This page has been fully proofread once and needs a second look.

ಮಿಂಚಿನಬಳ್ಳಿ
 

 
ಆದಷ್ಟು ಬೇಗನೆ ಕಾರ್ಯರೂಪಕ್ಕೆ ಬರುವಂತಾಗಲಿ ಎನ್ನುವುದೇ ಎಲ್ಲರ
 
ಬಯಕೆ.
 
೩೬
 

 
ಪ್ರಜಾಪಾಲಕ, ನಿನ್ನ ಮಗನಲ್ಲಿ ತುಂಬಿರುವ ಅಕೃತ್ರಿಮ ಗುಣಗಳಿಂದ
ಅವನು ಪ್ರಜೆಗಳ ಮನಸ್ಸ- ನ್ನು ಸೂರೆಗೊಂಡಿದ್ದಾನೆ. ಅಯಸ್ಕಾಂತ ಶಿಲೆಯಂತೆ
ಅವನು ಆಕರ್ಷಣಶೀಲನಾಗಿದ್ದಾನೆ. ನಿನ್ನ ಕುಮಾರನೆಂದರೆ - ನಮಗೆಲ್ಲರಿಗೂ
ಪರಾಯಣನಾದ ಪರಮಪುರುಷ ನಾರಾಯಣನಲ್ಲವೆ ? ಭೂಮಿಯ ಮಳಲ-
ನ್ನಾದರೂ ಲೆಕ್ಕಿಸುವುದು ಸಾಧ್ಯ. ಅವನ ಗುಣಗಳನ್ನು ಇಷ್ಟೆಂದು ಎಣಿಸಿದವ
ರುಂಟೆ ? ಅವನು ಅಣುವಿನಲ್ಲೂ ಇರುವ ಅಣುರೂಪಿ; ಜಗತ್ತನ್ನೆ ತುಂಬಿರುವ
ವಿಶ್ವರೂಪಿ ! ಬ್ರಹ್ಮಾಂಡವನ್ನೇ ಹೊತ್ತಿರುವ ಅವನಿಗಿಂತ ಗುರುತರವಾದ
ವಸ್ತು ಇನ್ನೊಂದಿದೆಯೆ ? ಆ ಹರಿಯೇ ಹೂವಿಗಿಂತ ಹಗುರವೂ ಆಗಿಲ್ಲವೆ ?
ಅವನು ಹುಬ್ಬು ಹಾರಿಸಿದರೆ ಸಾಕು- ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳು ನಡೆ
-
ಯುತ್ತವೆ. ಇವನ ಕೀರ್ತಿ-ಚಂದ್ರನಿಗೆ ಪಕ್ಷಗಳಲ್ಲಿ ವೃದ್ಧಿ ಪ್ಹ್ರಾಸಗಳಿಲ್ಲ; ಕಲಂಕದ
ಲೇಶವೂ ಇಲ್ಲ. ಇದರೆದುರು ಈ ಬಾನಿನ ಚಂದ್ರಮ ಎಲ್ಲಿಯ ಎಣೆ ?
 

 
ತಾಯಿ ಲಕ್ಷ್ಮೀದೇವಿ ಜನಕನ ಮಗಳಾಗಿ ಭೂಮಿ- ಯಲ್ಲಿ ಮೂಡಿ
ಬಂದುದು ಇವನ ಸೊಬಗಿಗೆ ಮರುಳಾಗಿಯಲ್ಲವೆ? ಅಂಥ ಅನುಪಮವಾದ

ರೂಪಶ್ರೀಯನ್ನು ಕಣ್ಣಾರೆ ಕಾಣುವ ಭಾಗ್ಯಶಾಲಿಗಳು ನಾವು ! "

 
ಹಿಂದೆ ಇದ್ದ- ಈಗ ಇರುವ- ಮುಂದೆ ಬರುವ ಎಲ್ಲ ವಸ್ತುಗಳನ್ನೂ-
ಕೈಯಲ್ಲಿನ ಹೂ ಮಾಲೆಯನ್ನೆಂಬಂತೆ -ನಿನ್ನ ಮಗ ಕಾಣಬಲ್ಲ. ಅವನ ತಿಳಿವಿ
ಗೊಂದು ಎಣೆಯೆಂಬುದುಂಟೆ ? ಎಲ್ಲೆಯೆಂಬುದುಂಟೆ ?
 

 
ನಿಜಾನಂದಮಗ್ನನಾದ ನಿನ್ನ ತನಯನಿಗೆ ರಾಜ್ಯ- ಭೋಗದ ಸುಖವಾ
ದರೂ ಏತಕ್ಕೆ ಬೇಕು ? ವೇದ- ಗಳಲ್ಲಿ ಮತ್ತು ನೀತಿ ಶಾಸ್ತ್ರಗಳಲ್ಲಿ ಹೇಳಿದ
ಎಲ್ಲ ಗುಣಗಳಿಗೂ ನಿಜವಾದ ನೆಲೆ-ಆಸರೆ ನಿನ್ನ ಮಗನಾದ ರಾಮಚಂದ್ರ
ನೊಬ್ಬನೆ. ಬ್ರಹ್ಮನ ಪರಮ ಪದವಿ, ಶಿವನ ಓಜಸ್ಸು, ಇಂದ್ರನ ಐಸಿರಿ,
ಎಲ್ಲರ ಎಲ್ಲ ಗುಣಗಳೂ ನಿನ್ನ ಮಗನ ಮಹಾಗುಣದ ಅಂಶಗಳು. ಆ ಮಹಾ
ಸಾಗರದ ಬಿಂದುಗಳು, ಸೀರ್ಪನಿಗಳು.
 

 
ಕಾಮಾದಿ ಷಡೈಡ್ವೈರಿಗಳನ್ನು ನಿಗ್ರಹಿಸಿದ ದಾಂತ ನಮ್ಮ ರಾಮಚಂದ್ರ.
'ಆದಿತ್ಯವರ್ಣಂ ತಮಸಃ ಪರಸ್ತಾತ್' ಎಂದು ವೇದಗಳೇ ಕೊಂಡಾಡಿದ ಅವ