This page has been fully proofread once and needs a second look.

ಮಿ೦ಚಿನಬಳ್ಳಿ
 
ಬಾಣವನ್ನು ಹೂಡಿದನು. ದೇವತೆಗಳೂ ಮುನಿಗಳೂ ಈ ಲೀಲಾ ನಾಟಕ
ವನ್ನು ನೋಡಲು ಗಗನದಲ್ಲಿ ಮುಕುರಿದ್ದರು.
 
೩೪
 

 
"ಪರಮಪುರುಷನಾದ ಪರಶುರಾಮನೆ, ನಿನ್ನನ್ನು ಈ ಬಾಣ ಭೇದಿಸ
ಲಾರದು" ಎಂದು ರಾಮನು ಬಾಣ- ವನ್ನು ಬಿಡಲುದ್ಯುಕ್ತನಾದಾಗ ಪರಶು
ರಾಮನು ದೇವಗುಹ್ಯವೊಂದನ್ನು ಹೊರಗೆಡಹಿದನು:
 

 
"
ಕಾರಣಾಂತರದಿಂದ ನನ್ನ ಎದೆಯಲ್ಲಿ ಅತುಲ- ನೆಂಬ ಒಬ್ಬ ಅಸುರನು
ನೆಲಸಿದ್ದಾನೆ. ನಿನ್ನ ಈ ಕೂರ್ಗಣೆಯನ್ನು ಅವನ ಮೇಲೆ ಎಸೆ, ನನ್ನನ್ನಲ್ಲ
-
ದಿದ್ದರೂ ಅವನನ್ನು ಅದು ಭೇದಿಸಬಲ್ಲುದು. "
 

 
ರಾಮನು ತನ್ನ ನಿಶಿತವಾದ ಬಾಣದಿಂದ ಅತುಲ- ನನ್ನು ಭಸ್ಮವಾಗಿಸಿದನು.
ತನ್ನ ಉದ್ದೇಶವನ್ನು ಸಾಧಿಸಿದವನಂತೆ ಪರಶುರಾಮನು 'ನೀನು ಸಾಕ್ಷಾತ್

ನಾರಾಯಣನ ಅವತಾರ ಎನ್ನುವುದು ಜನರಿಗೆ ಇದರಿಂದ ತಿಳಿದಂತಾಯಿತು
' ಎಂದು ನುಡಿದು ಮಹೇಂದ್ರದ್ವೀಪಕ್ಕೆ ಮರಳಿದನು.
 

 
ಇದು ಭಗವಂತನ ಲೀಲೆ ! ಭಗವದ್ರೂಪಗಳಲ್ಲಿ ಭೇದವೆಲ್ಲಿಂದ ಬರಬೇಕು?
ಎಂದುಕೊಳ್ಳುತ್ತ ದೇವತೆಗಳು ಸ್ವರ್ಗಕ್ಕೆ ಮರಳಿದರು.
 

 
ಇಬ್ಬನಿಗೆ ಮುದುಡಿದ್ದ ತಾವರೆ ಮುಂಜಾವದ ಹೊಂಬಿಸಿಲಿಗೆ ಅರಳು
ವಂತೆ ದಶರಥನ ಮುಖ ಪುತ್ರವಿಜಯದಿಂದ ನಳನಳಿಸಿತು. ಪರಿವಾರಸಮೇತ

ನಾದ ರಾಜ ಆನಂದದಿಂದ ರಾಜಧಾನಿಗೆ ತೆರಳಿದನು.
 

 
ಅಯೋಧ್ಯೆಯನ್ನು ತಳಿರುತೋರಣಗಳಿಂದ ಅಲಂಕರಿಸಿದ್ದರು. ಹೂ
ಗಳನ್ನು ಚೆಲ್ಲಿ ಬೀದಿಗಳನ್ನು ಸಿಂಗರಿಸಿದ್ದರು. ಪುರಜನರು ವಿವಿಧವಾದ್ಯಗಳಿಂದ

ಪೂರ್ಣಕುಂಭದೊಡನೆ ವಧೂವರರನ್ನು ಎದುರು- ಗೊಂಡರು.
 

 
ನಾಲ್ವರೂ ವಧೂವರರು ಬ್ರಾಹ್ಮಣರ ಆಶೀರ್ವಾದ- ವನ್ನು ಪಡೆದು ಸಂತಸ
ಗೊಂಡರು. ಸೀತೆ ಎಲ್ಲ ಮುತ್ತೈದೆಯರಿಗೂ ಮನೆಮಾತಾದಳು. ಅವರು
"

'
ಸೀತೆಯೆಂದರೆ ಗುಣದಲ್ಲಿ ಸಾಕ್ಷಾತ್ ಲಕ್ಷ್ಮಿದೇವಿ' ಎಂದಾಡಿಕೊಳ್ಳುತ್ತಿದ್ದರು !
ಅವರಂದುಕೊಂಡದ್ದು ನಿಜವೇ ತಾನೆ ? ಶ್ವೇತದ್ವೀಪದಲ್ಲಿ ರಮೆಯೊಡನೆ

ರಂಜಿಸುವ ಹರಿಯೇ ಜಂಬುದ್ವೀಪದಲ್ಲಿ ಜನಕಜೆ- ಯೊಡನೆ ಶೋಭಿಸಿದನು.