This page has been fully proofread once and needs a second look.

ಸಂಗ್ರಹರಾಮಾಯಣ
 
ನಲ್ಲೂ ದೋಷವನ್ನು ಕಾಣುವ ಕಣ್ಣಿನಲ್ಲಿ ಕುದುರೆಗೆ ಕೋಡು ಮೂಡೀತು.
ಹೀಗೆ ರಾಮಚಂದ್ರನು ಸರ್ವ ಪ್ರಕಾರದಿಂದಲೂ ಪರಿಪೂರ್ಣನಿದ್ದಾನೆ. ಯುವ
-
ರಾಜನಾಗಲು ಅರ್ಹನಿದ್ದಾನೆ. ಸಾಗರಕ್ಕೆ ಬೊಗಸೆಯ ಅರ್ಥ್ಯವಘ್ಯವನ್ನೀವಂತೆ
-ಸೂರ್ಯನಿಗೆ ಸೊಡರನ್ನೆತ್ತಿ ಪೂಜೆ ಸಲ್ಲಿಸುವಂತೆ-ಈ ಜಗತ್ಪತಿಗೆ, ಈ ಗುಣ
ಧಾಮ- ನಿಗೆ ರಾಷ್ಟ್ರದ ಯುವರಾಜ ಪದವಿಯನ್ನರ್ಪಿಸು. ರಾಷ್ಟ್ರದ ಜನರ ಬಯಕೆ
ಈಡೇರಲಿ."
 
೩೭
 

 
ಹೀಗೆ ವಸಿಷ್ಠಾದಿಗಳಿಂದ ಪ್ರೇರಿತನಾದ ಮಹಾರಾಜ- ನು ರಾಮನಿಗೆ
ಯುವರಾಜ ಪದವಿಯನ್ನೀಯುವು- ದಾಗಿ ಸಭೆಯಲ್ಲಿ ಘೋಷಿಸಿದನು.
 

 
ಪೌರರು ನಲಿದಾಡಿದರು
 

 
ರಾಜನ ಘೋಷಣೆಯನ್ನು ಕೇಳಿದ ಸಭೆಗೆ ಸಭೆಯೇ ಜಯಜಯಕಾರ
ವನ್ನು ಮಾಡಿತು. ತನ್ನ ತನಯನ ಮೇಲೆ ಪ್ರಜೆಗಳಿಗಿರುವ ಒಲವನ್ನು ಕಂಡು

ಮಹಾರಾಜನ ಕಣ್ಣುಗಳು ಹನಿಗೂಡಿದವು. ಮುಂದಿನ ಸಿದ್ಧತೆಗಾಗಿ ರಾಜ
ವಸಿಷ್ಠಾದಿಗಳನ್ನು ವಿನಂತಿಸಿಕೊಂಡ:
 
66
 

 
"
ಈ ಚೈತ್ರಮಾಸ ಅಭಿಷೇಕಕ್ಕೆ ಪ್ರಶಸ್ತವಾದ ಕಾಲ. ಪ್ರಕೃತಿದೇವಿ
ಹೂ-ತಳಿರುಗಳಿಂದ ರಾಮನ ಅಭಿಷೇಕೋತ್ಸವಕ್ಕೆಂದೇ ಸಿಂಗರಿಸಿಕೊಂಡಂತಿದೆ.

ನಾಳೆಯ ದಿನವೇ ಅಭಿಷೇಕದ ಕಾವ್ರ್ಯವನ್ನು ಪೂರಯಿಸುವುದು ಚೆನ್ನು, ಆದ
ಅದಕ್ಕಾಗಿ ಎಲ್ಲ ಅಭಿಷೇಕ ಸಾಮಗ್ರಿಗಳನ್ನು ತರಿಸಿಕೊಳ್ಳಿ. "
 

 
ದಶರಥನ ಆಶಯವನ್ನರಿತ ವಸಿಷ್ಠ ಮಿತ್ಶ್ರರು ಕೂಡಲೇ ಅಭಿಷೇಕ
ಸಾಮಗ್ರಿಗಳನ್ನು ಬರಿಸಿ- ಕೊಂಡರು. ಹೊಸ ತರದ ಬಟ್ಟೆ-ಬರೆಗಳು ಮುತ್ತು-

ರತ್ನಗಳು ಬಹು ಬಗೆಯ ಒಡವೆ-ತೊಡವೆಗಳು ಬಂಗಾರದ ಕೊಡಗಳಲ್ಲಿ
ತುಂಬಿದ ನೂರಾರು ತೀರ್ಥೋದಕಗಳು ಮುಂತಾದ ಎಲ್ಲ ಸಾಮಗ್ರಿಗಳೂ

ಚತುರರಾದ ದೂತರಿಂದ ಅಣಿಗೊಳಿಸಲ್ಪಟ್ಟವು.
 

 
ಮಹಾರಾಜ, ದಶರಥನು-ರಾಮನನ್ನು ತನ್ನ ಬಳಿ ಕರತರುವಂತೆ
ಸುಮಂತ್ರವನ್ನು ಆಜ್ಞಾಪಿಸಿದನು. ಸುಮಂತ್ರನು ರಥವೇರಿ ರಾಮನ ಬಳಿ
ಸಾರಿ ವಿನಯದಿಂದ ಮಹಾರಾಜನ ಆಣತಿಯನ್ನು ತಿಳಿಸುವುದೇ ತಡ-
ರಾಮಚಂದ್ರ ರಥವೇರಿ ತಂದೆಯ ಬಳಿಗೆ ನಡೆದನು.