೇಗೋ ಸಾವರಿಸಿಕೊಂಡ ಮಹಾರಾಜ ನಿಡಿದಾದ
ನಿಟ್ಟುಸಿರೊಂದನ್ನೆಳೆದು ರಾಣಿಯೆಡೆಗೆ ತಿರುಗಿ ನುಡಿದನು.
 
* ಓ ತಿಳಿಗೇಡಿ, ಇದು ಬುದ್ಧಿವಂತಿಗೆಯ ಮಾತೆಂದು ಬಗೆದಿರುವೆಯಾ ?
ಅಯ್ಯೋ ಮಂಕೆ, ನಾಟಕದ ತಾರೆಯರಂತೆ ಈ ಕೃತ್ರಿಮ ಅಭಿನಯದಿಂದ
ನನ್ನನ್ನು ವಂಚಿಸಿದೆಯಾ? ಈ ಮನೆಯಿಂದ ರಾಮಚಂದ್ರನನ್ನು, ಈ ದೇಹ
ದಿಂದ ನನ್ನನ್ನು, ನಿನ್ನ ಸ್ನೇಹದಿಂದ ಭರತನನ್ನು ತೊಲಗಿಸಿ ಜಗತ್ತನ್ನು
 
39