2023-03-15 15:35:27 by ambuda-bot
This page has not been fully proofread.
♥0
ಮಿಂಚಿನಬಳ್ಳಿ
ಇತಿಹಾಸ ಬದಲಿಸಿದ ಹೆಣ್ಣು
ಮಂಥರೆ !
ಮನಸಿನ ಮಾಲಿನ್ಯವನ್ನು ಬಿಂಬಿಸುವಂತೆ ಸೊಟ್ಟ ಮೈಯ ಹೆಂಗಸು !
ಕೇಕಯರಾಜನ ಅರಮನೆಯಲ್ಲಿ ಹುಟ್ಟಿ-ಕೈಕೇಯಿಯ ಹುಟ್ಟು ಸಂಗಾತಿಯಾಗಿ
ಬೆಳೆದು ಬಂದ ತೊತ್ತಿನ ಹೆಣ್ಣು ! ಕೈಕೇಯಿಯ ನೆಚ್ಚಿನ ದಾಸಿ ! ಒಂದು ತೆರ
ನಾದ ದೂರದ ಬಾಂಧವ್ಯವೂ ಅವರಲ್ಲಿತ್ತು.
ಈ ಕೈಕೇಯಿಯ ನೆಚ್ಚಿನ ದಾದಿ ಮಂಥರೆ, ಅರಮನೆಯ ಅಟ್ಟವನ್ನೇರಿ
ಪಟ್ಟಣಿಗರ ಸಂಭ್ರಮವನ್ನು ದಿಟ್ಟಿಸಿದಳು. ಊರಿನ ಜನರೆಲ್ಲ ಸಂತಸದಿಂದ
ಕುಣಿಯುತ್ತಿದ್ದಾರೆ! ಊರನ್ನೆಲ್ಲ ಪರಿಪರಿಯಾಗಿ ಸಿಂಗರಿಸಿದ್ದಾರೆ! ತೆರ ತೆರ
ನಾದ ವಾದ್ಯಗಳು ಮೊಳಗುತ್ತಿವೆ! ಈ ಸಂಭ್ರಮವೆಲ್ಲ ಏತಕ್ಕಾಗಿ ಎಂದೇ
ಆಕೆಗೆ ಅರಿವಾಗಲಿಲ್ಲ. ಬಳಿಯಲ್ಲಿ ಇದ್ದ ಇನ್ನೊಬ್ಬ ವೃದ್ಧಿಯನ್ನು ವಿಚಾರಿ-
ಸಿದಳು.
"ತಾಯಿ, ಇದಾವ ಉತ್ಸವಕ್ಕೆ ಈ ಜನ ಅಣಿ ಮಾಡುತ್ತಿದ್ದಾರೆ ! ಆ
ರಾಮನ ತಾಯಿ ಬ್ರಾಹ್ಮಣರಿಗೆ ಭಾರಿ ದಕ್ಷಿಣೆಗಳನ್ನು ಚೆಲ್ಲುತ್ತಿದ್ದಾಳಲ್ಲ-ಅದಾ
ದರೂ ಏತಕ್ಕಾಗಿ ?"
ಇದನ್ನು ಕೇಳಿದ ಮುದಿ ದಾದಿ, ಸಂತಸದಿಂದ ನಲಿದು ನುಡಿದಳು:
C
" ನಿನಗಿನ್ನೂ ತಿಳಿದಿಲ್ಲವೆ ಈ ಸಂತಸದ ಸುದ್ದಿ ? ನಾಳೆ ರಾಮಚಂದ್ರ
ನಿಗೆ ಅಭಿಷೇಕ ನಡೆಯಲಿದೆ. ಆ ಕುಮಾರ ನಮ್ಮ ಯುವರಾಜನಾಗಲಿದ್ದಾನೆ.
ಸಂತಸದ ಮಾತಲ್ಲವೆ ? ಹೋಗು ಮಗಳೆ, ಹೊಸ ಸೀರೆಯುಟ್ಟು, ಮೈತುಂಬ
ಬಂಗಾರ ತೊಟ್ಟು ಸಂತಸದ ಸಿಂಗಾರ ಮಾಡಿಕೊಳ್ಳಮ್ಮ"
ಸುದ್ದಿ ಯನ್ನು ಕೇಳಿ ಕಣ್ಣು ಕಿಡಿ ಕಾರಿತು. ಮಾಟಗಾರೆ ಮಂಥರೆ
ಕೋಲಿನಿಂದ ಹೊಡೆಸಿಕೊಂಡ ಹಾವಿನಂತೆ ಬುಸುಗುಟ್ಟಿದಳು. ಮರಿಯನ್ನು
ಕಳೆದುಕೊಂಡ ಹುಲಿಯಂತೆ ಎಗರಾಡಿದಳು,
ಲಕ್ಷ್ಮೀಪತಿಯನ್ನು ಕಂಡರಾಗದ ಅಲಕ್ಷ್ಮಿಯಲ್ಲವೆ ಈ ಮಂಥರೆ !
ಬಾಲ್ಯದಲ್ಲಿ ರಾಮಚಂದ್ರ ಯಾವುದೋ ನೆಪದಿಂದ ಇವಳನ್ನು ಕಾಲಿಂದ
ಒದೆದಿದ್ದನಂತೆ, ಈ ಕಪಟ ನಾಟಕ ಸೂತ್ರಧಾರಿ ಅಂದೇ ನಾಟಕಕ್ಕೆ ಪೀಠಿಕೆ
ಹಾಕಿದ್ದನಂತೆ! ಆ ಮುನಿಸು ಇಂದಿಗೂ ಅವಳಲ್ಲಿ ಮಾಸಿರಲಿಲ್ಲ, ನಿಟ್ಟುಸಿರು