2023-03-15 15:35:25 by ambuda-bot
This page has not been fully proofread.
ಅಯೋಧ್ಯಾಕಾಂಡ
ಜಗತ್ಪತಿಗೆ ಯುವರಾಜ ಪದವಿ
ಸೀತಾ-ರಾಮರ ಜೋಡಿ ಬೆಳದಿಂಗಳು-ಚಂದ್ರಮರ ಜೋಡಿಯಂತಿತ್ತು.
ಎಂತಲೇ ಮಹಾರಾಜ ದಶರಥನು ಕಡಲಿನಂತೆ ಅನಂದಪೂರದಲ್ಲಿ ತುಂಬಿ
ಹೋದನು. ಭರತ-ಶತ್ರುಘ್ನರು ಕೇಕಯ ರಾಜನ ಬಳಿಯೇ ನೆಲಸಿದ್ದರು.
ಮನೆಮನೆಯಲ್ಲಿ, ಊರು-ಕೇರಿಗಳಲ್ಲಿ, ಬೀದಿ-ಅಂಗಡಿಗಳಲ್ಲಿ, ಎಲ್ಲೆಲ್ಲ-
ಎಲ್ಲರೂ ರಾಮಭದ್ರನನ್ನು ಕೊಂಡಾಡುವವರೆ. ರಾಮನ ಗುಣಗಾನವನ್ನು
ಕೊಂಡಾಡುವವರೆ. ರಾಮನ ಗುಣಗಾನವನ್ನು ಕೇಳಿ ರಾಜನ ಹೃದಯ
ತುಂಬಿ ಬಂದಿತು. ಕ್ರಮೇಣ ರಾಮನಿಗೆ ರಾಜ್ಯಾಭಿಷೇಕ ಮಾಡಿಸಬೇಕು
ಎನ್ನುವ ಯೋಚನೆ ತಲೆಯಲ್ಲಿ ಸುಳಿಯಿತು. ಕೂಡಲೆ ಮಂತ್ರಿ ಪ್ರಮುಖ
ರೊಡನೆ ಈ ವಿಷಯವನ್ನು ಚರ್ಚಿಸಿ ಕೊನೆಗೊಂದು ಸಭೆ ಕರೆದನು. ಅದಕ್ಕೆ
ಎಲ್ಲ ಮಾಂಡಲಿಕ ರಾಜರಿಗೂ ಪ್ರಜೆಗಳಿಗೂ ಆಹ್ವಾನ ಕಳುಹಿದನು. ಜನರೆಲ್ಲ
ನೆರೆದ ಸಭೆಯಲ್ಲಿ ಮಹಾರಾಜ ತನ್ನ ಬಯಕೆಯ ಒತ್ತಡವನ್ನು ತಡೆಹಿಡಿದು
ಶಾಂತನಾಗಿ ನುಡಿದನು:
"ನನ್ನ ಕುಮಾರ ರಾಮಚಂದ್ರು ಜವ್ವನದ ಹೊಸಿತಿಲನ್ನು ಏರುವ ಹಂತ
ದಲ್ಲಿದ್ದಾನೆ. ಅವನನ್ನು ಯುವರಾಜನನ್ನಾಗಿ ಮಾಡಬೇಕೆಂದು ನನ್ನ ಬಯಕೆ.
ಕೊನೆಯ ತೀರ್ಪು ನಿಮ್ಮೆಲ್ಲರ ಒಪ್ಪಿಗೆಯ ಮೇಲಿದೆ."
ಈ ಮಾತನ್ನಾಲಿಸಿದ ಸಭಾಸದರ ಮೈಯೆಲ್ಲ ಪುಲಕಗೊಂಡಿತು.
ಕಂಣಂಚಿನಲ್ಲಿ ಆನಂದಾಶ್ರು ಚಿಮ್ಮಿತು. ಮನದಲ್ಲಿ ರಾಮನ ಭವ್ಯ ಮೂರ್ತಿ
ನಲಿದಾಡಿತು. ಎಲ್ಲರೂ ಅರಳಿದ ಮೋರೆಯಿಂದ ರಾಜನ ಸೂಚನೆಯನ್ನು
'ಸಾಧು, ಸಾಧು' ಎಂದು ಕೊಂಡಾಡಿದರು.
ಸಭೆಯಲ್ಲಿ ಸೇರಿದ ಜನವೃಂದ ಏನನ್ನೋ ಹೇಳಲು ಬಯಸಿದಂತಿತ್ತು.
ಇಂಗಿತವನ್ನರಿತ ವೃದ್ಧ ವಿದ್ವಾಂಸರಾದ ವಸಿಷ್ಠಾದಿಗಳು ತಮ್ಮ ಪಕ್ವವಾಣಿಯಲ್ಲಿ
ಸಭೆಯ ಅಭಿಪ್ರಾಯವನ್ನು ಪಡಿಮೂಡಿಸಿದರು.
"ಮಹಾರಾಜ, ಈ ಜನಪದದ ಪ್ರತಿಯೊಬ್ಬ ಪ್ರಜೆಯೂ ಮಾನಸಿಕವಾಗಿ
ದಿನವೂ ರಾಮಚಂದ್ರನಿಗೆ ಅಭಿಷೇಕಗೈಯುತ್ತದೆ. ಆ ಕೆಲಸವು ನಿನ್ನ ಕೈಯಿಂದ