This page has not been fully proofread.

ಮಿಂಚಿನಬಳ್ಳಿ
 
ಸಾಮಂತರಾಜರಿಂದ ಸುತ್ತುವದು ಕುಳಿತಿದ್ದ ಮಹಾರಾಜನು ದೂರದಲ್ಲಿ
ಬರುತ್ತಿರುವ ತನ್ನ ಮಗನ ವರ್ಚಸ್ವಿ ಆಕೃತಿಯನ್ನು ಕಂಡು ಆನಂದಿತನಾದನು.
ಹುಣ್ಣಿಮೆಯ ಚಂದಿರನಂಥ ಮೋರೆ. ಅದರಲ್ಲಿ ಸದಾ ಮಿನುಗುವ ನೈಜವಾದ
ಮುಗುಳಗೆಯ ಕಳೆ, ಸಿಂಹದಂಥ ಮೈಕಟ್ಟು, ಸಲಗದಂತೆ ಗಂಭೀರವಾದ
ನಡೆ, ತಾವರೆಯಂತೆ ಅರಳಿದ ಕಣ್ಣು. ಇಂಥ ಸರ್ವಾಂಗಸುಂದರವಾದ ಮೂರ್ತಿ
ಯಾರನ್ನು ತಾನೆ ಮರುಳುಗೊಳಿಸಲಿಕ್ಕಿಲ್ಲ ?
 
ರಾಮಚಂದ್ರ ರಥದಿಂದಿಳಿದು ದಶರಥನ ಬಳಿ ಬಂದು ಅವನ ಕಾಲಿಗೆರಗಿ
ದನು. ಮಹಾರಾಜ ಮಣಿದ ಮಗನನ್ನು ಎತ್ತಿ ಬಿಗಿದಪ್ಪಿಕೊಂಡು, ಆನಂದಾಶ್ರು
ಗಳಿಂದ ಅಭಿ "ಸಾರ್ವಭೌಮನಾಗು ಕಂದ' ಎಂದು ಆಶೀರ್ವದಿಸಿದನು.
ತಂದೆಯ ಒಪ್ಪಿಗೆ ಪಡೆದು ಮಿಸುನಿಯ ಆಸನದಲ್ಲಿ ಕುಳಿತ ರಾಮಚಂದ್ರ,
ಉದಯಾದ್ರಿಯನ್ನೇರಿದ ದಿವಾಕರನಂತೆ ಕಂಡನು. ಮಹಾರಾಜನು ಮೆಲ್ಲನೆ
ಮಗನ ಬಳಿಸಾರಿ ತನ್ನ ಆಶೆಯನ್ನು ಹೊರಗೆಡಹಿದನು:
 
" ನಿನ್ನನ್ನು ಯುವರಾಜಪದವಿಗೇರಿಸಬೇಕೆಂದು ನನ್ನಿಚ್ಛೆ, ಅದನ್ನು
ಅನುಮೋದಿಸುವೆಯಾ ಕಂದ ? ರಕ್ಷಣೆಯ ಭಾರವನ್ನು ಹೊರಬಲ್ಲ ನಿನ್ನಲ್ಲಿ
ಈ ಹೊರೆಯನ್ನಿಳಿಸಿ ಮುದುವಿನಿಂದ ದುರ್ಬಲನಾದ ನಾನು ವಿಶ್ರಾಂತಿಯ
ಯೋಚನೆಯನ್ನು ಮಾಡಬೇಕಾಗಿದೆ."
 

 
ರಾಮಚಂದ್ರ ನಿಮ್ಮಿಚ್ಛೆಯೇ ನನ್ನಿಚ್ಛೆ' ಎಂದವನೆ ತನ್ನರಮನೆಗೆ ತೆರಳಿದ.
ರಾಮನನ್ನು ಕಳುಹಿಕೊಟ್ಟು ಅಂತಃಪುರಕ್ಕೆ ತೆರಳಿದ ಮಹಾರಾಜನು ದಾರಿಯಲ್ಲಿ
ಅಪಶಕುನಗಳನ್ನು ಕಂಡು ದಿಗಿಲುಗೊಂಡನು. ಏಕೋ ಮನಸ್ಸಿಗೆ ನೆಮ್ಮದಿ
ಇಲ್ಲದಂತಾಯಿತು. ಕೂಡಲೆ ಮತ್ತೊಮ್ಮೆ ರಾಮಚಂದ್ರನನ್ನು ಕರೆಸಿ ಏಕಾಂತ
ದಲ್ಲಿ ಹೀಗೆಂದು ನುಡಿದನು:
 
"ರಾಮಭದ್ರ, ಧರ್ಮಕ್ಕೆ ಚ್ಯುತಿ ಬಾರದಂತೆ ಈ ವರೆಗೆ ರಾಜ್ಯವನ್ನಾ
ಳುತ್ತ ಬಂದೆ. ಈಗ ಕೊನೆಯ ಗಳಿಗೆಯಲ್ಲಿ ನನ್ನ ಈ ಕೈಯಿಂದಲೇ ನಿನಗೆ
ಅಭಿಷೇಕ ಮಾಡುವ ಭಾಗ್ಯ ನನಗೆ ಇಲ್ಲವೋ ಎಂಬ ಸಂಶಯ ಮೂಡುತ್ತಿದೆ.
ಈ ಅಮಂಗಲ ಶಕುನಗಳು ನನಗೆ ಸಾವಿನ ಬಾಗಿಲನ್ನು ತೋರುತ್ತಿವೆ.
ನಾರಾಯಣನ ಕರುಣೆಯಿಂದ ಅಂತರಾಯಗಳೆಲ್ಲ ಪರಿಹಾರವಾಗಲಿ. ಏಕೋ
ಮನಸ್ಸು ತಳಮಳಿಸುತ್ತಿದೆ. ನನಗಾಗಿ ನೀವು ದಂಪತಿಗಳು ಉಪವಾಸದೀಕ್ಷಿತ
ರಾಗಬೇಕು ಕಂದ."