This page has not been fully proofread.

ಸಂಗ್ರಹರಾಮಾಯಣ
 
ತಂದೆಯ ಮಾತಿಗೆ ಒಪ್ಪಿಗೆಯನ್ನಿತ್ತು ನೇರವಾಗಿ ರಾಮಚಂದ್ರ ತನ್ನ
ತಾಯಿ ಕೌಸಲ್ಯಯ ಬಳಿಗೆ ಬಂದನು. ರಾಮನ ಅಭಿಷೇಕ ವಾರ್ತೆಯನ್ನು
ಕೇಳಿ ಸಂತಸಗೊಂಡ ಕೌಸಲ್ಯ ಸುಮಿತ್ರೆಯೊಡನೆ ಭಗವಾನ್ ನಾರಾಯಣನನ್ನು
ಪೂಜಿಸುತ್ತಿದ್ದಳು. ಜತೆಗಿದ್ದ ಲಕ್ಷ್ಮಣನೊಡನೆ ರಾಮ ತಾಯಂದಿರಿಗೆ ವಂದಿಸಿದ.
ಆನಂದದ ಕಂಬನಿಯನ್ನೊರೆಸಿಕೊಳ್ಳುತ್ತ ತಾಯಿ ಮಗನನ್ನು ಹರಸಿದಳು:
 
"ನನ್ನ ಚಿನ್ನ, ನಿನಗೆ ಮಂಗಳವಾಗಲಿ, ದೌರ್ಜನ್ಯವನ್ನು ತುಳಿದಟ್ಟ
ಸಜ್ಜನಿಕೆಯನ್ನು ಸಲಹು. ಜಗನ್ನಾಥನಾದ ನಿನ್ನ ಪಿನಲ್ಲಿ ಲೋಕ
ಪಥವನ್ನು ಕಾಣಲಿ."
 
ತಿಳಿ
 
ತಾಯಿಯ ಆಶೀರ್ವಾದವನ್ನು ಪಡೆದು ಲಕ್ಷ್ಮಣನನ್ನು ಬೀಳ್ಕೊಟ್ಟು-
ರಾಮಚಂದ್ರ ಸೀತೆಯೊಡನೆ ತನ್ನ ಅರಮನೆಯನ್ನು ಸೇರಿದನು.
 
ದಶರಥನ ನಿವೇದನೆಯಂತೆ ಪುರೋಹಿತರಾದ ವಸಿಷ್ಠ ಮಿಶ್ರರು ರಾಮ
ನಿದ್ದಲ್ಲಿಗೈತಂದರು. ಜಗದ್ಗುರುವಾದ ರಾಮಭದ್ರ ಗುರು ವಸಿಷ್ಠರನ್ನು ವಿನಯ
ಪೂರ್ವಕವಾಗಿ ಸತ್ಕರಿಸಿದನು. ಕುಲಗುರುಗಳು ಅಭಿಷೇಕ ದೀಕ್ಷೆಯನ್ನಿತ್ತರು.
ಪುರೋಹಿತರಿಗೆ ದಕ್ಷಿಣಾರೂಪವಾಗಿ ರಾಮಚಂದ್ರ ಹತ್ತು ಸಾವಿರ ಗೋವು
ಗಳನ್ನೂ ಬಹು ಆಭರಣಗಳನ್ನೂ ಸಮರ್ಪಿಸಿದನು.
 
ಅಂದು ರಾತ್ರಿ ಬ್ರಹ್ಮರ್ಷಿಗಳ ವಚನದಂತೆ ದೀಕ್ಷಿತನಾದ ರಾಮಚಂದ್ರ
ಸೀತೆಯೊಡನೆ ದರ್ಭತಲ್ಪದಲ್ಲಿ ಪವಡಿಸಿದನು.
 
ಊರಲ್ಲೆಲ್ಲ ಅಭಿಷೇಕದ ಸುದ್ದಿ ಹಬ್ಬಿತು. ಆಡುವ ಜನಕ್ಕೊಂದು
ಆಹಾರ; ಕೇಳುವ ಜನಕ್ಕೊಂದು ಸಂತಸ. ಎಲ್ಲೆಡೆಯೂ ಸಂಭ್ರಮ-ಸಡಗರ.
ಎಂದು ಬೆಳಗಾದೀತು ಎಂದು ಅಭಿಷಿಕ್ತರಾದ ಯುವರಾಜ ದಂಪತಿಗಳನ್ನು
ಕಂಡೇವು ಎಂದು ಎಲ್ಲರಿಗೂ ತವಕ, ಮಕ್ಕಳು, ಮುದುಕರು ಹೆಂಗಳೆಯರು
ಎಲ್ಲರ ಬಾಯಲ್ಲೂ ಒಂದೇ ಮಾತು. ಈ ಸಂಭ್ರಮದಲ್ಲಿ ಸಂತಸದಲ್ಲಿ ನಿದ್ದೆ
ಯಲ್ಲಿ ಸುಳಿಯಬೇಕು ? ಸಾರ್ವಭೌಮನ ಆಜ್ಞೆಯಂತೆ ಜನರು ಊರನ್ನೆಲ್ಲ
ಸಿಂಗರಿಸಿದರು. ಮನೆಮನೆಯನ್ನು ಹೂಮಾಲೆಗಳಿಂದ ಅಲಂಕರಿಸಿದರು.
ಬೀದಿಬೀದಿಗಳಲ್ಲಿ ತಳಿರು ತೋರಣದ ಸಾಲು. ರಾಷ್ಟ್ರಧ್ವಜಗಳೂ ಪತಾಕೆಗಳೂ
ಊರೆಲ್ಲ ತಲೆಯೆತ್ತಿ ನಿಂತಿದ್ದವು. ಅಯೋಧ್ಯೆಯೋ ಏನು ? ಭೂಮಂಡಲವೇ
ಏನು ? ಮೂರು ಲೋಕಗಳೂ ಈ ವಾರ್ತೆಯನ್ನು ಕೇಳಿ ಸಂತಸಗೊಂಡವು.
ಈ ಪ್ರಭು ರಾಮಚಂದ್ರ ಮೂರು ಲೋಕಗಳ ಅರಸನಲ್ಲವೆ?