This page has not been fully proofread.

ಸಂಗ್ರಹರಾಮಾಯಣ
 
ಮಂಥರೆಯ ಬುದ್ಧಿಯ ಚಳಕವನ್ನು ಕಂಡು ಕೈಕೇಯಿ ಅಚ್ಚರಿಗೊಂಡು,
ಅವಳನ್ನು ಅಪ್ಪಿ ಕೊಂಡಾಡಿದಳು. ತನ್ನ ಕಿವಿಯೋಲೆಯನ್ನೆ ಅವಳಿಗೆ ಉಡುಗರೆ
ಯಾಗಿತ್ತಳು ! ಹೀಗೆ ಅರಮನೆಯ ಒಬ್ಬ ದೂತಿಯಿಂದ ರಾಮಾಯಣದ ಇತಿ
ಹಾಸವೇ ಬದಲಾಯಿತು ! ಸಟ್ಟಾಭಿಷೇಕದಿಂದ ಕಾಡಿಗೆ ತಿರುಗಿತು !
 
ಮಂಥರೆಯ ಮಾತಿನಂತೆ ಕೈಕೇಯಿ ಮುನಿಸಿನ ಮನೆಯಲ್ಲಿ ಹೋಗಿ
 
ಮಲಗಿಕೊಂಡಳು.
 
ಇತ್ತ ರಾಜ ಅಭಿಷೇಕದ ಸಿದ್ಧತೆಯಲ್ಲಿದ್ದ. ಎಲ್ಲ ವ್ಯವಸ್ಥೆಯೂ ನಡೆದ
ಮೇಲೆ ಕೈಕೇಯಿಗೂ ಈ ಸಂತಸದ ಸುದ್ದಿಯನ್ನು ತಿಳಿಸಿ ಮುಂಡಾಡಬೇಕು
ಎಂದು ಅವಳ ಅಂತಃಪುರದೆಡೆಗೆ ನಡೆದನು. ರತ್ನದೀಪಗಳಿಂದ ಬೆಳಗುತ್ತಿರುವ,
ಸುಸಜ್ಜಿತವಾದ ಸೆಟ್ಟೆವನೆಯಲ್ಲಿ ರಾಣಿಯ ಸುಳಿವು ಕಂಡುಬರಲಿಲ್ಲ. ಈ ನನ್ನ
ಮುದ್ದು ಮಡದಿಯೆಲ್ಲಿ ?' ಎಂದು ರಾಜ ಸಂಭ್ರಾಂತನಾದ. ಅವಳನ್ನರಸುತ್ತಾ
ಮುನಿಸಿನ ಮನೆಗೆ ಬಂದಾಗ ಬರಿನೆಲದಲ್ಲಿ ಮಲಗಿದ್ದ ತನ್ನ ಮಾನಿನಿ ಮಡದಿ
ಯನ್ನು ಕಂಡ
 
ಅವಳ ದುರಾಲೋಚನೆಗಳ ಕಲ್ಪನೆಯೂ ಇರದ ಮಹಾರಾಜ, ಅವಳೊಡನೆ
ಲಲ್ಲೆ ಯಾಡತೊಡಗಿದನು ಪಾವನ್ನು ಹೂಮಾಲೆಯೆಂದು ನಂಬಿ ಮೈಗೆ
ತೊಟ್ಟುಕೊಳ್ಳುವಂತೆ !
 
" ಓ ನನ್ನ ಅರಣ್ಣಿನ ಸುಂದರಿ, ದುಗುಡವನ್ನು ಬಿಡು. ನಿನ್ನನ್ನು
ಮೋಹಿಸಿ ಬಂದಿರುವ ನನ್ನೊಡನೆ ಮಾತನಾಡು. ನಿನಗೆ ಯಾರಮೇಲೆ ಮುನಿಸು,
ಅದನ್ನಾದರೂ ಹೇಳು. ಈ ಭೂಮಂಡಲದ ಯಾವ ಮೂಲೆಯಲ್ಲಿಯೇ ಇರಲಿ-
ಆ ಪ್ರಾಣಿ ಹುಟ್ಟಿಯೇ ಇಲ್ಲ ಎಂದು ಮಾಡುವ ಭಾರ ನನ್ನ ಮೇಲಿರಲಿ,
ಓ ತೆಳುಮೈಯವಳೆ, ನೀನು ಬಯಸಿದ್ದನ್ನು ಕೊಡಬಲ್ಲೆ. ಒಮ್ಮೆ ಎದ್ದು ನಸು
ನಗೆಯ ಕಳೆಯನ್ನು ಬೀರಲಾರೆಯಾ ? "
 
.
 
೪೩
 
ದಶರಥನ ಮಾತಿಗೆ ಕೈಕೇಯಿ ನಯವಾಗಿ ಉತ್ತರಿಸಿದಳು;
 
ಧರ್ಮಜ್ಞನಾದ ಮಹಾರಾಜ, ಆಡಿದ ಮಾತನ್ನು ತಪ್ಪದೆ ನಡೆಸುವುದು
ನಿನ್ನ ಧರ್ಮವೆ ತಾನೆ ? ಹಿಂದೆ ದೇವ ದಾನವರ ಯುದ್ಧದ ಕಾಲದಲ್ಲಿ ರಾತ್ರಿಯ
ಕಾಲ ದೈತ್ಯರಿಂದ ರಕ್ಷಿಸಿದವಳು ನಾನು. ಒಬ್ಬ ಬ್ರಾಹ್ಮಣನು ಉಪದೇಶಿಸಿದ
ಮಂತ್ರದ ಬಲದಿಂದ ಅದು ನನಗೆ ಸಾಧ್ಯವಾಯಿತು ಅಲ್ಲವೆ ? ಆಗ ನೀನು
 
66