This page has not been fully proofread.

ಮಿಂಚಿನಬಳ್ಳಿ
 
ಸವತಿಯ ಮಗ ಎಂಬುದನ್ನು ಮರೆಯಬೇಡ. ಅವನು ಅರಸನಾದರೆ- ನೀನು
ನಿನ್ನ ಮಕ್ಕಳು ಕೌಸಲ್ಯಯ ತೊತ್ತುಗಳಾಗಿ ಬಾಳಬೇಕಾದೀತು ! ಒಂದಿಷ್ಟಾ
ದರೂ ಮುಂದಿನ ಯೋಚನೆ ಬೇಡವೆ ?
 
ಯಾರ ಮನಸ್ಸು ಎಂಥದೋ ಯಾರಿಗೆ ಗೊತ್ತು ! ರಾಮನ ಅಂತರಂಗ
ವನ್ನು ಹೊಕ್ಕು ನೀನು ಕಂಡುಬಂದಿರುವೆಯಾ ? ಅವನಿಗೆ ರಾಜ್ಯವಾದರೆ ನಿನ್ನ
ಮಗನಿಗೆ ಇಲ್ಲಿ ಯಾವ ತಾಣವೂ ಇರಲಾರದು. ನೀನು ರಾಮನ ಮೇಲಿನ
ಮಮತೆಯಿಂದ ನಿನ್ನ ಕರುಳಿನ ಕಂದನ ಕೊರಳು ಕೊಯ್ಯುತ್ತಿದ್ದೀಯಾ! ಭರತನು
ರಾಜನಾಗದಿದ್ದರೆ ಭರತನ ಸಂತತಿಯೇ ರಾಜತ್ವದ ಐಸಿರಿಯನ್ನು ಕಳೆದು
ಕೊಂಡಂತೆ ! ಶಾಶ್ವತವಾಗಿ ರಾಮನ ಸಂತಾನಕ್ಕೆ ರಾಜಪದವಿಯನ್ನು ಧಾರೆ
ಯೆರೆದು ಕೊಟ್ಟಂತಾಯಿತು ! ಒಬ್ಬೊಬ್ಬರಿಗೆ ಒಂದೊಂದು ಕಾಲ.
ಸಿಕ್ಕಲ್ಲಿ ಪರರನ್ನು ತುಳಿದು ಅಧಿಕಾರವನ್ನು ಕಸಿವುದು, ಕ್ಷತ್ರಿಯರ ತಲೆಮಾರಿನ
ಧರ್ಮವಲ್ಲವೆ ?
 
ಎಡೆ
 
2
 
ಮಂಥರೆಯ ಮಾತಿನ ಮೋಡಿ ಕೈಕೇಯಿಯನ್ನು ಮರುಳುಗೊಳಿಸಿತು.
ಅವಳ ವಾಕ್ಸರಣಿಯಿಂದ ಪ್ರಭಾವಿತಳಾದ ರಾಣಿ ಖಿನ್ನಳಾಗಿ ನುಡಿದಳು.
 
CC
 
ನೀನನ್ನುವುದೂ ನಿಜ. ಆದರೆ ನನ್ನ ಮಗನಿಗೆ ರಾಜ್ಯ ದೊರಕುವ
ಬಗೆ ಹೇಗೆ ? ನೀತಿಮಂತನೂ ವಿನೀತನೂ ಆದ ರಾಮನನ್ನು ರಾಜ್ಯದಿಂದ ಹೊರ
ಗಟ್ಟುವುದಾದರೂ ಹೇಗೆ ? "
 
ತನ್ನ ಉಪನ್ಯಾಸದಿಂದ ರಾಣಿ ಸರಿದಾರಿಗೆ ಬರುತ್ತಿದ್ದಾಳೆ ಎಂದು
ಮಂಥರೆಗೆ ತುಸು ನೆಮ್ಮದಿಯಾಯಿತು. ಮುಂದಿನ ಸಿದ್ಧತೆಯನ್ನೆಲ್ಲ ಅವಳು
ಈ ಮೊದಲೆ ಅಣಿಗೊಳಿಸಿದ್ದಳು.
 
* ಓ ಮುಗುದೆ, ಮಹಾರಾಜ ಹಿಂದೆ ನಿನಗೆ ಮಾತುಕೊಟ್ಟಿದ್ದ ಎರಡು
ವರಗಳ ವಿಚಾರವನ್ನು ಮರೆತೇ ಬಿಟ್ಟಿಯಾ ? ನೀನು ಮರೆತರೂ ನಾನು ಮರೆಯ
ಲಾರೆ. ನೀನು ಆ ವರಗಳನ್ನು ಬಳಸಿಕೊಳ್ಳುವ ಕಾಲ ಈಗ ಬಂದಿದೆ. ಹದಿ
ನಾಲ್ಕು ವರ್ಷಗಳ ಕಾಲ ರಾಮ ಕಾಡಿನಲ್ಲಲೆಯಬೇಕು; ಭರತನಿಗೆ ಸಾಮ್ರಾಜ್ಯ
ದೊರೆಯಬೇಕು; ಹೀಗೆಂದು ವರಗಳನ್ನು ಕೇಳು, ಆ ಕೌಸಲ್ಯಯ ಮಗ
ಹದಿನಾಲ್ಕು ವರ್ಷ ಕಗ್ಗಾಡಿನಲ್ಲಿ ಅಲೆದು, ಬಳಲಿ ಮತ್ತೆ ಹಿಂದಿರುಗುವುದುಂಟೆ ?
ಕನಸಿನ ಮಾತು. ನಮ್ಮ ಭರತನಿಗೆಯೇ ತಡೆಯಿಲ್ಲದ ರಾಜ್ಯ ಖಂಡಿತ."