This page has not been fully proofread.

ಮಿಂಚಿನಬಳ್ಳಿ
 
ಆದಷ್ಟು ಬೇಗನೆ ಕಾರ್ಯರೂಪಕ್ಕೆ ಬರುವಂತಾಗಲಿ ಎನ್ನುವುದೇ ಎಲ್ಲರ
 
ಬಯಕೆ.
 
೩೬
 
ಪ್ರಜಾಪಾಲಕ, ನಿನ್ನ ಮಗನಲ್ಲಿ ತುಂಬಿರುವ ಅಕೃತ್ರಿಮ ಗುಣಗಳಿಂದ
ಅವನು ಪ್ರಜೆಗಳ ಮನಸ್ಸನ್ನು ಸೂರೆಗೊಂಡಿದ್ದಾನೆ. ಅಯಸ್ಕಾಂತ ಶಿಲೆಯಂತೆ
ಅವನು ಆಕರ್ಷಣಶೀಲನಾಗಿದ್ದಾನೆ. ನಿನ್ನ ಕುಮಾರನೆಂದರೆ- ನಮಗೆಲ್ಲರಿಗೂ
ಪರಾಯಣನಾದ ಪರಮಪುರುಷ ನಾರಾಯಣನಲ್ಲವೆ ? ಭೂಮಿಯ ಮಳಲ-
ನ್ನಾದರೂ ಲೆಕ್ಕಿಸುವುದು ಸಾಧ್ಯ. ಅವನ ಗುಣಗಳನ್ನು ಇಷ್ಟೆಂದು ಎಣಿಸಿದವ
ರುಂಟೆ ? ಅವನು ಅಣುವಿನಲ್ಲೂ ಇರುವ ಅಣುರೂಪಿ; ಜಗತ್ತನ್ನೆ ತುಂಬಿರುವ
ವಿಶ್ವರೂಪಿ ! ಬ್ರಹ್ಮಾಂಡವನ್ನೇ ಹೊತ್ತಿರುವ ಅವನಿಗಿಂತ ಗುರುತರವಾದ
ವಸ್ತು ಇನ್ನೊಂದಿದೆಯೆ ? ಆ ಹರಿಯೇ ಹೂವಿಗಿಂತ ಹಗುರವೂ ಆಗಿಲ್ಲವೆ ?
ಅವನು ಹುಬ್ಬು ಹಾರಿಸಿದರೆ ಸಾಕು ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳು ನಡೆ
ಯುತ್ತವೆ. ಇವನ ಕೀರ್ತಿ-ಚಂದ್ರನಿಗೆ ಪಕ್ಷಗಳಲ್ಲಿ ವೃದ್ಧಿ ಪ್ರಾಸಗಳಿಲ್ಲ; ಕಲಂಕದ
ಲೇಶವೂ ಇಲ್ಲ. ಇದರೆದುರು ಈ ಬಾನಿನ ಚಂದ್ರಮ ಎಲ್ಲಿಯ ಎಣೆ ?
 
ತಾಯಿ ಲಕ್ಷ್ಮೀದೇವಿ ಜನಕನ ಮಗಳಾಗಿ ಭೂಮಿಯಲ್ಲಿ ಮೂಡಿ
ಬಂದುದು ಇವನ ಸೊಬಗಿಗೆ ಮರುಳಾಗಿಯಲ್ಲವೆ? ಅಂಥ ಅನುಪಮವಾದ
ರೂಪಶ್ರೀಯನ್ನು ಕಣ್ಣಾರೆ ಕಾಣುವ ಭಾಗ್ಯಶಾಲಿಗಳು ನಾವು ! "
ಹಿಂದೆ ಇದ್ದ ಈಗ ಇರುವ ಮುಂದೆ ಬರುವ ಎಲ್ಲ ವಸ್ತುಗಳನ್ನೂ-
ಕೈಯಲ್ಲಿನ ಹೂ ಮಾಲೆಯನ್ನೆಂಬಂತೆ ನಿನ್ನ ಮಗ ಕಾಣಬಲ್ಲ. ಅವನ ತಿಳಿವಿ
ಗೊಂದು ಎಣೆಯೆಂಬುದುಂಟೆ ? ಎಲ್ಲೆಯೆಂಬುದುಂಟೆ ?
 
ನಿಜಾನಂದಮಗ್ನನಾದ ನಿನ್ನ ತನಯನಿಗೆ ರಾಜ್ಯಭೋಗದ ಸುಖವಾ
ದರೂ ಏತಕ್ಕೆ ಬೇಕು ? ವೇದಗಳಲ್ಲಿ ಮತ್ತು ನೀತಿ ಶಾಸ್ತ್ರಗಳಲ್ಲಿ ಹೇಳಿದ
ಎಲ್ಲ ಗುಣಗಳಿಗೂ ನಿಜವಾದ ನೆಲೆ-ಆಸರೆ ನಿನ್ನ ಮಗನಾದ ರಾಮಚಂದ್ರ
ನೊಬ್ಬನೆ. ಬ್ರಹ್ಮನ ಪರಮ ಪದವಿ, ಶಿವನ ಓಜಸ್ಸು, ಇಂದ್ರನ ಐಸಿರಿ,
ಎಲ್ಲರ ಎಲ್ಲ ಗುಣಗಳೂ ನಿನ್ನ ಮಗನ ಮಹಾಗುಣದ ಅಂಶಗಳು. ಆ ಮಹಾ
ಸಾಗರದ ಬಿಂದುಗಳು, ಸೀರ್ಪನಿಗಳು.
 
ಕಾಮಾದಿ ಷಡೈರಿಗಳನ್ನು ನಿಗ್ರಹಿಸಿದ ದಾಂತ ನಮ್ಮ ರಾಮಚಂದ್ರ.
'ಆದಿತ್ಯವರ್ಣಂ ತಮಸಃ ಪರಸ್ತಾತ್' ಎಂದು ವೇದಗಳೇ ಕೊಂಡಾಡಿದ ಅವ