This page has been fully proofread once and needs a second look.

ಸಂಗ್ರಹರಾಮಾಯಣ
 
ಮಂಥರೆಯ ಬುದ್ಧಿಯ ಚಳಕವನ್ನು ಕಂಡು ಕೈಕೇಯಿ ಅಚ್ಚರಿಗೊಂಡು,
ಅವಳನ್ನು ಅಪ್ಪಿ ಕೊಂಡಾಡಿದಳು. ತನ್ನ ಕಿವಿಯೋಲೆಯನ್ನೆ ಅವಳಿಗೆ ಉಡುಗರೆ
ಯಾಗಿತ್ತಳು ! ಹೀಗೆ ಅರಮನೆಯ ಒಬ್ಬ ದೂತಿಯಿಂದ ರಾಮಾಯಣದ ಇತಿ
ಹಾಸವೇ ಬದ- ಲಾಯಿತು ! ಟ್ಟಾಭಿಷೇಕದಿಂದ ಕಾಡಿಗೆ ತಿರುಗಿತು !
 

 
ಮಂಥರೆಯ ಮಾತಿನಂತೆ ಕೈಕೇಯಿ ಮುನಿಸಿನ ಮನೆಯಲ್ಲಿ ಹೋಗಿ
 
ಮಲಗಿಕೊಂಡಳು.
 

 
ಇತ್ತ ರಾಜ ಅಭಿಷೇಕದ ಸಿದ್ಧತೆಯಲ್ಲಿದ್ದ. ಎಲ್ಲ ವ್ಯವಸ್ಥೆಯೂ ನಡೆದ
ಮೇಲೆ ಕೈಕೇಯಿಗೂ ಈ ಸಂತಸದ ಸುದ್ದಿಯನ್ನು ತಿಳಿಸಿ ಮುಂಡಾಡಬೇಕು

ಎಂದು ಅವಳ ಅಂತಃಪುರದೆಡೆಗೆ ನಡೆದನು. ರತ್ನ- ದೀಪಗಳಿಂದ ಬೆಳಗುತ್ತಿರುವ,
ಸುಸಜ್ಜಿತವಾದ ಸೆಟ್ಟೆವಜ್ಜೆ- ಮನೆಯಲ್ಲಿ ರಾಣಿಯ ಸುಳಿವು ಕಂಡುಬರಲಿಲ್ಲ. ಈ ನನ್ನ
' ನನ್ನ ಮುದ್ದು ಮಡದಿಯೆಲ್ಲಿ ?' ಎಂದು ರಾಜ ಸಂಭ್ರಾಂತನಾದ. ಅವಳನ್ನರಸುತ್ತಾ
ಮುನಿಸಿನ ಮನೆಗೆ ಬಂದಾಗ- ಬರಿನೆಲದಲ್ಲಿ ಮಲಗಿದ್ದ ತನ್ನ ಮಾನಿನಿ ಮಡದಿ
ಯನ್ನು ಕಂಡ
 
.
 
ಅವಳ ದುರಾಲೋಚನೆಗಳ ಕಲ್ಪನೆಯೂ ಇರದ ಮಹಾರಾಜ, ಅವಳೊಡನೆ
ಲಲ್ಲೆ ಯಾಡತೊಡಗಿದನು ಪಾ- ದನು- ಹಾವನ್ನು ಹೂಮಾಲೆಯೆಂದು ನಂಬಿ ಮೈಗೆ

ತೊಟ್ಟುಕೊಳ್ಳುವಂತೆ !
 

 
" ಓ ನನ್ನ ಅರಳ್ಗಣ್ಣಿನ ಸುಂದರಿ, ದುಗುಡವನ್ನು ಬಿಡು. ನಿನ್ನನ್ನು
ಮೋಹಿಸಿ ಬಂದಿರುವ ನನ್ನೊಡನೆ ಮಾತನಾಡು. ನಿನಗೆ ಯಾರಮೇಲೆ ಮುನಿಸು,
ಅದ
ಅದ- ನ್ನಾದರೂ ಹೇಳು. ಈ ಭೂಮಂಡಲದ ಯಾವ ಮೂಲೆಯಲ್ಲಿಯೇ ಇರಲಿ-
ಆ ಪ್ರಾಣಿ ಹುಟ್ಟಿಯೇ ಇಲ್ಲ ಎಂದು ಮಾಡುವ ಭಾರ ನನ್ನ ಮೇಲಿರಲಿ,

ಓ ತೆಳುಮೈಯವಳೆ, ನೀನು ಬಯಸಿದ್ದನ್ನು ಕೊಡ- ಬಲ್ಲೆ. ಒಮ್ಮೆ ಎದ್ದು ನಸು
ನಗೆಯ ಕಳೆಯನ್ನು ಬೀರಲಾರೆಯಾ ? "
 
.
 
೪೩
 

 
ದಶರಥನ ಮಾತಿಗೆ ಕೈಕೇಯಿ ನಯವಾಗಿ ಉತ್ತರಿಸಿದಳು;
 

 
"
ಧರ್ಮಜ್ಞನಾದ ಮಹಾರಾಜ, ಆಡಿದ ಮಾತನ್ನು ತಪ್ಪದೆ ನಡೆಸುವುದು
ನಿನ್ನ ಧರ್ಮವೆ ತಾನೆ ? ಹಿಂದೆ ದೇವ ದಾನವರ ಯುದ್ಧದ ಕಾಲದಲ್ಲಿ ರಾತ್ರಿಯ
ಕಾಲ ದೈತ್ಯರಿಂದ ರಕ್ಷಿಸಿದವಳು ನಾನು. ಒಬ್ಬ ಬ್ರಾಹ್ಮಣನು ಉಪದೇಶಿಸಿದ
ಮಂತ್ರದ ಬಲದಿಂದ ಅದು ನನಗೆ ಸಾಧ್ಯವಾಯಿತು ಅಲ್ಲವೆ ? ಆಗ ನೀನು
 
66