This page has been fully proofread once and needs a second look.

♥0
 
ಮಿಂಚಿನಬಳ್ಳಿ
 
ಇತಿಹಾಸ ಬದಲಿಸಿದ ಹೆಣ್ಣು
 
!
 
ಮಂಥರೆ !
 

 
ಮನಸಿನ ಮಾಲಿನ್ಯವನ್ನು ಬಿಂಬಿಸುವಂತೆ ಸೊಟ್ಟ ಮೈಯ ಹೆಂಗಸು !
ಕೇಕಯರಾಜನ ಅರಮನೆಯಲ್ಲಿ ಹುಟ್ಟಿ-ಕೈಕೇಯಿಯ ಹುಟ್ಟು ಸಂಗಾತಿಯಾಗಿ
ಬೆಳೆದು ಬಂದ ತೊತ್ತಿನ ಹೆಣ್ಣು ! ಕೈಕೇಯಿಯ ನೆಚ್ಚಿನ ದಾಸಿ ! ಒಂದು ತೆರ
ನಾದ ದೂರದ ಬಾಂಧವ್ಯವೂ ಅವರ- ಲ್ಲಿತ್ತು.
 

 
ಈ ಕೈಕೇಯಿಯ ನೆಚ್ಚಿನ ದಾದಿ ಮಂಥರೆ, ಅರಮನೆಯ ಅಟ್ಟವನ್ನೇರಿ
ಪಟ್ಟಣಿಗರ ಸಂಭ್ರಮ- ವನ್ನು ದಿಟ್ಟಿಸಿದಳು. ಊರಿನ ಜನರೆಲ್ಲ ಸಂತಸದಿಂದ

ಕುಣಿಯುತ್ತಿದ್ದಾರೆ! ಊರನ್ನೆಲ್ಲ ಪರಿಪರಿಯಾಗಿ ಸಿಂಗರಿಸಿದ್ದಾರೆ! ತೆರ ತೆರ
ನಾದ ವಾದ್ಯಗಳು ಮೊಳಗು- ತ್ತಿವೆ! ಈ ಸಂಭ್ರಮವೆಲ್ಲ ಏತಕ್ಕಾಗಿ ಎಂದೇ
ಆಕೆಗೆ ಅರಿವಾಗಲಿಲ್ಲ. ಬಳಿಯಲ್ಲಿ ಇದ್ದ ಇನ್ನೊಬ್ಬ ವೃದ್ಧಿಧೆಯನ್ನು ವಿಚಾರಿ-
ಸಿದಳು.
 

 
"ತಾಯಿ, ಇದಾವ ಉತ್ಸವಕ್ಕೆ ಈ ಜನ ಅಣಿ ಮಾಡು- ತ್ತಿದ್ದಾರೆ ! ಆ
ರಾಮನ ತಾಯಿ ಬ್ರಾಹ್ಮಣರಿಗೆ ಭಾರಿ ದಕ್ಷಿಣೆಗಳನ್ನು ಚೆಲ್ಲುತ್ತಿದ್ದಾಳಲ್ಲ-ಅದಾ
ದರೂ ಏತಕ್ಕಾಗಿ ?"
 

 
ಇದನ್ನು ಕೇಳಿದ ಮುದಿ ದಾದಿ, ಸಂತಸದಿಂದ ನಲಿದು ನುಡಿದಳು:
 
C
 

 
" ನಿನಗಿನ್ನೂ ತಿಳಿದಿಲ್ಲವೆ ಈ ಸಂತಸದ ಸುದ್ದಿ ? ನಾಳೆ ರಾಮಚಂದ್ರ
ನಿಗೆ ಅಭಿಷೇಕ ನಡೆಯಲಿದೆ. ಆ ಕುಮಾರ ನಮ್ಮ ಯುವರಾಜನಾಗಲಿದ್ದಾನೆ.

ಸಂತಸದ ಮಾತಲ್ಲವೆ ? ಹೋಗು ಮಗಳೆ, ಹೊಸ ಸೀರೆಯುಟ್ಟು, ಮೈತುಂಬ
ಬಂಗಾರ ತೊಟ್ಟು ಸಂತಸದ ಸಿಂಗಾರ ಮಾಡಿಕೊಳ್ಳಮ್ಮ."
 

 
ಸುದ್ದಿ ಯನ್ನು ಕೇಳಿ ಕಣ್ಣು ಕಿಡಿ ಕಾರಿತು. ಮಾಟಗಾರೆ ಮಂಥರೆ
ಕೋಲಿನಿಂದ ಹೊಡೆಸಿಕೊಂಡ ಹಾವಿ- ನಂತೆ ಬುಸುಗುಟ್ಟಿದಳು. ಮರಿಯನ್ನು
ಕಳೆದುಕೊಂಡ ಹುಲಿಯಂತೆ ಎಗರಾಡಿದಳು,
 

 
ಲಕ್ಷ್ಮೀಪತಿಯನ್ನು ಕಂಡರಾಗದ ಅಲಕ್ಷ್ಮಿಯಲ್ಲವೆ ಈ ಮಂಥರೆ !
ಬಾಲ್ಯದಲ್ಲಿ ರಾಮಚಂದ್ರ ಯಾವುದೋ ನೆಪದಿಂದ ಇವಳನ್ನು ಕಾಲಿಂದ
ಒದೆ- ದಿದ್ದನಂತೆ, ಈ ಕಪಟ ನಾಟಕ ಸೂತ್ರಧಾರಿ ಅಂದೇ ನಾಟಕಕ್ಕೆ ಪೀಠಿಕೆ
ಹಾಕಿದ್ದನಂತೆ! ಆ ಮುನಿಸು ಇಂದಿಗೂ ಅವಳಲ್ಲಿ ಮಾಸಿರಲಿಲ್ಲ, ನಿಟ್ಟುಸಿರು