2023-03-15 15:35:26 by ambuda-bot
This page has not been fully proofread.
ಸಂಗ್ರಹರಾಮಾಯಣ
ನಲ್ಲೂ ದೋಷವನ್ನು ಕಾಣುವ ಕಣ್ಣಿನಲ್ಲಿ ಕುದುರೆಗೆ ಕೋಡು ಮೂಡೀತು.
ಹೀಗೆ ರಾಮಚಂದ್ರನು ಸರ್ವ ಪ್ರಕಾರದಿಂದಲೂ ಪರಿಪೂರ್ಣನಿದ್ದಾನೆ. ಯುವ
ರಾಜನಾಗಲು ಅರ್ಹನಿದ್ದಾನೆ. ಸಾಗರಕ್ಕೆ ಬೊಗಸೆಯ ಅರ್ಥ್ಯವವಂತೆ
ಸೂರ್ಯನಿಗೆ ಸೊಡರನ್ನೆತ್ತಿ ಪೂಜೆ ಸಲ್ಲಿಸುವಂತೆ-ಈ ಜಗತ್ಪತಿಗೆ, ಈ ಗುಣ
ಧಾಮನಿಗೆ ರಾಷ್ಟ್ರದ ಯುವರಾಜ ಪದವಿಯನ್ನರ್ಪಿಸು. ರಾಷ್ಟ್ರದ ಜನರ ಬಯಕೆ
ಈಡೇರಲಿ."
೩೭
ಹೀಗೆ ವಸಿಷ್ಠಾದಿಗಳಿಂದ ಪ್ರೇರಿತನಾದ ಮಹಾರಾಜನು ರಾಮನಿಗೆ
ಯುವರಾಜ ಪದವಿಯನ್ನೀಯುವುದಾಗಿ ಸಭೆಯಲ್ಲಿ ಘೋಷಿಸಿದನು.
ಪೌರರು ನಲಿದಾಡಿದರು
ರಾಜನ ಘೋಷಣೆಯನ್ನು ಕೇಳಿದ ಸಭೆಗೆ ಸಭೆಯೇ ಜಯಜಯಕಾರ
ವನ್ನು ಮಾಡಿತು. ತನ್ನ ತನಯನ ಮೇಲೆ ಪ್ರಜೆಗಳಿಗಿರುವ ಒಲವನ್ನು ಕಂಡು
ಮಹಾರಾಜನ ಕಣ್ಣುಗಳು ಹನಿಗೂಡಿದವು. ಮುಂದಿನ ಸಿದ್ಧತೆಗಾಗಿ ರಾಜ
ವಸಿಷ್ಠಾದಿಗಳನ್ನು ವಿನಂತಿಸಿಕೊಂಡ:
66
ಈ ಚೈತ್ರಮಾಸ ಅಭಿಷೇಕಕ್ಕೆ ಪ್ರಶಸ್ತವಾದ ಕಾಲ. ಪ್ರಕೃತಿದೇವಿ
ಹೂ-ತಳಿರುಗಳಿಂದ ರಾಮನ ಅಭಿಷೇಕೋತ್ಸವಕ್ಕೆಂದೇ ಸಿಂಗರಿಸಿಕೊಂಡಂತಿದೆ.
ನಾಳೆಯ ದಿನವೇ ಅಭಿಷೇಕದ ಕಾವ್ಯವನ್ನು ಪೂರಯಿಸುವುದು ಚೆನ್ನು, ಆದ
ಕ್ಕಾಗಿ ಎಲ್ಲ ಅಭಿಷೇಕ ಸಾಮಗ್ರಿಗಳನ್ನು ತರಿಸಿಕೊಳ್ಳಿ. "
ದಶರಥನ ಆಶಯವನ್ನರಿತ ವಸಿಷ್ಠ ಮಿತ್ರರು ಕೂಡಲೇ ಅಭಿಷೇಕ
ಸಾಮಗ್ರಿಗಳನ್ನು ಬರಿಸಿಕೊಂಡರು. ಹೊಸ ತರದ ಬಟ್ಟೆ-ಬರೆಗಳು ಮುತ್ತು-
ರತ್ನಗಳು ಬಹು ಬಗೆಯ ಒಡವೆ-ತೊಡವೆಗಳು ಬಂಗಾರದ ಕೊಡಗಳಲ್ಲಿ
ತುಂಬಿದ ನೂರಾರು ತೀರ್ಥೋದಕಗಳು ಮುಂತಾದ ಎಲ್ಲ ಸಾಮಗ್ರಿಗಳೂ
ಚತುರರಾದ ದೂತರಿಂದ ಅಣಿಗೊಳಿಸಲ್ಪಟ್ಟವು.
ಮಹಾರಾಜ, ದಶರಥನು-ರಾಮನನ್ನು ತನ್ನ ಬಳಿ ಕರತರುವಂತೆ
ಸುಮಂತ್ರವನ್ನು ಆಜ್ಞಾಪಿಸಿದನು. ಸುಮಂತ್ರನು ರಥವೇರಿ ರಾಮನ ಬಳಿ
ಸಾರಿ ವಿನಯದಿಂದ ಮಹಾರಾಜನ ಆಣತಿಯನ್ನು ತಿಳಿಸುವುದೇ ತಡ-
ರಾಮಚಂದ್ರ ರಥವೇರಿ ತಂದೆಯ ಬಳಿಗೆ ನಡೆದನು.