This page has been fully proofread once and needs a second look.

ಮಿಂಚಿನಬಳ್ಳಿ
 
ಸಾಮಂತರಾಜರಿಂದ ಸುತ್ತುವರಿದು ಕುಳಿತಿದ್ದ ಮಹಾರಾಜನು ದೂರದಲ್ಲಿ
ಲೆ ಬರುತ್ತಿರುವ ತನ್ನ ಮಗನ ವರ್ಚಸ್ವಿ ಆಕೃತಿಯನ್ನು ಕಂಡು ಆನಂದಿತ- ನಾದನು.
ಹುಣ್ಣಿಮೆಯ ಚಂದಿರನಂಥ ಮೋರೆ. ಅದರಲ್ಲಿ ಸದಾ ಮಿನುಗುವ ನೈಜವಾದ
ಮುಗುಳಗೆಳ್ನಗೆ- ಯ ಕಳೆ, ಸಿಂಹದಂಥ ಮೈಕಟ್ಟು, ಸಲಗದಂತೆ ಗಂಭೀರವಾದ
ನಡೆ, ತಾವರೆಯಂತೆ ಅರಳಿದ ಕಣ್ಣು. ಇಂಥ ಸರ್ವಾಂಗಸುಂದರವಾದ ಮೂರ್ತಿ
ಯಾರನ್ನು ತಾನೆ ಮರುಳುಗೊಳಿಸಲಿಕ್ಕಿಲ್ಲ ?
 

 
ರಾಮಚಂದ್ರ ರಥದಿಂದಿಳಿದು ದಶರಥನ ಬಳಿ ಬಂದು ಅವನ ಕಾಲಿಗೆರಗಿ
ದನು. ಮಹಾರಾಜ ಮಣಿದ ಮಗನನ್ನು ಎತ್ತಿ ಬಿಗಿದಪ್ಪಿಕೊಂಡು, ಆನಂದಾಶ್ರು
ಗಳಿಂದ ಅಭಿ "ಷೇಕಿಸಿ, 'ಸಾರ್ವಭೌಮ- ನಾಗು ಕಂದ' ಎಂದು ಆಶೀರ್ವದಿಸಿದನು.

 
ತಂದೆಯ ಒಪ್ಪಿಗೆ ಪಡೆದು ಮಿಸುನಿಯ ಆಸನದಲ್ಲಿ ಕುಳಿತ ರಾಮಚಂದ್ರ,
ಉದಯಾದ್ರಿಯನ್ನೇರಿದ ದಿವಾಕರನಂತೆ ಕಂಡನು. ಮಹಾರಾಜನು ಮೆಲ್ಲನೆ

ಮಗನ ಬಳಿ ಸಾರಿ ತನ್ನ ಆಶೆಯನ್ನು ಹೊರಗೆಡಹಿ- ದನು:
 

 
" ನಿನ್ನನ್ನು ಯುವರಾಜಪದವಿಗೇರಿಸಬೇಕೆಂದು ನನ್ನಿಚ್ಛೆ, ಅದನ್ನು
ಅನುಮೋದಿಸುವೆಯಾ ಕಂದ ? ರಕ್ಷಣೆಯ ಭಾರವನ್ನು ಹೊರಬಲ್ಲ ನಿನ್ನಲ್ಲಿ

ಈ ಹೊರೆಯನ್ನಿಳಿಸಿ ಮುದುವಿನಿಂದ ದುರ್ಬಲನಾದ ನಾನು ವಿಶ್ರಾಂತಿಯ
ಯೋಚನೆಯನ್ನು ಮಾಡ- ಬೇಕಾಗಿದೆ."
 

 

 
ರಾಮಚಂದ್ರ 'ನಿಮ್ಮಿಚ್ಛೆಯೇ ನನ್ನಿಚ್ಛೆ' ಎಂದವನೆ ತನ್ನರಮನೆಗೆ ತೆರಳಿದ.
ರಾಮನನ್ನು ಕಳುಹಿಕೊಟ್ಟು ಅಂತಃಪುರಕ್ಕೆ ತೆರಳಿದ ಮಹಾರಾಜನು ದಾರಿಯಲ್ಲಿ

ಅಪಶಕುನಗಳನ್ನು ಕಂಡು ದಿಗಿಲುಗೊಂಡನು.
ಏಕೋ ಮನಸ್ಸಿಗೆ ನೆಮ್ಮದಿ
ಇಲ್ಲದಂತಾಯಿತು. ಕೂಡಲೆ ಮತ್ತೊಮ್ಮೆ ರಾಮಚಂದ್ರನನ್ನು ಕರೆಸಿ ಏಕಾಂತ
ದಲ್ಲಿ ಹೀಗೆಂದು ನುಡಿದನು:
 

 
"ರಾಮಭದ್ರ, ಧರ್ಮಕ್ಕೆ ಚ್ಯುತಿ ಬಾರದಂತೆ ಈ ವರೆಗೆ ರಾಜ್ಯವನ್ನಾ
ಳುತ್ತ ಬಂದೆ. ಈಗ ಕೊನೆಯ ಗಳಿಗೆಯಲ್ಲಿ ನನ್ನ ಈ ಕೈಯಿಂದಲೇ ನಿನಗೆ
ಅಭಿಷೇಕ ಮಾಡುವ ಭಾಗ್ಯ ನನಗೆ ಇಲ್ಲವೋ ಎಂಬ ಸಂಶಯ ಮೂಡುತ್ತಿದೆ.
ಈ ಅಮಂಗಲ ಶಕುನಗಳು ನನಗೆ ಸಾವಿನ ಬಾಗಿಲನ್ನು ತೋರುತ್ತಿವೆ.
ನಾರಾಯಣನ ಕರುಣೆಯಿಂದ ಅಂತರಾಯಗಳೆಲ್ಲ ಪರಿಹಾರ- ವಾಗಲಿ. ಏಕೋ
ಮನಸ್ಸು ತಳಮಳಿಸುತ್ತಿದೆ. ನನಗಾಗಿ ನೀವು ದಂಪತಿಗಳು ಉಪವಾಸದೀಕ್ಷಿತ
ರಾಗಬೇಕು ಕಂದ."